23.5 C
ಪುತ್ತೂರು, ಬೆಳ್ತಂಗಡಿ
April 4, 2025
ಅಪಘಾತ

ಲಾರಿ ಡಿಕ್ಕಿ : ಬೈಕ್ ಸವಾರ ಗಂಭೀರ ಗಾಯ ಮಂಗಳೂರು ಆಸ್ಪತ್ರೆಗೆ ದಾಖಲು

ಕೊಯ್ಯುರು : ಲಾರಿ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡು ಮಂಗಳೂರಿನ ಆಸ್ಪತ್ರೆಗೆ ದಾಖಲಾದ ಘಟನೆ ವರದಿಯಾಗಿದೆ.

ಡಿ.21 ರಂದು ಸಂಜೆ, ಬೆಳ್ತಂಗಡಿ ಕಸಬಾ ಗ್ರಾಮದ ಸಂತೆಕಟ್ಟೆ ಬಸ್ಸು ನಿಲ್ದಾಣದ ಬಳಿ, ದ್ವಿಚಕ್ರ ವಾಹನ ಕೆಎ21 ಎಸ್‌ 6354 ನೇದನ್ನು ಕೃಷ್ಣಪ್ಪ ಭಂಡಾರಿ ಎಂಬವರು ಸವಾರಿ ಮಾಡಿಕೊಂಡು ಬರುತ್ತಿದ್ದಾಗ, ಕೆಎ19ಎಬಿ7791 ನೇ ಲಾರಿಯನ್ನು ಅದರ ಚಾಲಕ ಮಹಮ್ಮದ್‌ ರಫೀಕ್‌ರವರು ದುಡುಕುತನದಿಂದ ಚಲಾಯಿಸಿಕೊಂಡು ಬಂದು, ಕೃಷ್ಣಪ್ಪ ಭಂಡಾರಿ ಯವರು ಸವಾರಿ ಮಾಡಿಕೊಂಡು ಬರುತ್ತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿಯಾದ ಪರಿಣಾಮ, ಕೃಷ್ಣಪ್ಪರವರು ವಾಹನದ ಸಮೇತ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡು ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ .

ವೆಂಕಟೇಶ್ ಅವರು ನೀಡಿದ ದೂರಿನಂತೆ ಬೆಳ್ತಂಗಡಿ ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 117/2023 ಕಲಂ: 279,338,ಭಾ.ದಂ.ಸಂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.

Related posts

ಮಡಂತ್ಯಾರುನಲ್ಲಿ ಚರಂಡಿಗೆ ಬಿದ್ದ ಕಾರು

Suddi Udaya

ಕೊಕ್ಕಡ: ಪೊಟ್ಲಡ್ಕ ಎಂಬಲ್ಲಿ ಅರಣ್ಯ ಇಲಾಖೆಯ ಜೀಪ್ ಪಲ್ಟಿ

Suddi Udaya

ರೆಖ್ಯ: ರಾಷ್ಟ್ರೀಯ ಹೆದ್ದಾರಿ 75ರ ಫ್ಲೈಓವರ್ ನಲ್ಲಿ ಬೈಕ್ ಹಾಗೂ ಕಾರು ನಡುವೆ ಭೀಕರ ಅಪಘಾತ: ಬೈಕ್ ಸವಾರ ಸ್ಥಳದಲ್ಲೇ ಸಾವು

Suddi Udaya

ನಿಡ್ಲೆ: ಇನೋವಾ ಕಾರು ಹಾಗೂ ಪೊಲೀಸ್ ವ್ಯಾನ್ ನಡುವೆ ಡಿಕ್ಕಿ

Suddi Udaya

ಇಳಂತಿಲದಲ್ಲಿ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿ ಸಾವು

Suddi Udaya

ಕುಕ್ಕೇಡಿ ಉಳ್ತೂರು ಬಳಿಯ ಕಡ್ತ್ಯಾರ್ ಎಂಬಲ್ಲಿ ಸುಡುಮದ್ದು ತಯಾರಿಕ ಘಟಕದಲ್ಲಿ ಭೀಕರ ಸ್ಪೋಟ ದುರಂತದಲ್ಲಿ ಚಿದ್ರಗೊಂಡು ದೂರಕ್ಕೆ ಎಸೆಯಲ್ಪಟ್ಟ ದೇಹಗಳು – ಮೂವರು ಸಾವು : ಹಲವರಿಗೆ ಗಂಭೀರ ಗಾಯ

Suddi Udaya
error: Content is protected !!