September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಿಕ್ಕಮಗಳೂರಿನ ವಕೀಲ ಪ್ರೀತಮ್ ರವರ ಮೇಲಿನ ಪೊಲೀಸ್ ಹಲ್ಲೆಗೆ ತಾಲೂಕು ವಕೀಲರ ಸಂಘದಿಂದ ಖಂಡನೆ: ಸೂಕ್ತ ಕಾನೂನು ಕ್ರಮಕ್ಕೆ ಅಗ್ರಹಿಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ

ಬೆಳ್ತಂಗಡಿ: ಚಿಕ್ಕಮಗಳೂರಿನ ವಕೀಲ ಪ್ರೀತಮ್ ಎಂಬವರಿಗೆ ಚಿಕ್ಕಮಗಳೂರು ಪೊಲೀಸರು ಹಲ್ಲೆ ನಡೆಸಿ ನಂತರ ಠಾಣೆಯಲ್ಲಿ ಅಕ್ರಮ ಬಂಧನದಲ್ಲಿರಿಸಿ ಮಾರಣಾಂತಿಕ ಹಲ್ಲೆಯನ್ನು ಬೆಳ್ತಂಗಡಿ ತಾಲೂಕು ವಕೀಲರ ಸಂಘ ಖಂಡಿಸಿ ಹಲ್ಲೆ ಮತ್ತು ದೌರ್ಜನ್ಯ ನಡೆಸಿದ ಪೊಲೀಸರ ವಿರುದ್ಧ ಸೂಕ್ತ ಕ್ರಮಕ್ಕೆ ಅಗ್ರಹಿಸಿ ಬೆಳ್ತಂಗಡಿ ಆಡಳಿತ ಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾ‌ರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ನ್ಯಾಯಾಂಗದ ಅವಿಭಾಜ್ಯ ಅಂಗವಾಗಿ ಕೆಲಸ ಮಾಡುತ್ತಿರುವ ವಕೀಲ ಸಮುದಾಯದ ಮೇಲೆ ಈ ರೀತಿಯ ಹಲ್ಲೆ ಮತ್ತು ದೌರ್ಜನ್ಯವನ್ನು ತೀವ್ರವಾಗಿ ಖಂಡಿಸಿ ತಪ್ಪಿತಸ್ಥ ಪೊಲೀಸರನ್ನು ಬಂಧಿಸಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.


ಘಟನೆಯನ್ನು ಖಂಡಿಸಿ ಹಿರಿಯ ವಕೀಲ ಸಂಘದ ಚಯರ್ ಮೆನ್ ಅಲೋಸಿಯಸ್ ಎಸ್.ಲೋಬೊ, ಹಿರಿಯ ವಕೀಲ ಜೆ.ಕೆ.ಪೌಲ್, ತಾಲೂಕು ವಕೀಲ ಸಂಘದ ಅಧ್ಯಕ್ಷ ವಸಂತ ಮರಕ್ಕಡ, ಪ್ರಧಾನ ಕಾರ್ಯದರ್ಶಿ ನವೀನ್ ಬಿ.ಕೆ ಮಾತನಾಡಿದರು.

ಈ ಸಂದರ್ಭದಲ್ಲಿ ಹಿರಿಯ ವಕೀಲ ಸಂಘ ಮತ್ತು ಸಂಘದ ಪದಾಧಿಕಾರಿಗಳು, ಸದಸ್ಯ ವಕೀಲರು ಉಪಸ್ಥಿತರಿದ್ದರು.

Related posts

ಬುರುಡೆ ಪ್ರಕರಣ: ಬೆಂಗಳೂರಿನ ಜಯಂತ್ ಟಿ ಬಾಡಿಗೆ ಮನೆ ಮೇಲೆ ಎಸ್.ಐ.ಟಿ ದಾಳಿ

Suddi Udaya

ಮಡಂತ್ಯಾರು: ವಸಂತ ಶೆಟ್ಟಿ ನಿಧನ

Suddi Udaya

ನ. 26: ಮಲೆಬೆಟ್ಟು ಶ್ರೀ ಮಹಾಗಣಪತಿ, ಶ್ರೀ ಸುಬ್ರಹ್ಮಣೇಶ್ವರ ದೇವಸ್ಥಾನದಲ್ಲಿ ಷಷ್ಠಿ ವಿಶೇಷ ಪೂಜೆ

Suddi Udaya

ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕಾಲೇಜಿನಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ

Suddi Udaya

ಚಾರ್ಮಾಡಿ ತ್ರಿವರ್ಣ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಮಹಿಳಾ ಒಕ್ಕೂಟದ ಮಹಾಸಭೆ

Suddi Udaya

ರಾಷ್ಟ್ರೀಯ ನ್ಯಾಚುರೋಪಥಿ ಉತ್ಸವದಲ್ಲಿ ಎಸ್.ಡಿ.ಎಂ ನ್ಯಾಚುರೋಪಥಿ ಮತ್ತು ಯೋಗ ವಿಜ್ಞಾನ ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!