ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬಳಂಜ: ಗ್ರಾಮ ಪಂಚಾಯತ್ ಗ್ರಾಮ ಸಭೆ

ಬಳಂಜ : ಇಲ್ಲಿಯ ಗ್ರಾಮ ಪಂಚಾಯತದ 2023-24ನೇ ಸಾಲಿನ ದ್ವಿತೀಯ ಸುತ್ತಿನ ಗ್ರಾಮ ಸಭೆಯು ಫೆ.05 ರಂದು ಗ್ರಾ.ಪಂ ಅಧ್ಯಕ್ಷರಾದ ಶ್ರೀಮತಿ ಶೋಭಾ ರವರ ಅಧ್ಯಕ್ಷೆಯಲ್ಲಿ ಬಳಂಜ ಗ್ರಾ.ಪಂ ಸಭಾಭವನದಲ್ಲಿ ನಡೆಯಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ರಂಜಿತ್ ರವರು ಭಾಗವಹಿಸಿ ಗ್ರಾಮ ಸಭೆಯನ್ನು ಮುನ್ನಡೆಸುವುದರ ಮೂಲಕ ಕೃಷಿ ಇಲಾಖೆಗಳಲ್ಲಿ ಇರುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಹಾಗೂ ಗ್ರಾಮ ಸಭೆಯು ಉತ್ತಮವಾಗಿ ನಡೆದಿರುವುದರ ಬಗ್ಗೆ ಅಭಿನಂದಿಸಿದರು.

ಮನೆಯ ವ್ಯಾಪ್ತಿ, ಆವರಣವನ್ನು ಸ್ವಚ್ಛತೆಯಲ್ಲಿ ಇರಿಸಿಕೊಂಡ ಗ್ರಾಮಸ್ಥರಾದ ಶಾರದಾ, ಕರ್ತೆ, ವಾರಿಜ, ಸುಮಿತ್ರಾ ರವರಿಗೆ ಸಭೆಯಲ್ಲಿ ಗೌರವಿಸಲಾಯಿತು. ಹಾಗೂ ಶ್ರಮದಾನದ ಮೂಲಕ ರಸ್ತೆ ಬದಿಯ ಗಿಡಗಂಟಿಯನ್ನು ತೆಗೆಸಿದಂತಹ ಶಶಿಧರ ಶೆಟ್ಟಿ ಯವರಿಗೆ ಅಭಿನಂದಿಸಲಾಯಿತು.

ಊರಿನ ಅಭಿವೃದ್ಧಿಯ ದೃಷ್ಟಿಯಲ್ಲಿ ಹಲವು ಸಮಯಗಳ ಕಾಲ ಚರ್ಚೆಗಳು ನಡೆದವು.

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಯಶೋಧರ ಶೆಟ್ಟಿ, ಪಂಚಾಯತ್ ಸದಸ್ಯರಾದ ಬಾಲಕೃಷ್ಣ ಪೂಜಾರಿ, ಜಯ ಶೆಟ್ಟಿ,ರವೀಂದ್ರ ಬಿ. ಅಮೀನ್, ನಿಝಾಮ್, ಶ್ರೀಮತಿ ಬೇಬಿ,ಶ್ರೀಮತಿ ಪದ್ಮಾವತಿ, ಶ್ರೀಮತಿ ಪ್ರಸನ್ನ, ಶ್ರೀಮತಿ ಲೀಲಾವತಿ, ಶ್ರೀಮತಿ ಸುಚಿತ್ರಾ ಕೆ., ಶ್ರೀಮತಿ ಯಕ್ಷಿತಾ, ವಿವಿಧ ಇಲಾಖೆಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಗ್ರಾಮಸ್ಥರು ಹಾಜರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಣೇಶ್ ಶೆಟ್ಟಿ ಸ್ವಾಗತಿಸಿ, ನಿರ್ವಹಿಸಿದರು ಹಾಗೂ ಕಳೆದ ಗ್ರಾಮ ಸಭೆಯ ನಡವಳಿಗಳ ಬಗ್ಗೆ ಅನುಪಾಲನ ವರದಿ ವಾಚಿಸಿದರು.

Related posts

ಶ್ರೀ ಕ್ಷೇತ್ರ ಬಂಗಾಡಿ ಸತ್ಯ ಸಾರಮಾನಿ ಕಾನದ ಕಟದ ಜನ್ಮಭೂಮಿ’ ವಾರ್ಷಿಕ ಪರ್ವ ಹಾಗೂ ವಿಜ್ಞಾಪನಾ ಪತ್ರ ಬಿಡುಗಡೆ

Suddi Udaya

ಧರ್ಮಸ್ಥಳದ ಯುವತಿ ಪಂಜಾಬ್ ನಲ್ಲಿ ಆತ್ಮಹತ್ಯೆ ಪ್ರಕರಣ: ಆರೋಪಿ ಪ್ರೋಫೆಸರ್ ಬಂಧನ; ಮೃತದೇಹ ದೆಹಲಿಗೆ ಆಗಮನ

Suddi Udaya

ಬೆಳ್ತಂಗಡಿ ಪಶು ಆಸ್ಪತ್ರೆಯಲ್ಲಿ ಹಸುಗಳಲ್ಲಿ ಹಾಲು ಕರೆಯುವ ಸ್ಪರ್ಧೆ – ಮಾಹಿತಿ ಶಿಬಿರ

Suddi Udaya

ಮಲೆಂಗಲ್ಲು ನಿವಾಸಿ, ನಿವೃತ್ತ ಟೆಲಿಫೋನ್ ಎಕ್ಸ್‌ಚೆಂಜರ್‌ ವೈ ಹಾಲೊಜಿ ರಾವ್ ನಿಧನ

Suddi Udaya

ಪಟ್ರಮೆಯ ದೀಪಕ್ ಎ.ಎಸ್ ರವರು ಸಲ್ಲಿಸಿದ ಆರ್ ಟಿಐ ಅರ್ಜಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕಾರ್ಯಾಲಯಾದಿಂದ ಪ್ರತಿಕ್ರಿಯೆ

Suddi Udaya

ಶ್ರೀ ಗುರುದೇವ ವಿವಿಧೋದ್ದೇಶ ಸಹಕಾರ ಸಂಘದ ನಿರ್ದೇಶಕರಾಗಿ ಚಿದಾನಂದ ಪೂಜಾರಿ ಆಯ್ಕೆ

Suddi Udaya
error: Content is protected !!