23.7 C
ಪುತ್ತೂರು, ಬೆಳ್ತಂಗಡಿ
May 19, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಜಕ್ರೆಸಾಲು ಸೇತುವೆ ಕೆಳಗೆ ನದಿಯಲ್ಲಿ ದನದ ಚರ್ಮ ಪತ್ತೆ

ಬೆಳ್ತಂಗಡಿ: ಇಲ್ಲಿಯ ಲಾಯಿಲ ಬಜಕ್ರೆಸಾಲು ಎಂಬಲ್ಲಿ ಸೇತುವೆಯ ಕೆಳಗೆ ನದಿಯಲ್ಲಿ ದನದ ಚರ್ಮ ಪತ್ತೆಯಾಗಿದ್ದು, ಸ್ಥಳೀಯರು ನೀಡಿದ ಮಾಹಿತಿಯನ್ವಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಬಜಕ್ರೆಸಾಲಿನಲ್ಲಿ ನಡೆದುಕೊಂಡು ಹೋಗುತ್ತಿದ್ದ ಸ್ಥಳೀಯರಿಗೆ ಕೆಟ್ಟ ವಾಸನೆ ಬಂದಿದ್ದು, ಪರಿಶೀಲಿಸಿದಾಗ ಸೇತುವೆ ಕೆಳಗೆ ದನದ ಕಿವಿ ಸಹಿತ ಚರ್ಮ ಪತ್ತೆಯಾಗಿದೆ.

ಈಗಾಗಲೇ ಪೊಲೀಸ್ ಹಾಗೂ ಪಂಚಾಯತ್‌ಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಯಾರೋ ಕಿಡಿಗೇಡಿಗಳು ದನದ ಮಾಂಸ ಮಾಡಿ ಉಳಿದ ಚರ್ಮ ಸೇರಿದಂತೆ ತ್ಯಾಜ್ಯವನ್ನು ಸೇತುವೆ ಮೇಲಿನಿಂದ ನದಿಗೆ ಬಿಸಾಡಿರಬಹುದು ಎಂದು ಶಂಕಿಸಲಾಗಿದೆ.

Related posts

ಧರ್ಮಸ್ಥಳ: 26ನೇ ವರ್ಷದ ಭಜನಾ ಕಮ್ಮಟದ 4ನೇ ದಿನದ ಕಾರ್ಯಕ್ರಮ

Suddi Udaya

ಕಳೆಂಜ: ವಳಗುಡ್ಡೆಯಲ್ಲಿ ಕಾಡಾನೆ ದಾಳಿ: ಅಪಾರ ಕೃಷಿ ನಾಶ

Suddi Udaya

ಬೆಳ್ತಂಗಡಿ ಅಂಬುಲೆನ್ಸ್ ನಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ ತಾಯಿ

Suddi Udaya

ಅಕ್ರಮ ಮದ್ಯ ಮಾರಾಟ: ವೇಣೂರು ಪೊಲೀಸರಿಂದ ದಾಳಿ

Suddi Udaya

ಕಲ್ಮಂಜ: ನಿಡಿಗಲ್ ಶ್ರೀ ಸತ್ಯನಾರಾಯಣ ಭಜನಾ ಮಂಡಳಿ ನೂತನ ಸಮಿತಿ ರಚನೆ

Suddi Udaya

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ: ಉಡುಪಿ ಜಿಲ್ಲೆ ಪ್ರಥಮ, ದ.ಕ ಜಿಲ್ಲೆ ದ್ವಿತೀಯ

Suddi Udaya
error: Content is protected !!