ಜಿಲ್ಲಾ ಮಟ್ಟದ ಅಂತರ್ ಐಟಿಐ ತ್ರೋಬಾಲ್ ಪಂದ್ಯಾಟ: ಎಸ್ ಡಿ ಎಂ ಮಹಿಳಾ ಐಟಿಐ ಪ್ರಥಮ

Suddi Udaya

ಬೆಳ್ತಂಗಡಿ: ಸಂತ ಅಲೋಶಿಯಸ್ ಐಟಿಐ ಯ ಹಳೆ ವಿದ್ಯಾರ್ಥಿ ಸಂಘ ಹಾಗೂ ರಿಯಲ್ ಎಸ್ಟೇಟ್ ಗ್ರೂಪ್ ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಅ.28 ರಂದು ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಡಿಗ್ರಿ ಕಾಲೇಜಿನ ಮುಂಭಾಗ) ನಡೆದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಅಂತರ್ ಐಟಿಐ (ಪ್ರಸ್ತುತ ಸಾಲಿನಲ್ಲಿ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ) ವಾಲಿಬಾಲ್( ಹುಡುಗರಿಗೆ) ಹಾಗೂ ತ್ರೋಬಾಲ್ ( ಹುಡುಗಿಯರಿಗೆ) ಪಂದ್ಯಾಟವನ್ನು ನಡೆಸಲಾಯಿತು.

ಹುಡುಗಿಯರ ತ್ರೋಬಾಲ್ ಪಂದ್ಯಾವಳಿಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆ ಉಜಿರೆಯ ವಿದ್ಯಾರ್ಥಿನಿಯರು ಪ್ರಥಮ ಸ್ಥಾನ ಪಡೆದು ಶೀಲ್ಡ್ ಹಾಗೂ ರೂ. 4 ಸಾವಿರವನ್ನು ತಮ್ಮದಾಗಿಸಿಕೊಂಡರು.

ಕು| ರಮ್ಲತ್ ಆಲ್ ರೌಂಡರ್ ಆಗಿ ಕು. ಶಾಲಿನಿ ಡಿ. ಉತ್ತಮ ಎಸೆತಗಾರ್ತಿಯಾಗಿ ಆಯ್ಕೆ ಆಗಿರುತ್ತಾರೆ.

ವಿಜೇತ ವಿದ್ಯಾರ್ಥಿನಿಯರನ್ನು ಸಂಸ್ಥೆಯ ಅಧ್ಯಕ್ಷರಾದ ಡಾ.ಡಿ ವೀರೇಂದ್ರ ಹೆಗ್ಗಡೆಯವರು ಹಾಗೂ ಮಾತೃಶ್ರಿ ಹೇಮಾವತಿ ವಿ. ಹೆಗ್ಗಡೆಯವರು ಹಾಗೂ ಗೌರವಾನ್ವಿತ ಕಾರ್ಯದರ್ಶಿಗಳಾದ ಡಿ. ಹರ್ಷೇಂದ್ರ ಕುಮಾರ್ ಹಾಗೂ ಸತೀಶ್ಚಂದ್ರ ಎಸ್ ಇವರು ಅಭಿನಂದನೆಗಳನ್ನು ಸಲ್ಲಿಸಿದರು.

ದೈಹಿಕ ನಿರ್ದೇಶಕರಾದ ರಮೇಶ್ ಇವರು ವಿದ್ಯಾರ್ಥಿನಿಯರಿಗೆ ತರಬೇತಿಯನ್ನು ನೀಡಿದ್ದರು

Leave a Comment

error: Content is protected !!