26.1 C
ಪುತ್ತೂರು, ಬೆಳ್ತಂಗಡಿ
March 31, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಸೌಜನ್ಯ ಹೋರಾಟದ ನೆಪದಲ್ಲಿ ತೇಜೋವಧೆ ಸರಿಯಲ್ಲ : ಭಾಸ್ಕರ್ ಧರ್ಮಸ್ಥಳ

ಬೆಳ್ತಂಗಡಿ : ಕು| ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರುತನಿಖೆಗೆ ಒತ್ತಾಯಿಸಿ ತಾಲೂಕಿನಲ್ಲಿ ನಡೆಯುತ್ತಿರುವ ಹೋರಾಟದ ನೆಪದಲ್ಲಿ ತೇಜೋವಧೆ, ಸುಳ್ಳು ಆರೋಪಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ಬಜರಂಗದಳದ ಮುಖಂಡ ಭಾಸ್ಕರ್ ಧರ್ಮಸ್ಥಳ ಹೇಳಿದರು.

ಅವರು ಜ.16 ರಂದು ಬೆಳ್ತಂಗಡಿಯಲ್ಲಿ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಕೆಲವೊಂದು ತಿಂಗಳಿನಿಂದ ತಾಲೂಕಿನ ವ್ಯಾಪ್ತಿಯಲ್ಲಿ ಸೌಜನ್ಯ ನ್ಯಾಯಕ್ಕಾಗಿ ಹೋರಾಟಗಳು ನಡೆಯುತ್ತಿದ್ದು, ಹೋರಾಟದ ವೇದಿಕೆಯಲ್ಲಿ ನಮ್ಮ ಮೇಲೆ ನಮ್ಮ ತೇಜೋವಧೆ ಹಾಗೂ ಪ್ರಧಾನಿಯವರಿಗೆ, ತಾಲೂಕಿನ ಶಾಸಕರಿಗೆ, ಡಾ. ಹೆಗ್ಗಡೆಯವರಿಗೆ ಬೈಯ್ಯುತ್ತಿರುವುದು ಸರಿಯಲ್ಲ ಎಂದು ಹೇಳಿದರು. ರಾಜೇಶ್ ಅವರು ಮಾತನಾಡಿ ಸೌಜನ್ಯ ಅವರ ಪರ ಹೋರಾಟದ ಹೆಸರಲ್ಲಿ ತೇಜೋವಧೆ ಮಾಡಿ, ಹೋರಾಟಗಾರರು ಜನರ ದಾರಿ ತಪ್ಪಿಸುತ್ತಿದ್ದಾರೆ. ಸೌಜನ್ಯಳಿಗೆ ನ್ಯಾಯ ಸಿಗಬೇಕು ಎಂಬ ಹೋರಾಟಕ್ಕೆ ನನ್ನ ಬೆಂಬಲವಿದೆ. ಆದರೆ ನನ್ನ ಹೆಸರನ್ನು ಹೇಳಿ ವೇದಿಕೆಯಲ್ಲಿ, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದರು. ದಾಮೋದರ ಗೌಡ ಹಾಗೂ ಸಂದೀಪ್ ರೈ ಮಾತನಾಡಿ, ತಮ್ಮ ಬಗ್ಗೆ ಮಾಡುತ್ತಿರುವ ತೇಜೋವಧೆಯ ಬಗ್ಗೆ ಹೇಳಿದರು. ಪತ್ರಿಕಾ ಗೋಷ್ಠಿಯಲ್ಲಿ ಗಣೇಶ್ ಕಳೆಂಜ ಉಪಸ್ಥಿತರಿದ್ದರು. ಸಂದೀಪ್ ರೈ ಸ್ವಾಗತಿಸಿ ದಾಮೋದರ ಗೌಡ ಧನ್ಯವಾದವಿತ್ತರು.

Related posts

ಅನಾರು ಹಾಲು ಉತ್ಪಾದಕರ ಸಹಕಾರಿ ಸಂಘಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ರೂ.2 ಲಕ್ಷ ಸಹಾಯಧನ ಹಸ್ತಾಂತರ

Suddi Udaya

ಸಿಯೋನ್ ಆಶ್ರಮ: ರಾಷ್ಟ್ರೀಯ ಸೇವಾ ಯೋಜನಾ ಶಿಬಿರ

Suddi Udaya

ಜ.12: ಬಳಂಜ ಬದಿನಡೆಯಲ್ಲಿ ಅಯ್ಯಪ್ಪ ಪೂಜೆ, ಇರುಮುಡಿ ಕಟ್ಟುವ ಕಾರ್ಯಕ್ರಮ

Suddi Udaya

ನೀರಚಿಲುಮೆ-ನಾರ್ಯ ಸಂಪರ್ಕಿಸುವ ರಸ್ತೆಯಲ್ಲಿ ನೀರು ಹರಿಯಲು ಚರಂಡಿ ವ್ಯವಸ್ಥೆಯಿಲ್ಲದೆ ಧರೆ ಕುಸಿತ, ಶೀಘ್ರ ದುರಸ್ಥಿಗೆ ಆಗ್ರಹ

Suddi Udaya

ಕಲ್ಮಂಜದ ಮತಗಟ್ಟೆಗೆ ಶಾಸಕ ಹರೀಶ್ ಪೂಂಜ ಹಾಗೂ ವಿ.ಪ. ಸದಸ್ಯ ಪ್ರತಾಪ್ ಸಿಂಹ ನಾಯಕ್ ಭೇಟಿ

Suddi Udaya

ಜಾನಪದ ಸ್ಫರ್ಧಾಕೂಟ: ಬೆಳ್ತಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳ ತಂಡ ಪ್ರಥಮ ಸ್ಥಾನ

Suddi Udaya
error: Content is protected !!