24.7 C
ಪುತ್ತೂರು, ಬೆಳ್ತಂಗಡಿ
May 18, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ: ವಿಜಯ ಕುಮಾರ್ ಜೈನ್ ಹಾಗೂ ಅರುಣ್ ಕುಮಾರ್ ಜೈನ್ ರವರಿಂದ ಒಂದೇ ದಿನ 22 ದೇವಸ್ಥಾನ, ಬಸದಿ, ದೈವಸ್ಥಾನ ಹಾಗೂ ಮಂದಿರ ಭೇಟಿ

ಅಳದಂಗಡಿ : ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮಚಂದ್ರನ ಪ್ರಾಣ ಪ್ರತಿಷ್ಠೆ ದಿನದಂದು 22 ಕ್ಷೇತ್ರ ಸಂದರ್ಶನ ಇದಾಗಿದ್ದು ಆಮಂತ್ರಣ ಪರಿವಾರದ ವಿಜಯ ಕುಮಾರ್ ಜೈನ್ ಮತ್ತು ಅಳದಂಗಡಿ ಮಹಾವೀರಧಾಮದ ಅರುಣ್ ಕುಮಾರ್ ಜೈನ್ ರವರು ಸುಮಾರು 22 ದೈವ ದೇವರು ಹಾಗೂ ಮಂದಿರ ಭೇಟಿ ನೀಡಿದರು.

ಮುಂಜಾನೆ ಅಳದಂಗಡಿ ಭಗವಾನ್ ಆದಿನಾಥ ಸ್ವಾಮೀ ಬಸದಿ ಸಂದರ್ಶನ ಮಾಡಿ ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ನಂತರ ಕ್ರಮವಾಗಿ ದೇವಸ್ಥಾನಗಳು, ಬಸದಿಗಳು, ದೈವಸ್ಥಾನ, ಮಾರಿಗುಡಿ, ಮಂದಿರಗಳ ಸಂದರ್ಶನ ಮಾಡಿ ಕೊನೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥ ಸ್ವಾಮೀ ದೇವರ ಆಶೀರ್ವಾದ ಪಡೆದು ನಂತರ ಕನ್ಯಾಡಿ ಶ್ರೀರಾಮ ಮಂದಿರಕ್ಕೆ ತೆರಳಿ ಪ್ರಾರ್ಥನೆ ಸಲ್ಲಿಸಿ ಇಲ್ಲಿಯ ಸ್ವಾಮೀಜಿಯವರ ಆಶೀರ್ವಾದ ಪಡೆದು ಕೊಳ್ಳಲಾಯಿತು.


ವಿಶೇಷ ದಿನದ 22 ಕ್ಷೇತ್ರಗಳ ಸಂದರ್ಶನ ಮಾಡಿ ಲೋಕಕ್ಕೆ ಒಳ್ಳೇಯದಾಗಲಿ ಎಲ್ಲರೂ ಆರೋಗ್ಯವಂತರಾಗಿ ಪ್ರೀತಿ ಸಹಬಾಳ್ವೆ ನೆಮ್ಮದಿಯಿಂದ ಬದುಕಬೇಕು ಎಂದು ಪ್ರಾರ್ಥಿಸಿದರು..

Related posts

ಮಚ್ಚಿನ: ಪೆರ್ನಡ್ಕ ನಿವಾಸಿ ದುಗ್ಗಪ್ಪ ಮೂಲ್ಯ ನಿಧನ

Suddi Udaya

ಕುತ್ಲೂರು: ಬಜಿಲಪಾದೆಯಲ್ಲಿ ಚಿರತೆ ಪತ್ತೆ

Suddi Udaya

ಪತ್ರಕರ್ತ ನಿಶಾಂತ್ ಬಿಲ್ಲಂಪದವು ಮೇಲಿನ ಹಲ್ಲೆ ಪ್ರಕರಣ: ಬೆಳ್ತಂಗಡಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಖಂಡನೆ: ಆರೋಪಿಯ ವಿರುದ್ಧ ಸೂಕ್ತ ತನಿಖೆಗೆ ರಾಜ್ಯಪಾಲರಿಗೆ ಹಾಗೂ ಪೊಲೀಸ್ ಇಲಾಖೆಗೆ ಮನವಿ

Suddi Udaya

ಉಜಿರೆ: ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ಸಂಸ್ಥೆಯಲ್ಲಿ ರಾಷ್ಟ್ರೀಯ ಯುವ ದಿನಾಚರಣೆ

Suddi Udaya

ಪಹಲ್ಗಾಮ್ ಪೈಶಾಚಿಕ ಕೃತ್ಯ ಹೇಯ ಮತ್ತು ಖಂಡನೀಯ : ನಿವೃತ್ತ ಎಸ್ಪಿ ಪೀತಾಂಬರ ಹೆರಾಜೆ

Suddi Udaya

ಜೆಡಿಎಸ್ ಅಭ್ಯರ್ಥಿ ಅಶ್ರಫ್ ಆಲಿಕುಂಞಿ ರವರಿಂದ ರೋಡ್ ಶೋ: ಗಣ್ಯರ ಭೇಟಿ

Suddi Udaya
error: Content is protected !!