September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಶ್ರೀ ರಾಮ ಗೆಳೆಯರ ಬಳಗ ನೇರೋಳ್ ಪಲ್ಕೆ ಇದರ ವತಿಯಿಂದ ಶ್ರೀ ರಾಮೋತ್ಸವ

ಕನ್ಯಾಡಿ: ಶ್ರೀ ರಾಮ ಗೆಳೆಯರ ಬಳಗ ನೇರೋಳ್ ಪಲ್ಕೆ ಇದರ ವತಿಯಿಂದ ಅಯೋಧ್ಯಾ ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠೆಯ ಸವಿನೆನಪಿಗಾಗಿ ಶ್ರೀ ರಾಮೋತ್ಸವ 2024 ಜ. 27 ರಂದು ನೇರೊಳ್ ಪಲ್ಕೆ ಅಂಗನವಾಡಿ ವಠಾರದಲ್ಲಿ ನಡೆಯಿತು. ಇದರ ಪ್ರಯುಕ್ತ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಪ್ರಕಾಶ್ ಭಟ್ ಸುರ್ಯ ಇವರ ಪೌರೋಹಿತ್ಯದಲ್ಲಿ ನೆರವೇರಿತು.

ಕುಣಿತ ಭಜನಾ ಕಾರ್ಯಕ್ರಮವನ್ನು ಶ್ರೀ ಗೋಪಾಲಕೃಷ್ಣ ಭಜನಾ ಮಂಡಳಿ ಸುಳ್ಯೊಡಿ ನಾವೂರು, ಶ್ರೀ ದುರ್ಗಾಪರಮೇಶ್ವರಿ ಭಜನಾ ಮಂಡಳಿ ಚಂದ್ಕೂರು, ಶ್ರೀ ನರಸಿಂಹ ಭಜನಾ ಮಂಡಳಿ ನಡ ಮತ್ತು ಶ್ರೀ ಬ್ರಹ್ಮದೇವ ಭಜನಾ ಮಂಡಳಿ ಅರಳಿ ನೆರವೇರಿಸಿದರು.

ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸವನ್ನು ರಾಮ್ ಕುಮಾರ್ ಮರ್ನಾಡ್ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ರಾಮ ಗೆಳೆಯರ ಬಳಗದ ಅಧ್ಯಕ್ಷ ಯೋಗೀಶ್ ಬಿ ಆರ್, ಶಾಸಕ ಹರೀಶ್ ಪೂಂಜ, ಎಂಎಲ್ಸಿ ಪ್ರತಾಪಸಿಂಹ ನಾಯಕ್, ಡಾ| ಪ್ರದೀಪ್ ಆರೋಗ್ಯ ಕ್ಲಿನಿಕ್ ನಾವೂರು, ಜಯಂತ್ ಗೌಡ, ಹರೀಶ್ ಮೋರ್ತಾಜೆ, ಅಜಿತ್ ಅರಿಗ, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಮಂಜುಳಾ ಉಪಸ್ಥಿತರಿದ್ದರು.


ಶಶಿಕಾಂತ್ ಬೀಮಂಡೆ ಸ್ವಾಗತಿಸಿದರು. ಜಗದೀಶ್ ಕೊಡಿಕ್ಕು ಧನ್ಯವಾದವಿತ್ತರು.

Related posts

ಫೆ.9: ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್ ನೇತೃತ್ವ ಯುವಸಿರಿ ರೈತ ಭಾರತದ ಐಸಿರಿ ವಿಶಿಷ್ಟ ಕಾರ್ಯಕ್ರಮ; ಬೆಳಾಲು ಅನಂತೋಡಿಯಲ್ಲಿ 1000 ಕ್ಕೂ ವಿಕ್ಕಿ ಯುವ ಜನತೆಯಿಂದ ಭತ್ತ ಕಟಾವು

Suddi Udaya

ವೆನ್ಲಾಕ್ ಮತ್ತು ಲೇಡಿಗೋಷನ್ ಆಸ್ಪತ್ರೆಯ 175 ನೇ ವರ್ಷದ ಸಂಭ್ರಮಾಚರಣೆ ಪ್ರಯುಕ್ತ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ. ವಿರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ವೆನ್ಲಾಕ್ ರಕ್ಷಾ ಸಮಿತಿ

Suddi Udaya

ಉಜಿರೆ ಎಸ್ ಡಿ ಎಮ್ ಪಿಯು ಕಾಲೇಜು :ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ

Suddi Udaya

ನಡ್ತಿಕಲ್ಲು: ಆಧಾರ್ ನೋಂದಣಿ-ತಿದ್ದುಪಡಿ ಶಿಬಿರದ ಉದ್ಘಾಟನೆ

Suddi Udaya

ಜ.4: ಗುರುವಾಯನಕೆರೆ ವಿದ್ವತ್ ಪಿ ಯು. ಕಾಲೇಜಿನಲ್ಲಿ ತಾಲೂಕು ಮಟ್ಟದ ಪುರುಷರ ಹಾಗೂ ಆಹ್ವಾನಿತ ಮಹಿಳೆಯರ ವಾಲಿಬಾಲ್ ಪಂದ್ಯಾಟ

Suddi Udaya

ಎಸ್.ಜಗದೀಶ್ಚಂದ್ರ ಅಂಚನ್ ಸೂಟರ್‌ಪೇಟೆ ಬರೆದ ‘ತ್ಯಾಗಮಯಿ ಮೊಳಹಳ್ಳಿ’ ಕೃತಿ ಬಿಡುಗಡೆ

Suddi Udaya
error: Content is protected !!