25.7 C
ಪುತ್ತೂರು, ಬೆಳ್ತಂಗಡಿ
September 20, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಬೆಳ್ತಂಗಡಿ ಪೋಲಿಸ್ ಠಾಣಾ ನಿರೀಕ್ಷಕರಾಗಿ ಬಸವಲಿಂಗಯ್ಯ ಸುಬ್ಬಾಪುರಮಠ ಅಧಿಕಾರ ಸ್ವೀಕಾರ

ಬೆಳ್ತಂಗಡಿ ಪೋಲಿಸ್ ಠಾಣೆ ಯು ಮೇಲ್ದರ್ಜೆಗೇರಿದ ನಂತರ ಸತ್ಯನಾರಾಯಣ ಈ ಹುದ್ದೆಗೆ ನಿಯುಕ್ತಿಗೊಂಡಿದ್ದರು. ಇವರ ವರ್ಗಾವಣೆಯ ನಂತರ ಠಾಣೆಯಲ್ಲಿ ನಿರೀಕ್ಷಕರ ಹುದ್ದೆ ಖಾಲಿಯಿತ್ತು. ಬೆಳ್ತಂಗಡಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ನಾಗೇಶ್ ಕದ್ರಿ ಪ್ರಭಾರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.


ಇದೀಗ ಸರಕಾರದಿಂದ ಪೊಲೀಸು ನಿರೀಕ್ಷಕರ ಹುದ್ದೆಗೆ ಈ ಹಿಂದೆ 2011ನೇ ಸಾಲಿನಲ್ಲಿ ಬೆಳ್ತಂಗಡಿ ಠಾಣೆಯಲ್ಲಿ ಸಬ್ ಇನ್ಸ್ ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸಿ ಮುಂಬಡ್ತಿ ಹೊಂದಿ ಬೆಳಗಾವಿ ಜಿಲ್ಲೆಯ ವಿವಿಧ ಕಡೆ ವೃತ್ತ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿ ಸದ್ರಿ ಬೆಂಗಳೂರು ಸಿ.ಐ.ಡಿ ಇನ್ಸ್ ಪೆಕ್ಟರ್ ಆಗಿ ವರ್ಗಾವಣೆ ಆದೇಶದಲ್ಲಿದ್ದ ಬಸವಲಿಂಗಯ್ಯ ಸುಬ್ಬಾಪುರಮಠರವರು ಬೆಳ್ತಂಗಡಿ ಪೊಲೀಸು ನಿರೀಕ್ಷಕರಾಗಿ ನಿಯುಕ್ತಿಗೊಂಡರು. ಇವರು ಪಶ್ಚಿಮ ವಲಯ ಐಜಿಪಿ ಮತ್ತು ಮಂಗಳೂರು ಪೋಲಿಸ್ ಅಧೀಕ್ಷಕರನ್ನು ಬೇಟಿಯಾಗಿ ನಾಗೇಶ್ ಕದ್ರಿಯವರಿಂದ ಬೆಳ್ತಂಗಡಿ ಠಾಣೆಯಲ್ಲಿ ಅಧಿಕಾರ ವಹಿಸಿಕೊಂಡರು.


ಈ ಹಿಂದೆ ಬೆಳ್ತಂಗಡಿಯಲ್ಲಿ ದಕ್ಷ ಮತ್ತು ಜನಸ್ನೇಹಿ ಅಧಿಕಾರಿಯಾಗಿ ಹೆಸರು ಗಳಿಸಿದ್ದ ನೇರ ನಡೆಯ ಇವರ ನೇಮಕದಿಂದ ಕಾನೂನು ಸುವ್ಯವಸ್ಥೆಯಲ್ಲಿ ಯಾವುದೇ ತೊಂದರೆ ಆಗಲಿಕ್ಕಿಲ್ಲ ಎಂಬ ಆಶಾಭಾವನೆ ನಾಗರಿಕರದ್ದಾಗಿದೆ.

Related posts

ಬೆಳ್ತಂಗಡಿ ತಾ.ಪಂ. ನಲ್ಲಿ ಫೀಲ್ಡ್ ಟೆಸ್ಟ್ ಕಿಟ್ ತರಬೇತಿ

Suddi Udaya

ವಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆಯ ಕುರಿತು ಸಂವಾದ ಕಾರ್ಯಕ್ರಮ

Suddi Udaya

ಮತ್ಸ್ಯತೀರ್ಥ ಪ್ರಖ್ಯಾತ ಶಿಶಿಲ ದೇವಾಲಯದ ಮೀನುಗಳಿಗೆ ಭಕ್ತರು ಅರಳು ಹಾಕುವುದಕ್ಕೆ ನಿಷೇಧ- ದೇವಾಲಯದ ಆಡಳಿತ ನಿಧಾ೯ರ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ಕ್ಷೇತ್ರ ಸಮಿತಿ ವತಿಯಿಂದ ವಕ್ಫ್ ಜಾಗೃತಿ ಸಭೆ ಕಾರ್ಯಕ್ರಮ

Suddi Udaya

ಮೇಲಂತಬೆಟ್ಟು ಕುಸುಮಾವತಿ ನಿಧನ

Suddi Udaya

ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆ: ಧರ್ಮಸ್ಥಳ ಶ್ರೀ ಮಂ.ಅ.ಪ್ರೌ. ಶಾಲೆಯ ಶಿಕ್ಷಕ ಯುವರಾಜ್ ರವರು ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ

Suddi Udaya
error: Content is protected !!