31.4 C
ಪುತ್ತೂರು, ಬೆಳ್ತಂಗಡಿ
October 26, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಉಜಿರೆಯಲ್ಲಿ ವಿಶ್ವ ಕೈ ತೊಳೆಯುವ ದಿನಾಚರಣೆ

ಉಜಿರೆ: ವಿಶ್ವ ಆರೋಗ್ಯ ಸಂಸ್ಥೆಯ ಕರೆಯ ಮೇರೆಗೆ ವಿಶ್ವದಾದ್ಯಂತದ ಸುಮಾರು ಎಪ್ಪತ್ತು ದೇಶಗಳಲ್ಲಿ ಪ್ರತಿ ವರ್ಷ ವೈಜ್ಞಾನಿಕವಾಗಿ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮ ನಡೆಯುತ್ತಿದೆ.

ಗಲೀಜು , ಕಸ , ಮೂತ್ರ ಹಾಗೂ ಮಲ ವಿಸರ್ಜನೆ ಹಾಗೂ ಪ್ರಾಣಿಗಳನ್ನು ಮುಟ್ಟಿದಾಗ , ಆಹಾರ ಸ್ವೀಕರಿಸುವ ಮೊದಲು ಹಾಗೂ ಆನಂತರ ಕೈ ತೊಳೆಯುವುದು ಅನಿವಾರ್ಯ. ಕೈಯ ಅಸುರಕ್ಷೆಯಿಂದ ಹಿಂದೆ ಅನೇಕ ಮಕ್ಕಳು ಡಯೇರಿಯ ಮುಂತಾದವುಗಳಿಂದ ಮೃತರಾಗುತ್ತಿದ್ದರು. ಕೋರೋನ ಸಮಯದ ಅನಂತರ ಸರಿಯಾಗಿ ಕೈ ತೊಳೆಯುವ ಪರಿಪಾಠ ಬೆಳೆದಿದೆ ಎಂದು ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ. ಪ್ರಸನ್ನಕುಮಾರ ಐತಾಳ್ ಇವರು ವಿಶ್ವ ಕೈ ತೊಳೆಯುವ ದಿನಾಚರಣೆ ಕಾರ್ಯಕ್ರಮದ ಅಂಗವಾಗಿ ಸಂಸ್ಕೃತ ಸಂಘ , ಯೂತ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ವೈಜ್ಞಾನಿಕವಾಗಿ ಕೈ ತೊಳೆಯುವ ಪ್ರಾತ್ಯಕ್ಷಿಕೆ ನೀಡಿ ಮಾತನಾಡಿದರು.

ಯೂತ್ ರೆಡ್ ಕ್ರಾಸ್ ನ ಸಂಯೋಜಕಿ ಕವನಶ್ರೀ ಉಪಸ್ಥಿತರಿದ್ದರು. ಸಂಸ್ಕೃತ ಸಂಘ , ಯೂತ್ ರೆಡ್ ಕ್ರಾಸ್ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿ ಪ್ರತಿನಿಧಿ ಉಪಸ್ಥಿತರಿದ್ದರು.

Related posts

ರಾಷ್ಟ್ರಮಟ್ಟದ ಸಿ ಎ ಪರೀಕ್ಷೆ: ಪ್ರಥಮ ಯತ್ನದಲ್ಲೇ ಮಿಂಚಿದ ಎಕ್ಸೆಲ್ ನ ಪ್ರಥಮ ಬ್ಯಾಚ್ ನ ವಿದ್ಯಾರ್ಥಿಗಳು

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬೋರ್‌ವೆಲ್ ಸೌಲಭ್ಯವನ್ನು ಒದಗಿಸಿದ ಶಾಸಕ ಹರೀಶ್ ಪೂಂಜ

Suddi Udaya

ಉಡುಪಿ ಶ್ರೀಕೃಷ್ಣ ಮಾಸೋತ್ಸವದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ಡಿ.ಹರ್ಷೇಂದ್ರ ಕುಮಾರ್ ದಂಪತಿಗಳಿಗೆ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ ನೀಡಿ ಗೌರವ

Suddi Udaya

ಧರ್ಮಸ್ಥಳ: ಮುಳಿಕ್ಕರ್ ನಲ್ಲಿ ತೋಟ ಹಾಗೂ ಗದ್ದೆಗಳಿಗೆ ಲಗ್ಗೆ ಇಟ್ಟ ಕಾಡಾನೆ: ಅಪಾರ ಕೃಷಿ ನಾಶ

Suddi Udaya

ಬೆಳ್ತಂಗಡಿ ಶ್ರೀ ಧರ್ಮಸ್ಥಳ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೇಸಿಗೆ ಶಿಬಿರ

Suddi Udaya

ಕುತ್ಲೂರು ಪ್ರಕರಣ ನಕ್ಸಲ್ ಮುಖಂಡ ಮಹೇಶ್ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರು

Suddi Udaya
error: Content is protected !!