March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಕುಕ್ಕೇಡಿ: ಪಟಾಕಿ ಸ್ಫೋಟ ಪ್ರಕರಣ ಸ್ಥಳ ಮತ್ತು ಹಾನಿಗೊಳಗಾದ ಮನೆಗಳಿಗೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಭೇಟಿ

ಬೆಳ್ತಂಗಡಿ : ಕುಕ್ಕೇಡಿ ಪಟಾಕಿ ನಿರ್ಮಾಣ ಸ್ಥಳದಲ್ಲಿ ನಡೆದ ಸ್ಫೋಟ ಪ್ರಕರಣದ ಸ್ಥಳಕ್ಕೆ ಬೆಳ್ತಂಗಡಿ ಧರ್ಮಾ ಧ್ಯಕ್ಷರಾದ ಪರಮ ಪೂಜ್ಯ ಲಾರೆನ್ಸ್ ಮುಕ್ಕುಯಿ ಅವರು ಭೇಟಿ ನೀಡಿದರು.

ಈ ಸಂದರ್ಭದಲ್ಲಿಸ್ಫೋಟದಿಂದ ಪೂರ್ಣ ಮತ್ತು ಅಂಶಿಕವಾಗಿ ಹಾನಿಗೊಳಗಾದ ಮನೆಗಳನ್ನು ಸಂದರ್ಶಸಿ ಮನೆಯವರಿಂದ ಘಟನೆಯ ನೇರ ಚಿತ್ರವನ್ನು ಪಡೆದರು.
ಸಾಮಾನ್ಯವಾಗಿ ಆ ಸಮಯದಲ್ಲಿ ಮನೆಯಲ್ಲಿ ಇರುವವರು ಪವಾಡ ಸದೃಶ್ಯವಾಗಿ ಅಂದು ಮನೆಯಲ್ಲಿ ಇಲ್ಲದ ಕಾರಣ ಜೀವಾಪಾಯದಿಂದ ಪಾರಾದರು ಎಂದು ಮನೆಯವರು ವಿವರಿಸಿದರು. ಒಂದು ಮನೆ ಸಂಪೂರ್ಣ ಹಾಗೂ ಇನ್ನೆರಡು ಮನೆಗಳು ಅಂಶಿಕವಾಗಿ ಹಾನಿಯಾಗಿದ್ದು ಸೂಕ್ತ ತನಿಖೆ ಮತ್ತು ಹಾನಿಗೊಳಗಾದವರಿಗೆ ಸೂಕ್ತ ಪರಿಹಾರಕ್ಕೆ ಬೆಳ್ತಂಗಡಿ ಧರ್ಮಾಧ್ಯಕ್ಷರ ಆಗ್ರಹಿಸಿದರು.

ಧರ್ಮ ಪ್ರಾಂತ್ಯದ ವಿಕಾರ್ ಜೆನರಲ್ ಅತಿ ವಂದನಿಯ ಜೋಸ್ ವಲಿಯಪರಂಭಿಲ್, ಬೆಳ್ತಂಗಡಿ ಕೆ ಎಸ್ ಎಂ ಸಿ ಎ ಬೆಳ್ತಂಗಡಿ ಫೋರೋನ ಅಧ್ಯಕ್ಷರಾದ ರೆಜಿ ಜಾರ್ಜ್ ಪಡಂಗಡಿ ಹಾಗೂ ಬಿಜು ಬೆಳ್ತಂಗಡಿ ವೇಣೂರು ಧರ್ಮ ಕೇಂದ್ರದ ಸದಸ್ಯರು ಧರ್ಮಾ ಧ್ಯಕ್ಷರ ಉಪಸ್ಥಿತರಿದ್ದರು.

ವೆಂಕಪ್ಪ ಮೂಲ್ಯ, ಲೈಸ್ಸಿ ಚೆರಾಡಿ ಹಾಗೂ ಹಾನಿಗೊಳಗಾದ ಜೋಸೆಫ್ ಮಾತ್ಯು ಇವರ ಮನೆಗಳಿಗೆ ಭೇಟಿ ನೀಡಿ ಸಂತೈಸಿದರು.

Related posts

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾಟಿ ಔಷಧಿಗಳ ಪ್ರಾತ್ಯಕ್ಷಿಕೆ

Suddi Udaya

ಎಕ್ಸಲೆಂಟ್ ಕಾಲೇಜಿನಲ್ಲಿ ಶಟಲ್ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಸಮಾರೋಪ

Suddi Udaya

ಬೆಂಗಳೂರಿನ ಲೆಕ್ಕ ಪರಿಶೋಧಕರಾದ ಪ್ರೇಮನಾಥ ಹೆಗಡೆ, ಸಿದ್ದಾರ್ಥ ರವರಿಂದ ಕಾಯರ್ತ್ತಡ್ಕ ಹಿ.ಪ್ರಾ. ಶಾಲೆಗೆ ಅನ್ನ ಬಡಿಸುವ ಗಾಡಿ ಕೊಡುಗೆ

Suddi Udaya

ಚಾರ್ಮಾಡಿ: ಇರ್ಫಾನ್ ಅಸೌಖ್ಯದಿಂದ ನಿಧನ

Suddi Udaya

ಕುದ್ರಡ್ಕ ಶ್ರೀ ಮಹಾಗಣಪತಿ ಭಜನಾ ಮಂಡಳಿಯ ವತಿಯಿಂದ ಮಕ್ಕಳ ಕುಣಿತ ಭಜನಾ ತರಬೇತಿ ಕಾರ್ಯಾಗಾರ

Suddi Udaya

ಬೆಂಗಳೂರು ಬಿಲ್ಲವ ಅಸೋಸಿಯೇಷನ್ ನಿಂದ ಪೀತಾಂಬರ ಹೆರಾಜೆ ಅವರಿಗೆ ಅಭಿನಂದನೆ

Suddi Udaya
error: Content is protected !!