April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವಿಕಸಿತ ಭಾರತಕ್ಕೆ ವಿಶ್ವಾಸ ಮೂಡಿಸಿದ ಬಜೆಟ್: ಶಾಸಕ ಹರೀಶ್ ಪೂಂಜ

ಬೆಳ್ತಂಗಡಿ: ಸಂಸತ್ತಿನಲ್ಲಿ ಫೆ.1ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತರಾಮನ್, ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೊನೆಯ ಮುಂಗಡ ಪತ್ರವನ್ನು ಮಂಡಿಸಿದ್ದು ವಿಕಸಿತ ಭಾರತ 2047 ನ್ನು ದೂರದೃಷ್ಟಿಯಲ್ಲಿಟ್ಟುಕೊಂಡು ಮಂಡಿಸಿದ ಮುಂಗಡ ಪತ್ರವೆಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಸಂತಸ ವ್ಯಕ್ತ ಪಡಿಸಿದ್ದಾರೆ.

ದೇಶದ 1 ಕೋಟಿ ಮನೆಗಳ ಮಾಳಿಗೆ ಮೇಲೆ ಸೋಲಾರ್ ಅಳವಡಿಕೆ ಯೋಜನೆಯಿಂದ ಮುಂದಿನ ದಿನಗಳಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ರಾಷ್ಟ್ರ ಸ್ವಾವಲಂಬಿಯಾಗುವುದು ಮಾತ್ರವಲ್ಲದೆ, ಹೆಚ್ಚುವರಿ ವಿದ್ಯುತ್‌ ನ್ನು ಮಾರಾಟ ಮಾಡುವ ಅವಕಾಶದಿಂದ ಜನತೆಯಲ್ಲಿ ಜೀವನ ಮಟ್ಟ ಹಾಗೂ ಉದ್ಯೋಗ ಸೃಷ್ಟಿಯಾಗಲಿದೆ. ಆತ್ಮನಿರ್ಭರ ಆಯಿಲ್ ಸೀಡ್ ಯೋಜನೆಯಿಂದ ಜನತೆಗೆ ಅಡುಗೆ ತೈಲದ ಬೆಲೆಯೇರಿಕೆಯ ಬಿಸಿಯಿಂದ ಮುಕ್ತಿ ದೊರಕಲಿದೆ.

3 ಕೋಟಿ ಮನೆಗಳ ಗುರಿ, ಮೀನುಗಾರಿಕೆಗೆ ಪ್ರತ್ಯೇಕ ಸಚಿವಾಲಯ ಸ್ಥಾಪಿಸಿ 55 ಲಕ್ಷ ಉದ್ಯೋಗ ಸೃಷ್ಟಿ, ರೈಲ್ವೇ ಇಲಾಖೆಯಲ್ಲಿ ವಂದೇ ಭಾರತ್ ಯೋಜನೆಗೆ ಉತ್ತೇಜನ, ರಸ್ತೆ, ರೈಲು ವಿಮಾನಯಾನಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಮೀಸಲು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ಆಯುಷ್ಮಾನ್ ಯೋಜನೆ ವಿಸ್ತರಣೆ, ಪ್ರವಾಸೋದ್ಯಮ ಹಾಗೂ ಕೃಷಿಗೆ ವೈಜ್ಞಾನಿಕ ಸ್ಪರ್ಶ ನಿಶ್ಚಿತವಾಗಿಯೂ ಸರ್ವಾಂಗೀಣ ಪ್ರಗತಿಯತ್ತ ದೇಶ ಮುನ್ನಡೆಯಲಿದೆ. ಯಾವುದೇ ಪೊಳ್ಳು ಭರವಸೆ ನೀಡದೆ ಕಳೆದ 10 ವರ್ಷಗಳಲ್ಲಿ ರಾಷ್ಟ್ರದ ಅಭ್ಯುದಯಕ್ಕೆ ಉತ್ತಮ ಕಾರ್ಯ ನಿರ್ವಹಿಸಿ, ನುಡಿದಂತೆ ನಡೆದ ಮೋದಿ ಸರ್ಕಾರ ವಿಕಸಿತ ಭಾರತಕ್ಕೆ ಜನತೆಗೆ ವಿಶ್ವಾಸಾರ್ಹ ಮುಂಗಡ ಪತ್ರವನ್ನು ನೀಡಿದೆಯೆಂದು ಶಾಸಕ ಹರೀಶ್ ಪೂಂಜ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Related posts

ಅರಸಿನಮಕ್ಕಿ ಶ್ರೀಗೋಪಾಲಕೃಷ್ಣ ಹಿರಿಯ ಪ್ರಾಥಮಿಕ ಶಾಲಾ ಮಂತ್ರಿಮಂಡಲ ರಚನೆ

Suddi Udaya

ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಲ್ಲಿ ಮುಗೇರಡ್ಕ ನೇತ್ರಾವತಿ ನದಿಯಲ್ಲಿ ಉತ್ತಮ ತಳಿಯ ಮೀನು ಮರಿಗಳ ಬಿತ್ತನೆ ಮಾಡಿದ ಶಾಸಕ ಹರೀಶ್ ಪೂಂಜ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ವೃತ್ತಿ ಮಾರ್ಗದರ್ಶನ

Suddi Udaya

ರೋಟರಿ ಕ್ಲಬ್ ಬೆಳ್ತಂಗಡಿ : ರಾಷ್ಟ್ರೀಯ ರೈತರ ದಿನ ಆಚರಣೆ

Suddi Udaya

ಉಜಿರೆ ಗ್ರಾ.ಪಂ. ವ್ಯಾಪ್ತಿಯಲ್ಲಿ ‘ಕೂಸಿನ ಮನೆ’ ಶಿಶು ಪಾಲನಾ ಕೇಂದ್ರ ಉದ್ಘಾಟನೆ

Suddi Udaya

ಕನ್ಯಾಡಿ ಶ್ರೀ ಸದಾಶಿವೇಶ್ವರ ಭಜನಾ ಮಂಡಳಿಯ ವಾರ್ಷಿಕೋತ್ಸವ

Suddi Udaya
error: Content is protected !!