September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ರೇಷ್ಮೆರೋಡ್ ಶಕ್ತಿ ಯುವಕ ಮಂಡಲದಿಂದ ಬಡ ಕುಟುಂಬಕ್ಕೆ ಮನೆ ನಿರ್ಮಿಸಿ ಕೊಡುವ ಪ್ರಯುಕ್ತ ಭೂಮಿ ಪೂಜೆ

ಗೇರುಕಟ್ಟೆ: ಶಕ್ತಿ ಯುವಕ ಮಂಡಲ ರೇಷ್ಮೆರೋಡ್ ಗೇರುಕಟ್ಟೆ, ಇದರ ರಜತ ಮಹೋತ್ಸವದ ಪ್ರಯುಕ್ತ ಶಕ್ತಿ ಯುವಕಮಂಡಲ ಮತ್ತು ಮಹಾದಾನಿಗಳ ಸಹಕಾರದೊಂದಿಗೆ ಬಡ ಕುಟುಂಬದ ಶ್ರೀಮತಿ ಸೀತಾ ಇವರಿಗೆ ಮನೆ ನಿರ್ಮಿಸಿ ಕೊಡುವ ಪ್ರಯುಕ್ತ ಭೂಮಿ ಪೂಜೆಯನ್ನು ಅ. 24 ರಂದು ನಡುಮನೆ ಶ್ರೀನಿವಾಸ ಪುರೋಹಿತರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಕಳಿಯ ಗ್ರಾಮ ಪಂಚಾಯಿತಿನ ಅಧ್ಯಕ್ಷ ದಿವಾಕರ ಪೂಜಾರಿ ಭಾಗವಹಿಸಿ ಶುಭ ಹಾರೈಸಿದರು. ಶಕ್ತಿ ಯುವಕಮಂಡಲದ ಅಧ್ಯಕ್ಷ ಉಮೇಶ್ ಕುಲಾಲ್, ಕುವೆಟ್ಟು ಗ್ರಾಮ ಪಂಚಾಯಿತಿನ ಸದಸ್ಯರಾದ ಸದಾನಂದ ಮೂಲ್ಯ, ಪ್ರಧಾನ ಕಾರ್ಯದರ್ಶಿಯಾದ ತಾರಾನಾಥ ನಾಯ್ಕ್, ಕಾರ್ಯದರ್ಶಿಯಾದ ಸಂತೋಷ ಭಾರ್ಗವಿ, ಕ್ರೀಡೆ ಕಾರ್ಯದರ್ಶಿಯಾದ ಸುದೇಶ್ ಆರ್ ಗೌಡ, ಮಾಧ್ಯಮ ಕಾರ್ಯದರ್ಶಿಯಾದ ಸತೀಶ್ ಸಾಲಿಯಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾದ ಯೋಗೀಶ್ ಕುಮಾರ್, ಕಳಿಯ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ನಿರ್ದೇಶಕರಾದ ದೇವಣ್ಣ ಮೂಲ್ಯ, ಕಳಿಯ ಹಾಲು ಉತ್ಪಾದಕರ ಸಹಕಾರಿ ಸಂಘದ ಉಪಾಧ್ಯಕ್ಷರಾದ , ಸಿರಿಲ್ ಪಿಂಟೋ ಹಾಗೂ ಶಕ್ತಿ ಯುವಕಮಂಡಲದ ಪದಾಧಿಕಾರಿಗಳು, ಹಾಗೂ ಊರಿನ ಗಣ್ಯರು ಉಪಸ್ಥಿತರಿದ್ದು ಶುಭ ಹಾರೈಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಉಗ್ರಾಣ ಉದ್ಘಾಟನೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಗುರುಮಿಠ್ಕಲ್ ಕ್ಷೇತ್ರದ ಶಾಸಕ ಶರಣ ಗೌಡ ಕಂದಕೂರ ಭೇಟಿ

Suddi Udaya

ಬೆಳ್ತಂಗಡಿ ಬಿಜೆಪಿ ಕಚೇರಿಯಲ್ಲಿ ಕಾರ್ಯಕಾರಿಣಿ ಸಭೆ: ಮಾ.30 ರಂದು ಬಿಜೆಪಿ ಬೆಳ್ತಂಗಡಿ ಮಂಡಲ ಪದಾಧಿಕಾರಿಗಳ ಪದಗ್ರಹಣ

Suddi Udaya

ಉರುವಾಲುಪದವು: ಶಿವಾಜಿನಗರ ಶ್ರೀ ಮಹಮ್ಮಾಯಿ ದೇವಿಯ ಪ್ರತಿಷ್ಠಾ ಮಹೋತ್ಸವಕ್ಕೆ ಚಾಲನೆ

Suddi Udaya

ಇಂದಬೆಟ್ಟು: ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ವರ್ಷಾವಧಿ ಜಾತ್ರೆ ಮತ್ತು ಪ್ರತಿಷ್ಠಾ ಮಹೋತ್ಸವ ಪ್ರಾರಂಭ

Suddi Udaya

ಜ. 7 -12 : ಪೆರ್ಲ ಬೈಪಾಡಿ ಶ್ರೀ ಸಿದ್ದಿವಿನಾಯಕ ದೇವಸ್ಥಾನದಲ್ಲಿ ಪುನರ್ ಪ್ರತಿಷ್ಠಾಷ್ಟಬಂಧ ಬ್ರಹ್ಮಕಲಶೋತ್ಸವ

Suddi Udaya
error: Content is protected !!