September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ ಬಿಲ್ಲವ ಸಂಘದ ಧತ್ತಿನಿಧಿಗೆ ಹುಂಬೆಜೆ ರಾಮಣ್ಣ ಪೂಜಾರಿ ಸ್ಮರಣಾರ್ಥ ರೂ.10 ಸಾವಿರ ದೇಣಿಗೆ

ಬಳಂಜ: ಇತ್ತೀಚೆಗೆ ನಿಧನರಾದ ದೈವದ ಮದ್ಯಸ್ಥ ನಾಲ್ಕೂರು ಗ್ರಾಮದ ಹುಂಬೆಜೆ ಮನೆಯ ರಾಮಣ್ಣ ಪೂಜಾರಿಯವರ ಸ್ಮರಣಾರ್ಥ ಅವರ ಕುಟುಂಬಿಕರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿಯ ಧತ್ತಿನಿಧಿಗೆ ರೂ.10 ಸಾವಿರ ದೇಣಿಗೆಯನ್ಮು ನೀಡಿದರು.

ಬಳಂಜ ಬಿಲ್ಲವ ಸಂಘವು ಕಳೆದ ಎರಡು ದಶಕಗಳಿಂದ ಸಂಘದ ಧತ್ತಿನಿಧಿಯಿಂದ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ, ವಿದ್ಯಾರ್ಥಿ ವೇತನ ನೀಡುತ್ತ ಬರುತ್ತಿದ್ದು ಈ ಯೋಜನೆಗೆ ಹಲವಾರು ಮಂದಿ ದೇಣಿಗೆ ನೀಡಿ ಸಹಕರಿಸಿದ್ದಾರೆ.

ಧತ್ತಿನಿಧಿಯನ್ನು ದಿ.ರಾಮಣ್ಣ ಪೂಜಾರಿಯವರ ಪುತ್ರ ದುಗ್ಗಯ ಪೂಜಾರಿಯವರು ಬಳಂಜ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಮಿತಿ ಅಧ್ಯಕ್ಷ ಸಂತೋಷ್ ಪಿ ಕೋಟ್ಯಾನ್ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರು, ಸದಸ್ಯರು, ದಿ.ರಾಮಣ್ಣ ಪೂಜಾರಿಯವರ ಕುಟುಂಬಿಕರು ಉಪಸ್ಥಿತರಿದ್ದು ಒಂದು ನಿಮಿಷ ಮೌನ ಪ್ರಾರ್ಥನೆ ಸಲ್ಲಿಸಿ, ಶ್ರದ್ಧಾಂಜಲಿ ಅರ್ಪಿಸಿದರು.

Related posts

ಅ.16: ವೇಣೂರು ಭಗವಾನ್ ಶ್ರೀ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕದ ನಿಮಿತ್ತ ‘ಅಟ್ಟಳಿಗೆಯ ಸ್ತಂಭ ನ್ಯಾಸ’ ಕಾರ್ಯಕ್ರಮ

Suddi Udaya

ಕೊಯ್ಯೂರು ಸ.ಹಿ.ಪ್ರಾ. ಶಾಲಾ ಅಮೃತ ಮಹೋತ್ಸವ; ಧ್ವಜಾರೋಹಣ-ಗ್ರಂಥಾಲಯ ಉದ್ಘಾಟನೆ- ಸಭಾ ಕಾರ್ಯಕ್ರಮ

Suddi Udaya

ಫೆ.8: 33 ಕೆವಿ ಫೀಡರಿನಲ್ಲಿ ವಿದ್ಯುತ್ ನಿಲುಗಡೆ

Suddi Udaya

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸಮಾಜಕಾರ್ಯ ವಿಭಾಗ ಹಾಗೂ ಸ್ತ್ರೀ ಶಕ್ತಿ ಪಡಂಗಡಿ ಇದರ ಸಹಯೋಗದಿಂದ ಮುಟ್ಟಿನ ಕಪ್ ಬಳಕೆ ಮತ್ತು ಸುರಕ್ಷತೆಯ ಅರಿವು ಕಾರ್ಯಕ್ರಮ

Suddi Udaya

“ಕಲಾ -ಸಂಭ್ರಮ 2024” ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಅಳದಂಗಡಿ ಸರಕಾರಿ ಪ್ರೌಢ ಶಾಲೆಗೆ ಪ್ರಶಸ್ತಿ

Suddi Udaya

ಮುಂಡಾಜೆ ಪ್ರೌಢ ಶಾಲೆಯಲ್ಲಿ1994-95 ನೇ ಸಾಲಿನ ವಿದ್ಯಾರ್ಥಿಗಳ ಸ್ನೇಹ ಕೂಟ

Suddi Udaya
error: Content is protected !!