September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿಸಂಘ-ಸಂಸ್ಥೆಗಳು

ಕಳೆಂಜ: ಶಿಬರಾಜೆಪಾದೆ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಗಣರಾಜ್ಯೋತ್ಸವ ಆಚರಣೆ

ಕಳೆಂಜ: ಇಲ್ಲಿಯ ಶಿಬರಾಜೆಪಾದೆ ಕ್ರೀಡಾಂಗಣದಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಲಾಯಿತು.

ಗ್ರಾ. ಕಾರ್ಯಕ್ರಮ ಅನುಷ್ಠಾನ ಸಮಿತಿ ಶಿಬರಾಜೆ ಇದರ ಅಧ್ಯಕ್ಷ ಪಿ.ಟಿ ಸೆಬಾಷ್ಟಿನ್ ಧ್ವಜಾರೋಹಣವನ್ನು ನೆರವೇರಿಸಿದರು.

ಶಿಬರಾಜೆ ಅಂಗನವಾಡಿಯ ಮಕ್ಕಳಿಗೆ ಶ್ರೀ ಸದಾಶಿವೇಶ್ವರ ದೇವಸ್ಥಾನದ ಅಧ್ಯಕ್ಷ ಕೆ. ಶ್ರೀಧರ್ ರಾವ್ ಬಹುಮಾನ ವಿತರಿಸಿದರು.

ಈ ಸಂದರ್ಭದಲ್ಲಿ ಶಿಬರಾಜೆ ಅಂಗನವಾಡಿಯ ಬಾಲವಿಕಾಸ ಸಮಿತಿಯ ಅಧ್ಯಕ್ಷ ಪ್ರತಿಮ ನಾರಾಯಣ, ಜೆಸಿಐ ಕಾರ್ಯದರ್ಶಿ ಅಕ್ಷತ್ ರೈ, ಕಳೆಂಜ ಗ್ರಾ.ಪಂ. ಮಾಜಿ ಅಧ್ಯಕ್ಷ ಟಿ.ಎಸ್. ನಿತ್ಯಾನಂದ ರೈ, ಕಳೆಂಜ ಗ್ರಾ.ಪಂ. ಸಿಬ್ಬಂದಿ ರಾಜೇಶ್ ಶೆಟ್ಟಿ, ಜೆಜೆಸಿ ಅಧ್ಯಕ್ಷ ಹರ್ಷಿತ್ ಗೌಡ, ನಿಡ್ಲೆ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ನಿಡ್ಲೆ ಗ್ರಾ.ಪಂ. ಸಿಬ್ಬಂದಿ ಮಮತ ಮಂಜುನಾಥ್, ಪ್ರಗತಿಪರ ಕೃಷಿಕ ಬಾಬು ಗೌಡ, ಜೆಸಿಐನ ಖಜಾಂಜಿ ವಿದ್ಯೇಂದ್ರ ಉಪಸ್ಥಿತರಿದ್ದರು.

ಮಹಿಳಾ ಜೇಸಿ ಅಧ್ಯಕ್ಷೆ ಶೋಭಾ ಪಿ. ಪ್ರಸ್ತಾವಿಕವಾಗಿ ಮಾತನಾಡಿದರು. ಜೆಸಿಐ ಕೊಕ್ಕಡ ಕಪಿಲ ಇದರ ಅಧ್ಯಕ್ಷ ಸಂತೋಷ್ ಜೈನ್ ಸ್ವಾಗತಿಸಿದರು. ಶಿಬರಾಜೆ ಪಾದೆ ಅಂಗನವಾಡಿ ಕಾರ್ಯಕರ್ತೆ ಪ್ರಿಯಾ ಜೆ. ಅಮಿನ್ ವಂದಿಸಿದರು.

Related posts

ಶ್ರೀ ಕ್ಷೇ.ಧ.ಗ್ರಾ. ಯೋಜನೆ ಸಮುದಾಯ ಅಭಿವೃದ್ಧಿ ವಿಭಾಗದಿಂದ ಕೊಮೊಡೋ ವೀಲ್ ಚೈರ್ ವಿತರಣೆ

Suddi Udaya

ಮಡಂತ್ಯಾರು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ವಾರ್ಷಿಕ ಸಭೆ: ನೂತನ ಅಧ್ಯಕ್ಷರಾಗಿ ಪುನೀತ್ ಕುಮಾರ್ ಆಯ್ಕೆ

Suddi Udaya

ಕಳಿಯ ಗ್ರಾ.ಪಂ. ನಿಂದ ಯಶಸ್ವಿ ಮಾದರಿ ಜನ ಸ್ನೇಹಿ ಆಧಾರ್ ಕ್ಯಾಂಪ್ & ಅಂಚೆ ಜನ ಸಂಪರ್ಕ ಅಭಿಯಾನ

Suddi Udaya

ಬೆದ್ರಬೆಟ್ಟು ಮರಿಯಾಂಬಿಕ ಆಂ.ಮಾ. ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಮತ್ತು ವನ ಮಹೋತ್ಸವದ ಆಚರಣೆ

Suddi Udaya

ಬೆಳ್ತಂಗಡಿ ಹಿಂದೂ ಸಂಗಮ ಆಯೋಜನಾ ಸಮಿತಿಯಿಂದ ಪ್ರಶಿಕ್ಷಣ ವರ್ಗ ಮತ್ತು ಆಮಂತ್ರಣ ಪತ್ರ ಬಿಡುಗಡೆ ಕಾರ್ಯಕ್ರಮ

Suddi Udaya

ಧರ್ಮಾಧಿಕಾರಿ ಡಾ|| ಡಿ. ವೀರೇಂದ್ರ ಹೆಗ್ಗಡೆಯವರಿಂದ ರಾಜ್ಯಮಟ್ಟದ ಜಿನಭಜನಾ ಸ್ಪರ್ಧೆಯ ಆಮಂತ್ರಣ ಪತ್ರ ಬಿಡುಗಡೆ

Suddi Udaya
error: Content is protected !!