ಬೆಳ್ತಂಗಡಿ: ಕೋಳಿ ಅಂಕ ನಡೆಸುವುದು ಕಾನೂನು ರೀತಿಯಲ್ಲಿ ಅಪರಾಧವಾಗಿದ್ದು ಕೋಳಿ ಅಂಕ ನಡೆಸದಂತೆ ಕರ್ನಾಟಕ ಸರಕಾರ ಪೊಲೀಸ್ ಇಲಾಖೆಯ ಡೈರೆಕ್ಟರ್ ಜನರಲ್ ಮತ್ತು ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ಕಛೇರಿಯಿಂದ ಎಲ್ಲಾ ಪೊಲೀಸ್ ಆಯುಕ್ತರುಗಳಿಗೆ, ವಲಯ ಇನ್ಸ್ ಪೆಕ್ಟರ್ ಜನರಲ್ ಆಫ್ ಪೊಲೀಸ್ ರವರುಗಳಿಗೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಪ್ರಕಟಣೆಯನ್ನು ಹೊರಡಿಸಲಾಗಿದೆ.
Prevention of Cruelty to Animal Act – 1960 ರ ಕಲಂ 11 ಪ್ರಕಾರ ಅಡಿಯಲ್ಲಿ ಕೋಳಿ ಅಂಕ ಪ್ರಾಣಿ ಹಿಂಸೆಯಾಗಿದ್ದು, ಜೊತೆಗೆ ಅಪರಾಧವಾಗಿರುವುದರಿಂದ ಕೋಳಿ ಅಂಕ ನಡೆಸದಂತೆ, ಹಾಗೂ ಕಾನೂನು ಉಲ್ಲಂಘಿಸಿ ಕೋಳಿ ಅಂಕ ನಡೆದಲ್ಲಿ ಅಗತ್ಯ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.