ಪುಂಜಾಲಕಟ್ಟೆ : ಕರ್ನಾಟಕ ಪಬ್ಲಿಕ್ ಸ್ಕೂಲ್ ಪುಂಜಾಲಕಟ್ಟೆ ಪ್ರೌಢಶಾಲಾ ವಿಭಾಗ ಹಾಗೂ ಪದವಿಪೂರ್ವ ಕಾಲೇಜು ಜಂಟಿಯಾಗಿ 75ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.
ಧ್ವಜಾರೋಹಣವನ್ನು ಪುಂಜಾಲಕಟ್ಟೆ ಶಾಲೆಯ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ಯಾಮಪ್ರಸಾದ್ ಸಂಪಿಗೆತ್ತಾಯ ನೆರವೇರಿಸಿ ದೇಶದ ಅಸ್ಮಿತೆ ಕಾಪಾಡಿಕೊಳ್ಳಬೇಕಾದದ್ದು ನಮ್ಮೆಲ್ಲರ ಕರ್ತವ್ಯ ಆ ಕಾರ್ಯವನ್ನು ಪ್ರತಿಯೊಬ್ಬರು ಕಾಯ ವಾಚ ಮಾನಸ ಮಾಡಿ, ಮಾತ್ರವಲ್ಲದೆ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವಲ್ಲಿ ಪ್ರತಿಯೊಬ್ಬರೂ ಕೂಡ ಕರ್ತವ್ಯ ಪ್ರಜ್ಞೆಯನ್ನು ನೆನಪಿಟ್ಟುಕೊಂಡು ಮಾಡಬೇಕು ಎಂದು ಹೇಳಿದರು.
ಸಂಸ್ಥೆಯ ಪ್ರಾಂಶುಪಾಲರಾದ ಡಾ. ಸರೋಜಿನಿ ಆಚಾರ್ ಸಮಾರಂಭಕ್ಕೆ ಶುಭ ಹಾರೈಸಿದರು, ಉಪ ಪ್ರಾಂಶುಪಾಲರಾದ ಉದಯ್ ಕುಮಾರ್ ಬಿ ಇವರು ಸಂದರ್ಭೋಚಿತವಾಗಿ ಮಾತನಾಡಿದರು.
ಕಾರ್ಯಕ್ರಮವನ್ನು ಪ್ರೌಢಶಾಲಾ ಶಿಕ್ಷಕರಾದ ನಿರಂಜನ್ ಜೈನ್ ನಿರೂಪಿಸಿ, ಧರಣೇಂದ್ರ ಕೆ ಧನ್ಯವಾದ ಸಲ್ಲಿಸಿ ಸರ್ವ ಉಪನ್ಯಾಸಕರ ಹಾಗೂ ಶಿಕ್ಷಕ ಮತ್ತು ಶಿಕ್ಷಕೇತರ ಬಂಧುಗಳ ಸಹಕಾರದೊಂದಿಗೆ ಸರ್ವ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆಯೊಂದಿಗೆ ಮಾದರಿ ಆಗಿ ನಡೆಯಿತು.