March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕ

ಜ 7: ಪೆರಾಡಿ ಮಾವಿನಕಟ್ಟೆಯಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ

ಪೆರಾಡಿ: ಶ್ರೀ ಅಯ್ಯಪ್ಪ ಭಕ್ತ ವೃಂದ ಮಾವಿನಕಟ್ಟೆ, ಪೆರಾಡಿ ಶ್ರೀ ಅಯ್ಯಪ್ಪ ದೀಪೋತ್ಸವ ಸಮಿತಿ, ಪೆರಾಡಿ-ಮರೋಡಿ, ಕಾಶಿಪಟ್ಣ ಸಾರ್ವಜನಿಕ ಪೂಜಾ ಸಮಿತಿ, ಪೆರಾಡಿ, ಮರೋಡಿ ಮತ್ತು ವಿವಿಧ ಸಂಘ-ಸಂಸ್ಥೆಗಳ ಜಂಟಿ ಆಶ್ರಯದಲ್ಲಿ 50ನೇ ವರ್ಷದ ಶ್ರೀ ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮವು ಜ 7 ರಂದು ಮಾವಿನಕಟ್ಟೆ ಪೆರಾಡಿಯಲ್ಲಿ ನಡೆಯಲಿದೆ.


ಜ.6 ರಂದು ಬೆಳಿಗ್ಗೆ 6:೦೦ಕ್ಕೆ ಗಣಹೋಮ, ಸಂಜೆ 4:೦೦ಕ್ಕೆ ಅಯ್ಯಪ್ಪ ಮಂದಿರಕ್ಕೆ ಹೊರೆಕಾಣಿಕೆ ಮೆರವಣಿಗೆ, ಸಂಜೆ 7:೦೦ರಿಂದ ತುಳುನಾಡ ಕಲಾವಿದರು ವೇಣೂರು ಇವರಿಂದ ಮನೋರಂಜನಾ ಕಾರ್ಯಕ್ರಮ “ತುಳುನಾಡ ವೈಭವ” ಜ.7 ರಂದು ಬೆಳಿಗ್ಗೆ : ಭಜನಾ ಕಾರ್ಯಕ್ರಮ, ಮಹಾಪೂಜೆ, ಪ್ರಸಾದ ವಿತರಣೆ, ಮಧ್ಯಾಹ್ನ 1:೦೦ರಿಂದ ಸಾರ್ವಜನಿಕ ಅನ್ನ ಸಂತರ್ಪಣೆ, ಅಪರಾಹ್ನ 3:೦೦ರಿಂದ ವಿಠಲ ನಾಯಕ್ ಕಲ್ಲಡ್ಕ ಇವರಿಂದ ಗೀತಾ ಸಾಹಿತ್ಯ ಸಂಭ್ರಮ,ಸಂಜೆ 5:೦೦ಕ್ಕೆ ಭಜನೆ, ಪಾಲೆಕೊಂಬು ಮೆರವಣಿಗೆ, ರಾತ್ರಿ 8:೦೦ರಿಂದ ಸಾರ್ವಜನಿಕ ದೀಪೋತ್ಸವ, ರಾತ್ರಿ 8:30ರಿಂದ ಧಾರ್ಮಿಕ ಸಭೆ,ರಾತ್ರಿ 9:30ರಿಂದ ಸಾರ್ವಜನಿಕ ಅನ್ನಸಂತರ್ಪಣೆ ರಾತ್ರಿ 10.00ರಿಂದ ಅಗ್ನಿ ಸ್ಪರ್ಶ, ರಾತ್ರಿ 11.00 ಯಕ್ಷಗಾನ ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ “ಶಬರಿಮಲೆ ಅಯ್ಯಪ್ಪ “ಬೆಳಿಗ್ಗೆ ಗಂಟೆ 4:೦೦ರಿಂದ : ಕೆಂಡಸೇವೆ,

ಜ.11 ರಂದು ಗುರುವಾರ ಬೆಳಿಗ್ಗೆ ಅಯ್ಯಪ್ಪ ದೇವರಿಗೆ ಆರತಿ, ಸ್ವಾಮಿಗಳ ಇರುಮುಡಿ ಕಟ್ಟುವುದು ಮತ್ತು ಭಜನಾ ಕಾರ್ಯಕ್ರಮ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ನಾರಾಯಣ ಶೆಟ್ಟಿ ಎಂ.ಎಸ್ ತಿಳಿಸಿದ್ದಾರೆ.

Related posts

ಬೆಳ್ತಂಗಡಿ: ತೆಂಕಕಾರಂದೂರು ಪಲ್ಕೆ ಎರಡು ಮನೆಯಲ್ಲಿ ಕಳ್ಳತನ

Suddi Udaya

ಹೆದ್ದಾರಿ ಅವಾಂತರ ಕೈಗಾರಿಕಾ ವಸಾಹತಿನ ಉದ್ಯಮಿಗಳ ಪ್ರತಿಭಟನೆ: ತಾ.ಪಂಕಾರ್ಯನಿರ್ವಹಣಾಧಿಕಾರಿ ಭೇಟಿ

Suddi Udaya

ಲಾಯಿಲದ ಹೊಸಕುಮೇರು ನಿವಾಸಿ ಯುವತಿ ಮಂಗಳೂರಿನಲ್ಲಿ ಆತ್ಮಹತ್ಯೆ

Suddi Udaya

ನಡ ಸ.ಪ.ಪೂ. ಕಾಲೇಜಿನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ

Suddi Udaya

ಬಳಂಜ ಪಂಚಶ್ರೀ ಮಹಿಳಾ ಭಜನಾ ಮಂಡಳಿಯಿಂದ ಓಡಿಲ್ನಾಳ ಕ್ಷೇತ್ರದಲ್ಲಿ ಭಜನಾ ಸೇವೆ

Suddi Udaya

ನಾವರ ಶ್ರೀ ಮಹಾಲಿಂಗೇಶ್ವರ ದೇವರ ಬ್ರಹ್ಮಕಲಶೋತ್ಸವ ಪೂರ್ವಾಭಾವಿ ಸಭೆ

Suddi Udaya
error: Content is protected !!