September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿನಿಧನವರದಿ

ಬೆಳ್ತಂಗಡಿ :ಬೈಕ್- ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ನಾವರ ಗ್ರಾಮದ ಯುವಕ ಸಾವು

ಬೆಳ್ತಂಗಡಿ: ಕಳೆದ ಮೂರು ತಿಂಗಳ ಹಿಂದೆ ಸುಲ್ಕೇರಿಯಲ್ಲಿ ನಡೆದ ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಾವರ ಗ್ರಾಮದ ಯುವಕ ವಿಘ್ನೇಶ್ (23 ವ) ಚಿಕಿತ್ಸೆ ಫಲಕಾರಿಯಾಗದೆ ಇಂದು ಅ.25, ಬೆಳಗ್ಗಿನ ಜಾವ ಉಜಿರೆಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಸುಲ್ಕೇರಿಯಲ್ಲಿ ಕಳೆದ ಮೂರು ತಿಂಗಳ ಹಿಂದೆ ಕಾರು ಮತ್ತು ಬೈಕ್ ನಡುವೆ ಡಿಕ್ಕಿ ಸಂಭವಿಸಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡಿದ್ದರು. ಕೂಡಲೇ ಅವರನ್ನು ಸ್ಥಳಿಯರ ಸಹಕಾರದಿಂದ ಮಂಗಳೂರಿನ ಖಾಸಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋಮ ಸ್ಥಿತಿಯಲ್ಲಿದ್ದ ಅವರಿಗೆ ಚಿಕಿತ್ಸೆ ನೀಡುತ್ತಿದ್ದು, ನಂತರ ಉಜಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಊರಿನ ಸಂಘ ಸಂಸ್ಥೆಗಳು, ದಾನಿಗಳು ವೈದ್ಯಕೀಯ ನೆರವು ನೀಡಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಇಂದು ಬೆಳಗ್ಗಿನ ಜಾವ ನಿಧನರಾದರು.

ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

Related posts

ಪತ್ರಕರ್ತ ರಂಜಿತ್ ಮಡಂತ್ಯಾರ್ ರಿಗೆ ರಾಜ್ಯ ಮಟ್ಟದ ಯುವ ಸಾಧಕ ಪ್ರಶಸ್ತಿ

Suddi Udaya

ಹುಣ್ಸೆಕಟ್ಟೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಕ್ಕೆ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆ

Suddi Udaya

ಮೇ 4: ವಿದ್ಯುತ್ ನಿಲುಗಡೆ

Suddi Udaya

ವಿದ್ಯಾಮಾತಾದಲ್ಲಿ ತರಬೇತಿ ಪಡೆದ ಬಸವರಾಜ ಮುದವಿ ಸಬ್ ಇನ್ಸ್ಪೆಕ್ಟರ್ ಹುದ್ದೆಗೆ ಆಯ್ಕೆ

Suddi Udaya

ಕುವೆಟ್ಟು: ಕೇದಳಿಕೆ ನಿವಾಸಿ ಬಾಬು ನಾಯ್ಕ್ ನಿಧನ

Suddi Udaya

ಬೆಳಾಲು : ವಿಶ್ವವಿಕಲಚೇತನರ ದಿನಾಚರಣೆ ಹಾಗೂ ವಿಶೇಷ ಗ್ರಾಮ ಸಭೆ

Suddi Udaya
error: Content is protected !!