ಶಿಶಿಲ : ಸೃಷ್ಟಿ ಸಂಜೀವಿನಿ ಮಹಿಳಾ ಒಕ್ಕೂಟ ಶಿಶಿಲದ ಮಹಾಸಭೆ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಒಕ್ಕೂಟದ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಅ.31ರಂದು ನಡೆಯಿತು.
ಮಹಾಸಭೆಯಲ್ಲಿ ಒಕ್ಕೂಟದ ಅಧ್ಯಕ್ಷರು, ಉಪಾಧ್ಯಕ್ಷರು, ಕಾರ್ಯದರ್ಶಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರಾದ ಪ್ರತಿಮಾ, ವಲಯ ಮೇಲ್ವಿಚಾರಕರಾದ ಜಯಾನಂದ್ , ವೀಣಾಶ್ರೀ, ಪಂಚಾಯತ್ ಅಧ್ಯಕ್ಷರು ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಪಂಚಾಯತ್ ಉಪಾಧ್ಯಕ್ಷರು, ಒಕ್ಕೂಟದ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ದೀಪ ಬೆಳಗಿಸುವುದರ ಮೂಲಕ ಮಹಾಸಭೆಯನ್ನು ಪ್ರಾರಂಭಿಸಲಾಯಿತು.
ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕರು ಎನ್.ಆರ್.ಎಲ್.ಎಮ್ ಯೋಜನೆಯ ಉದ್ದೇಶ ಮತ್ತು ವಿವಿಧ ಜೀವನೋಪಾಯ ಚಟುವಟಿಕೆ ಬಗ್ಗೆ ಸಾವಿಸ್ತಾರವಾಗಿ ವಿವರಿಸಿದರು. ಒಕ್ಕೂಟದ ನೂತನ ಅಧ್ಯಕ್ಷರು, ಕಾರ್ಯದರ್ಶಿ, ಕೋಶಾಧಿಕಾರಿ, ಪದಾಧಿಕಾರಿಗಳ ಪದಗ್ರಹಣ ನಡೆಯಿತು.
ಕೃಷಿ ಸಖಿ ವಸಂತಿ ಒಕ್ಕೂಟದ ವರದಿ ಮಂಡನೆ ಮಾಡಿದರು. ಎಮ್.ಬಿಕೆ ಶಾರದಾ ಕಾರ್ಯಕ್ರಮ ನಿರೂಪಿಸಿದರು. ಎಲ್.ಸಿ.ಆರ್ ಪಿ ಶಶಿ ಭಾಗೀರಥಿ, ಕೃಷಿ ಸಖಿ, ಪಶು ಸಖಿ, ಬ್ಯಾಂಕ್ ಸಖಿ ಭಾಗವಹಿಸಿದ್ದರು. ಸಂಜೀವಿನಿ ಸದಸ್ಯರು. ಸ್ತ್ರೀ ಶಕ್ತಿ ಸಂಘದ ಸದಸ್ಯರು ಉಪಸ್ಥಿತರಿದ್ದರು. ಶಾರದಾ ಧನ್ಯವಾದವಿತ್ತರು.