ವೇಣೂರು: ಕೋಟಿ ಚೆನ್ನಯ್ಯ ಸೇವಾ ಸಂಘದಿಂದ ಕುಕ್ಕೇಡಿ-ನಿಟ್ಟೆಡೆ ವತಿಯಿಂದ ಗುರು ನಮನ ಕಾರ್ಯಕ್ರಮ ಮಂಜುಶ್ರೀ ಭಜನಾ ಮಂದಿರದಲ್ಲಿ ನಡೆಯಿತು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಆಪ್ತ ಸಮಾಲೋಚಕ ಸ್ಮಿತೇಶ್ ಎಸ್ ಬಾರ್ಯ ಮಾತನಾಡಿ ಮೌನಕ್ರಾಂತಿಯ ಮೂಲಕ ಸಮಾಜ ಪರಿವರ್ತನೆಯನ್ನು ಮಾಡಿದ ಪರಿವರ್ತನಾ ಶಿಲ್ಪಿ ಬ್ರಹ್ಮಶ್ರೀ ನಾರಾಯಣ ಗುರು ಭಾರತೀಯ ಪುನರುಜ್ಜೀವನದ ಪಿತಾಮಹ. ಇವರ ತತ್ವ ಸಿದ್ದತಾಂತಗಳನ್ನು ಅಕ್ಷರಶಃ ಪರಿಪಾಲನೆ ಮಾಡಿಕೊಂಡು ಬಂದಿದುರುವ ಕೋಟಿ ಚೆನ್ನಯ ಸೇವಾ ಸಂಘ ಸಮಾಜಕ್ಕೆ ಮಾದರಿ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಕುಕ್ಕೇಡಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಅನಿತಾ ಇವರು ಕಾರ್ಯಕ್ರಮಕ್ಕೆ ಶುಭಕೋರಿದರು.
ಸಭಾ ಅಧ್ಯತೆಯನ್ನು ಸಂಘದ ಅಧ್ಯಕ್ಷ ರತ್ನಾಕರ ಸಾಲ್ಯಾನ್ ಅಂಕಾರ್ಜಾಲು ವಹಿಸಿ ಮಾತನಾಡಿ ಸಂಘದ ಸಕ್ರಿಯ ಯೋಜನೆಗಳನ್ನು ತಿಳಿಸಿ ಸಮಾಜಕ್ಕೆ ಮಾದರಿಯಾಗುತ್ತಿರುವ ನಮ್ಮ ಸಂಘಟನೆಯನ್ನು ಇನ್ನಷ್ಟು ಬಲಿಷ್ಠ ಗೊಳಿಸಲು ನಿಮ್ಮೆಲ್ಲರ ಸಹಕಾರ ಸದಾ ಇರಲಿ ಎಂದು ತಿಳಿಸಿದರು.
ಕು.ಅನನ್ಯ ಹಾಗೂ ಕು. ಪ್ರತಿಕ್ಷಾ, ಕು.ಪ್ರಜ್ಞಾ, ಕು. ದಾಕ್ಷಾ, ಇವರು ಭಕ್ತಿ ಗೀತೆಯೊಂದಿಗೆ ಪ್ರಾರಂಭವಾದ ಕಾರ್ಯಕ್ರಮವು ಸಂಘದ ಗೌರವ ಅಧ್ಯಕ್ಷ ಅಮ್ಮಾಜಿ ಪೂಜಾರಿ ಇವರ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ರವಿ ಉಲ್ತುರ್ ಸಂಘದ ವರದಿ ಮಂಡಿಸಿದರು.
ಯಶಾಲಾತಿ ಅಮ್ಮಾಜಿ ಕೋಟ್ಯಾನ್ಇವರು ಮಕ್ಕಳಿಗೆ ಆಟೋಟ ಸ್ಫರ್ಧೆ ಹಾಗೂ ಮನೋರಂಜನೆ ಕಾರ್ಯಕ್ರಮ ನಡೆಸಿಕೊಟ್ಟರು. ವಿದ್ಯಾ ಕ್ಷೇತ್ರದಲ್ಲಿ ಸಾಧನೆಗೈದ ಕು.ಪ್ರಜ್ಞಾ ಪಿ.ಯು. ಸಿ,ನಾಟಿ ವೈದೇ ಮುತ್ತು ಪೂಜಾರ್ತಿ,ಸಂಘದ ಚಟುವಟಿಕೆಗೆ ಸಹಕಾರ ನೀಡುತ್ತಿರುವ ಲೋಕಯ್ಯ ಪೂಜಾರಿ ಕಂಗಿತ್ತುಲ್ ಗೌರವಿಸಲಾಯಿತು.
ಪದ್ಮನಾಭ ಬಿಯಾದಡಿ ಸತೀಶ್ ಕೆರಿಯರ್ ಪ್ರದೀಪ್ ಕೂಟೇಲ್ ಜಗದೀಶ್ ಬುಲೆಕ್ಕರ ನಿತಿನ್ ಪಾರೋಟ್ಟು ಸತೀಶ್ ಮಂಜೊಲೋಕ್ ರಾಜೇಂದ್ರ ಕೋಟ್ಯಾನ್ ಚಂದ್ರ ಬರಮೇಲು ಸಹಕರಿಸಿದರು.
ಲೋಕಯ್ಯ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ನವೀನ್ ಬುಲೆಕ್ಕರ ಧನ್ಯವಾದವಿತ್ತರು.