ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘ: 29ನೇ ವರ್ಷದ ವಾರ್ಷಿಕೋತ್ಸವ-ಸತ್ಯನಾರಾಯಣ ಪೂಜೆ

Suddi Udaya

  • ‌ಹತ್ಯಡ್ಕ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್‌ರಿಗೆ ಸನ್ಮಾನ
  • ವಿದ್ಯಾರ್ಥಿ ಪ್ರತಿಭಾ ಪುರಸ್ಕಾರ
    ಪುಸ್ತಕ ವಿತರಣೆ , ವಿವಿಧ ಸ್ಪಧಾ೯ವಿಜೇತರಿಗೆ ಬಹುಮಾನ ವಿತರಣೆ
  • ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘದ ಕಾಯ೯ಕ್ರಮ ಸಮಾಜಕ್ಕೆ ಮಾದರಿ: ಗಣ್ಯರ ಅಭಿಪ್ರಾಯ

ಅರಸಿನಮಕ್ಕಿ: ಮೂಲ್ಯರ ಯಾನೆ ಕುಲಾಲರ ಕೂಟ ಅರಸಿನಮಕ್ಕಿ ಇದರ 29ನೇ ವರ್ಷದ ವಾರ್ಷಿಕೋತ್ಸವ, ಸತ್ಯನಾರಾಯಣ ಪೂಜೆ, ಹಾಗೂ ಸನ್ಮಾನ, ಮತ್ತು ಪುಸ್ತಕ ವಿತರಣಾ ಕಾರ್ಯಕ್ರಮ, ಅರಸಿನಮಕ್ಕಿ ಉಪ್ಪರಡ್ಕ ಕುಂಭಶ್ರೀ ಚಾವಡಿಯಲ್ಲಿ ಜ.7ರಂದು ಆದ್ದೂರಿಯಾಗಿ ಜರುಗಿತು .

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರಸಿನಮಕ್ಕಿ ಮೂಲ್ಯರ ಯಾನೆ ಕುಲಾಲರ ಸಂಘದ ಇದರ ಅಧ್ಯಕ್ಷ ಕೆ.ಗಂಗಾಧರ ಕುಲಾಲ್ ವಹಿಸಿ, ಇತರ ಸಮಾಜದವರು ಸಂಘಟಿತರಾಗಿ ತಮ್ಮ ಸಮಾಜದ ಬೇಡಿಕೆಗಳಿಗೆ ಹೋರಾಟ ನಡೆಸುತ್ತಾರೆ. ಸ್ವಾಮೀಜಿಗಳು ಇದಕ್ಕೆ ಬೆಂಬಲ ನೀಡುತ್ತಾರೆ. ಇದೇ ರೀತಿಯಲ್ಲಿ ನಾವು ಒಗ್ಗಟ್ಟಾಗಬೇಕು ಈ ನಿಟ್ಟಿನಲ್ಲಿ ನಾವು ಪ್ರತಿ ವರ್ಷ ಇಂತಹ ಕಾರ್ಯಕ್ರಮಗಳನ್ನು ಮಾಡುತ್ತಿದ್ದೇವೆ. ಇದಕ್ಕೆ ಸಮಾಜದ ಎಲ್ಲರೂ ಸಹಕಾರ ನೀಡಿದ್ದಾರೆ
ಎಂದು ಕೃತಜ್ಞತೆ ಸಲ್ಲಿಸಿದರು.
ಮುಖ್ಯ ಅತಿಥಿಗಳಾಗಿ ಬೆ.ತಾ ಮೂಲ್ಯರ ಯಾನೆ ಕುಲಾಲರ ಸಂಘದ ನಿರ್ದೇಶಕ ಹಾಗೂ ಮಿತ್ತಬಾಗಿಲು ಗ್ರಾ.ಪಂ ಅಭಿವೃದ್ಧಿಅಧಿಕಾರಿ ಮೋಹನ್ ಬಂಗೇರ ಕಾರಿಂಜ ಮಾತನಾಡಿ, ಮೂಲ್ಯರ ಯಾನೆ ಕುಲಾಲರ ಸಂಘದ ಕಾಯ೯ಕ್ರಮಮಾದರಿಯಾಗಿದ್ದು, ಮಕ್ಕಳು ಮೊಬೈಲ್ ನಿಂದ ದೂರವಿದ್ದು, ಶಿಕ್ಷಣ ದತ್ತ ಆಕಷಿ೯ತರಾಗಬೇಕು, ಮಕ್ಕಳಿಗೆ ಮನೆಯಲ್ಲಿ ಉತ್ತಮ ಸಂಸ್ಕಾರ ಹಾಗೂ ತಿಳುವಳಿಕೆ ನೀಡುವ ಕಾರ್ಯವಾಗಬೇಕು ಎಂದು ಸಲಹೆ ನೀಡಿದರು.

ಶ್ರೀ ವೀರನಾರಾಯಣ ದೇವಸ್ಥಾನ ಕುಲಶೇಖರ ಇದರ ಸೇವಾ ಸಮಿತಿ ಅಧ್ಯಕ್ಷ ಕೆ.ಸುಂದರ ಕುಲಾಲ್ ಮಾತನಾಡಿ, ಅರಸಿನಮಕ್ಕಿ ಸಂಘದ ಕಾಯ೯ಚಟುವಟಿಕೆಗಳಿಗೆ ಮೆಚ್ಚುಗೆ ವ್ಯಕ್ತಪಡಿಸಿ, ಕುಲಶೇಖರ ಶ್ರೀ ವೀರನಾರಾಯಣ ದೇವಸ್ಥಾನದ‌ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶೋತ್ಸವ ಕುಲಾಲ ಸಮಾಜ ಬಾಂಧವರ ಸಹಕಾರದಲ್ಲಿ ಮಾತೃ ಸಂಘದ ಅಧ್ಯಕ್ಷ ಮಯೂರ ಉಳ್ಳಾಲ ಇವರ ನೇತೃತ್ವದಲ್ಲಿ ಯಶಸ್ವಿಯಾಗಿ ನಡೆದಿರುವ ಬಗ್ಗೆ ತಿಳಿಸಿದರು.
ಬೆಳ್ತಂಗಡಿ ಸುದ್ದಿ ಉದಯ ವಾರಪತ್ರಿಕೆಯ ಸಂಪಾದಕ ಬಿ.ಎಸ್ ಕುಲಾಲ್ ಮಾತನಾಡಿ ಅರಸಿನಮಕ್ಕಿ ಕುಲಾಲ ಸಂಘ ಇಪ್ಪತ್ತೊಂದು ವರ್ಷಗಳಿಂದ ನಿರಂತರವಾಗಿ ಕಾಯ೯ಕ್ರಮ ಮಾಡುತ್ತಿರುವುದು ಹಾಗೂ ಸಂಘದ ವ್ಯಾಪ್ತಿಯಲ್ಲಿ ಸಮಾಜ ಬಾಂಧವರ ಮನೆಗಳ ಸಮೀಕ್ಷೆ ನಡೆಸಿ ತಾಲೂಕಿಗೆ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಬೆಳ್ತಂಗಡಿ ವಾಣಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಸುಧೀರ್ ಕೆ.ಎನ್, ಅವರು ಮಾತನಾಡಿ, ಮಕ್ಕಳಿಗೆ ಶಿಕ್ಷಣ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ಪೋಷಕರು ಪ್ರಮುಖ ಪಾತ್ರ ವಹಿಸಬೇಕೆಂದರು.
ಭಾರತೀಯ ನಿವೃತ್ತ ಸೇನಾಧಿಕಾರಿ ಶಿವಪ್ರಕಾಶ್ ಕೆ.ವಿ ಅವರು ಮಾತನಾಡಿ, ಅರಸಿನಮಕ್ಕಿ ಕುಲಾಲ ಸಂಘದ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಸ.ಪ್ರದ ಕಾಲೇಜು ವಿಟ್ಲ ಇದರ ಸಹಾಯಕ ಪ್ರಾಧ್ಯಾಪಕಿ ಶಶಿಕಲಾ.ಕೆ ಮಾತನಾಡಿ, ಮಕ್ಕಳಿಗೆ ಶಿಕ್ಷಣಕ್ಕೆ ಪೂರಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಹತ್ಯಡ್ಕ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿರ್ವಹಣಾಧಿಕಾರಿ ತ್ಯಾಂಪಣ್ಣ ಶೆಟ್ಟಿಗಾರ್‌ರವರನ್ನು ಸಂಘದ ವತಿಯಿಂದ ಸನ್ಮಾನಿಸಲಾಯಿತು. ತ್ಯಾಂಪಣ್ಣ ಶೆಟ್ಟಿಗಾರ್ ಅವರು ಸಮ್ಮಾನಕ್ಕೆ ಕೃತಜ್ಞತೆ ಸಲ್ಲಿಸಿ, ಅರಸಿನಮಕ್ಕಿ ಸಹಕಾರಿ ಸಂಘದಲ್ಲಿ ತಾನು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿದ್ದು,
ನಿವೃತ್ತ ನಂತರವೂ ತನ್ನ ಸೇವೆಯನ್ನು ಗುರುತಿಸಿದ ಅರಸಿನಮಕ್ಕಿ ಕುಲಾಲ ಸಂಘದ ಅಧ್ಯಕ್ಷ, ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ಕಾಯ೯ಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ , ಪುಸ್ತಕ ವಿತರಣೆ
ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಹೇಮಾವತಿ ಕುಲಾಲ್ ಸ್ವಾಗತಿಸಿದರು. ಕೃಷ್ಣಪ್ಪ ಕುಲಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಹೃಷಿಕೇಶ್ ಕುಲಾಲ್ 2023 ನೇ ಸಾಲಿನ ವರದಿ ವಾಚಿಸಿದರು. ಪ್ರವೀಣ್ ಕುಲಾಲ್ ಕಾಯ೯ಕ್ರಮ ನಿರೂಪಿಸಿದರು. ಕು| ಶಾಂಭವಿ ಪಲಸ್ತಡ್ಕ ವಂದಿಸಿದರು.
ಸಭಾಕಾರ್ಯಕ್ರಮದ ನಂತರ ಹವ್ಯಾಸಿ ಕಲಾವಿದರಿಂದ ಮಕ್ಕಳಿಂದ ವಿವಿಧ ಮನರಂಜನಾ ಕಾರ್ಯಕ್ರಮ ಜರುಗಿತು.

Leave a Comment

error: Content is protected !!