ಮರೋಡಿ : ಮರೋಡಿ ಶ್ರೀ ಉಮಾಮಹೇಶ್ವರ ದೇವಸ್ಥಾನದ ವರ್ಷಾವಧಿ ಆಯನ ಮತ್ತು ಸಿರಿಗಳ ಜಾತ್ರೆ ಹಾಗೂ ಧಾರ್ಮಿಕ ಕಾರ್ಯಕ್ರಮವು ಜ.25ರಿಂದ ಪ್ರಾರಂಭಗೊಂಡು ಜ.29 ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಬಾಲಕೃಷ್ಣ ಪಾಂಗಾಣ್ಣಾಯರ ಹಾಗೂ ಪ್ರಧಾನ ಅರ್ಚಕ ಸುಬ್ರಹ್ಮಣ್ಯ ಪ್ರಸಾದ್ ರವರ ನೇತೃತ್ವದಲ್ಲಿ ನಡೆಯಲಿದೆ.
ಇಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ತೋರಣ ಮೂಹೂರ್ತ , ನವಕ ಪ್ರಧಾನ ಹೋಮ, ಕಲಶಾಭಿಷೇಕ, ಅಲಂಕಾರ ಪೂಜೆ, ಧ್ವಜಾರೋಹಣ , ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಭಕ್ತರು ಶ್ರೀಕ್ಷೇತ್ರಕ್ಕೆ ಹಸಿರುವಾಣಿ ಹೊರೆಕಾಣಿಕೆ ಸಮರ್ಪಿಸಿದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮೊಕ್ತೇಸರ ದೇವೇಂದ್ರ ಹೆಗ್ಡೆ ಕೊಕ್ರಾಡಿ ಕೊಡಂಗೆಗುತ್ತು,ಕಾರ್ಯದರ್ಶಿ ಜಯಂತ್ ಕೋಟ್ಯಾನ್,ಆಡಳಿತ ಮಂಡಳಿ ಸದಸ್ಯರಾದ ರತ್ನಾಕರ ಬುಣ್ಣನ್, ವಿಜಯ ಅರಿಗ, ಎಂ.ಎಸ್ ಪೂಜಾರಿ, ದಿವಾಕರ ಹೆಗ್ಡೆ, ವಿಜಯ್ ಕುಮಾರ್ ಬಂಗ, ಎಂ. ಅಣ್ಣಪ್ಪ ಹೆಗ್ಡೆ, ರಾಧಕೃಷ್ಣ ಹೆಗ್ಡೆ, ಸುಜಯ ಹೆಗ್ಡೆ, ಶ್ರೀಧರ ಆಚಾರ್ಯ, ಸುರೇಂದ್ರ ಪೂಜಾರಿ, ಶ್ರೀಧರ ಪೂಜಾರಿ ಹಾಗೂ ಭಕ್ತರು, ಊರವರು ಉಪಸ್ಥಿತರಿದ್ದರು.
ಇಂದು ರಾತ್ರಿ ದೊಡ್ಡ ರಂಗಪೂಜೆ, ನಂತರ ಬಲಿ ಉತ್ಸವ, ಮಹಾಪೂಜೆ, ನಿತ್ಯಬಲಿ, ವ್ಯಾಘ್ರ ಚಾಮುಂಡಿ ಸಹಿತ ರಕ್ತೇಶ್ವರಿ, ಮೈಸಂದಾಯ ದೈವಗಳಿಗೆ ಗಗ್ಗರ ಸೇವೆ ಹಾಗೂ ಕುಣಿತ ಭಜನಾ ಕಾರ್ಯಕ್ರಮ ನಡೆಯಲಿದೆ.