31.8 C
ಪುತ್ತೂರು, ಬೆಳ್ತಂಗಡಿ
April 9, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಸ್ಯಾಮ್ಸಂಗ್ ಕಂಪೆನಿಯ ಹೊಸ ವಿನ್ಯಾಸದ ನವೀನ ಮಾದರಿಯ ಗ್ಯಾಲಕ್ಸಿ S24 ಅಲ್ಟ್ರಾ ಮಾರುಕಟ್ಟೆಗೆ ಬಿಡುಗಡೆ

ಉಜಿರೆ :ಸ್ಯಾಮ್ಸಂಗ್ ಕಂಪೆನಿಯ ಹೊಸ ವಿನ್ಯಾಸದ ನವೀನ ಮಾದರಿಯ ಗ್ಯಾಲಕ್ಸಿ S24 Family ಜ.24ರಂದು ಉಜಿರೆ ಓಶನ್ ಪಾರ್ಲ್ ನಲ್ಲಿ ಮಾರುಕಟ್ಟೆಗೆ ಅನಾವರಣಗೊಳಿಸಲಾಯಿತು.

ದೀಪ ಬೆಳಗುವುದರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಮೊಬೈಲ್ ನ ಬಿಡುಗಡೆಗೊಳಿಸಿ ಮಾತನಾಡಿದ ಝೋನಲ್ ಸೇಲ್ಸ್ ಮ್ಯಾನೇಜರ್ ಇಸ್ಮಾಯಿಲ್ ಶರೀಫ್ ರವರು ಮೊಬೈಲ್ ನ ವೈಶಿಷ್ಟ್ಯಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಮೊಬೈಲ್ ನ ಮುಂಗಡ ಕಾಯ್ದಿರಿಸಿದ್ದ ಬೆನಕ ಹಾಸ್ಪಿಟಲ್ ವೈದ್ಯರಾದ ಗೋಪಾಲಕೃಷ್ಣ, ದಿಶಾ ಫುಡ್ ಕಾರ್ನರ್ ನ ಅಕ್ಷಯ್, ಉದ್ಯಮಿ ಜಗದೀಶ್ ಆಚಾರ್ಯ, ದುಬೈನ ಉದ್ಯಮಿ ಅಕ್ಷಯ್, ದಿಶಾ ಬೇಕರಿಯ ದಿನೇಶ್ , ಮೊಬೈಲ್ ಶಾಪ್ ನ ಮಾಲಕರಾದ ರಿಶಾದ್, ಪವರ್ ಆನ್ ಬ್ಯಾಟರಿಯ ಮಾಲಕರಾದ ಶೀತಲ್ ಜೈನ್ ಹಾಗೂ ಲ್ಯಾಡಿಂಗ್ ಡೀಲರ್ ಸಾಹುಲ್ ಹಮೀದ್ ರವರಿಗೆ ಹೊಸ ಮೊಬೈಲನ್ನು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ಏರಿಯಾ ಬಿಸಿನೆಸ್ ಮ್ಯಾನೇಜರ್ ನಾಗೇಂದ್ರ ಪ್ರಭು, ಏರಿಯಾ ಬಿಸಿನೆಸ್ ಸೇಲ್ಸ್ ಆಫೀಸರ್ ವಿಜಯ್ ದಾಸ್, ಅಜಯ್ ಬಿ.ಎಮ್, ತಾಲೂಕಿನ ಅಧಿಕೃತ ವಿತರಕರಾದ ಕಲ್ಲಾರಿ ಕಮ್ಯುನಿಕೇಶನ್ ಮಾಲಕರಾದ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಿಟೇಲರುಗಳಾದ ಫಾಲ್ಸ್ ಮೊಬೈಲ್ ಮಾಲಕರಾದ ರಾಘವೇಂದ್ರ, ಹೈಟೆಕ್ ಮೊಬೈಲ್ ಮಾಲಕರಾದ ಶರೀಫ್, ಅಯಾನ್ಶ್ ಎಂಟರ್‌ಪ್ರೈಸಸ್ ನ ಮಾಲಕರಾದ ಅರಿಯಂತ್ ಜೈನ್, ಸ್ಮಾರ್ಟ್ ಮೊಬೈಲ್ ಮಾಲಕರಾದ ಅಕ್ಷತ್ ಉಪಸ್ಥಿತರಿದ್ದು ಅವರನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಕಲ್ಲಾರಿ ಕಮ್ಯುನಿಕೇಶನ್ ನ ಸಿಬ್ಬಂದಿಗಳು ಉಪಸ್ಥಿತರಿದ್ದರು. ಅತಿಥಿಗಳನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಗಣೇಶ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದವಿತ್ತರು.

Related posts

ಉಜಿರೆ: ಎಸ್ ಡಿ ಎಂ ಕಾಲೇಜಿನ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಥ ಮ ಪ್ರಶಸ್ತಿ

Suddi Udaya

ಶಿರ್ಲಾಲು ರಮಾನಂದ ಟೈಲರ್ ನಿಧನ

Suddi Udaya

ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಬೆಳ್ತಂಗಡಿ ತಾಲೂಕಿನ ನೂತನ ಪದಾಧಿಕಾರಿಗಳ ಆಯ್ಕೆ

Suddi Udaya

ಬೆಳ್ತಂಗಡಿ ರಾಜ್ಯ ಸರ್ಕಾರಿ ನೌಕರರ ಸಂಘದ ವಾರ್ಷಿಕ ಮಹಾಸಭೆ: ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ: ನಿವೃತ್ತ ಜಯಕೀರ್ತಿ ಜೈನ್ ರವರಿಗೆ ಬೀಳ್ಕೊಡುಗೆ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಐಟಿಐ ಕಾಲೇಜಿನಲ್ಲಿ ಸ್ತ್ರೀ ಆರೋಗ್ಯ ಮಾಹಿತಿ ಕಾರ್ಯಾಗಾರ

Suddi Udaya

ಕಸ್ತೂರಿ ರಂಗನ್ ವರದಿಯನ್ನು ವಿರೋಧಿಸಿ ಇಂದಬೆಟ್ಟು ಗ್ರಾಮ ಪಂಚಾಯತ್ ನಲ್ಲಿ ಪ್ರತಿಭಟನೆ

Suddi Udaya
error: Content is protected !!