September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅರಸಿನಮಕ್ಕಿ ಗ್ರಾ.ಪಂ. ನಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ

ಅರಸಿನಮಕ್ಕಿ : ಬ್ಯಾಂಕ್ ಆಫ್ ಬರೋಡ ಹಾಗೂ ಅರಸಿನಮಕ್ಕಿ ಗ್ರಾಮ ಪಂಚಾಯತ್ ನ ಸಹಯೋಗದಲ್ಲಿ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕಾರ್ಯಕ್ರಮವು ಡಿ.16 ರಂದು ಅರಸಿನಮಕ್ಕಿ ಗ್ರಾ.ಪಂ. ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಸಂಸದ ನಳಿನ್ ಕುಮಾರ್ ಕಟೀಲ್ ಉದ್ಘಾಟಿಸಿ ಮಾತನಾಡಿ ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಸಿನಮಕ್ಕಿ ಗ್ರಾ.ಪಂ. ಅಧ್ಯಕ್ಷೆ ಗಾಯತ್ರಿ ವಹಿಸಿದರು.

ಕಾರ್ಯಕ್ರಮದಲ್ಲಿ ಆರ್ಥಿಕ ಸಾಕ್ಷರತ ಸಂಯೋಜಕಿ ಉಷಾ ರವರು ವಿವಿಧ ಸೌಲಭ್ಯಗಳ ಹಾಗೂ ಯೋಜನೆಗಳ ಅನುಷ್ಠಾನ ದ ಬಗ್ಗೆ ವಿಸ್ಕೃತ ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಮಂಗಳೂರು ಕೆನರಾ ಬ್ಯಾಂಕ್ ಕವಿತಾ ಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡಬಿದ್ರೆ, ಬಿಜೆಪಿ ಮಂಡಲ ಅಧ್ಯಕ್ಷ ಜಯಂತ್ ಕೋಟ್ಯಾನ್, ಹಾಗೂ ಪಂಚಾಯತ್ ಸದಸ್ಯರು, ಊರವರು ಉಪಸ್ಥಿತರಿದ್ದರು.

ಬ್ಯಾಂಕ್ ಆಫ್ ಬರೋಡ ರಾಕೇಶ್ ಸ್ವಾಗತಿಸಿದರು. ದಿನಕರ ಕುರುಪ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಹೊಸ್ತೋಟ ಧನ್ಯವಾದವಿತ್ತರು.

Related posts

ಬಂಗಾಡಿ ಸರಕಾರಿ ಪ್ರೌಢಶಾಲೆಗೆ ಶೇ.98 ಫಲಿತಾಂಶ

Suddi Udaya

ಬೆಳ್ತಂಗಡಿ ಡಿ.ಕೆ.ಆರ್. ಡಿ.ಎಸ್ ನೇತೃತ್ವದಲ್ಲಿ ವಿಶ್ವ ಕ್ಯಾನ್ಸರ್ ದಿನಾಚರಣೆ ಹಾಗೂ ಕ್ಯಾನ್ಸರ್ ರೋಗಿಗಳಿಗಾಗಿ ಧನ ಸಹಾಯ ಸಂಗ್ರಹಣಾ ಅಭಿಯಾನ

Suddi Udaya

ಜೆಸಿಐ ಬೆಳ್ತಂಗಡಿಯ ಉದ್ದೇಶಿತ ‘ಜೇಸಿ ಛೇಂಬರ್ ಆಫ್ ಕಾಮರ್ಸ್’ ಸ್ಥಾಪನೆ ಬಗ್ಗೆ ಮಾಹಿತಿ ಕಾರ್ಯಾಗಾರ

Suddi Udaya

ಬೆಳ್ತಂಗಡಿ : ಎ.3 ರಂದು ಬಿ.ಎಸ್.ಪಿ ಯ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ನಾಮಪತ್ರ ಸಲ್ಲಿಕೆ

Suddi Udaya

ಕೊಕ್ಕಡ : ಕುಡಾಲ ವ್ಯಾಪ್ತಿಯಲ್ಲಿ ಆನೆ ಸಂಚಾರ

Suddi Udaya

ನಾರಾವಿ ಮಾಂಡೋವಿ ಮೋಟಾರ್ಸ್ ನಿಂದ ಗುರುವಾಯನಕೆರೆಯಲ್ಲಿ ಮಾರುತಿ ಸುಜುಕಿ ಕಾರುಗಳ ಬುಕ್ಕಿಂಗ್ ಆರಂಭ

Suddi Udaya
error: Content is protected !!