ಮರೋಡಿಯ ಯುವಕ ವಿಘ್ನೇಶ್ ಗೆ ಧ್ವನಿ ಪೆಟ್ಟಿಗೆಯಲ್ಲಿ ಗಡ್ಡೆ ಬೆಳೆದು ಸ್ವರ ಸ್ತಬ್ಧವಾದ ವಿಚಿತ್ರ ಖಾಯಿಲೆಯಿಂದ ಬಳಲುತ್ತಿದ್ದು ಧ್ವನಿ ಪೆಟ್ಟಿಗೆಯ ಶಸ್ತ್ರಚಿಕಿತ್ಸೆಗೆ ಯುವವಾಹಿನಿ ವೇಣೂರು ಘಟಕದ ಆಸರೆ ಯೋಜನೆಯಿಂದ ಹಾಗೂ ಯುವವಾಹಿನಿ ಮರೋಡಿ ಸಂಚಲನಾ ಸಮಿತಿ ಸದಸ್ಯರಿಂದ ಆರ್ಥಿಕ ನೆರವನ್ನು ನೀಡಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ ವೇಣೂರು ಘಟಕದ ಅಧ್ಯಕ್ಷರಾದ ಶ್ರೀಮತಿ ಹರಿಣಿ ಕರುಣಾಕರ ಪೂಜಾರಿ, ನಿತೀಶ್ ಎಚ್, ನವೀನ್ ಪಚ್ಚೇರಿ, ಶಿವಪ್ರಕಾಶ್, ರತ್ನಾಕರ್ ಸುಪ್ರೀತ್ ಬಂಗೇರ, ವಿನೋದರ ಸಾಲ್ಯಾನ್,ವಿಶ್ವನಾಥ ಬಂಗೇರ, ಸತೀಶ್ ಸಾಲ್ಯಾನ್, ರಮೇಶ್ ನೀರಲ್ಕೆ, ಸಾಂತಪ್ಪ ಪೂಜಾರಿ ಉಪಸ್ಥಿತರಿದ್ದರು.