25.7 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಕೊಕ್ಕಡ: ಬೈಕ್‌ಗಳ ಮುಖಾಮುಖಿ ಡಿಕ್ಕಿ: ಮೂವರಿಗೆ ಗಾಯ

ಕೊಕ್ಕಡ: ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವರು ಗಂಭೀರ ಗಾಯಗೊಂಡಿರುವ ಘಟನೆ ನೆಲ್ಯಾಡಿ-ಕೊಕ್ಕಡ ರಸ್ತೆಯ ನೆಲ್ಯಾಡಿ ಪುತ್ಯೆ ಸಮೀಪ ಫೆ.9 ರಂದು ರಾತ್ರಿ ನಡೆದಿದೆ.


ನೆಲ್ಯಾಡಿ ಪಡ್ಡಡ್ಕ ನಿವಾಸಿ ಬೆನ್ನಿ, ಅರಸಿನಮಕ್ಕಿ ಸಮೀಪದ ಮುಂಡ್ರೇಲು ನಿವಾಸಿಗಳಾದ ಮಹೇಂದ್ರ ಹಾಗೂ ಮಂಜುನಾಥ ಎಂಬವರು ಗಾಯಗೊಂಡು ಪುತ್ತೂರು ಹಾಗೂ ಮಂಗಳೂರಿನ ಆಸ್ಪತ್ರೆಗಳಿಗೆ ದಾಖಲಾಗಿದ್ದಾರೆ.

ರಿಂಗ್ ವರ್ಕ್ಸ್ ಕೆಲಸ ನಿರ್ವಹಿಸುತ್ತಿರುವ ಪಡ್ಡಡ್ಕ ನಿವಾಸಿ ಬೆನ್ನಿ ಅವರು ತನ್ನ ಬೈಕ್‌ನಲ್ಲಿ ಕೊಕ್ಕಡದಿಂದ ನೆಲ್ಯಾಡಿಗೆ ಬರುತ್ತಿದ್ದು ಮಹೇಂದ್ರ ಹಾಗೂ ಮಂಜುನಾಥ ಅವರು ನೆಲ್ಯಾಡಿಯಿಂದ ಕೊಕ್ಕಡ ಕಡೆಗೆ ತಮ್ಮ ಬೈಕ್‌ನಲ್ಲಿ ಹೋಗುತ್ತಿದ್ದು ಪುತ್ಯೆ ಸಮೀಪ ಮಾಯಿಲಕೋಟೆ ದೈವಸ್ಥಾನಕ್ಕೆ ತಿರುಗುವಲ್ಲಿ ಎರಡು ಬೈಕ್‌ಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.

ಘಟನೆಯಲ್ಲಿ ಮೂವರು ಗಂಭೀರ ಗಾಯಗೊಂಡಿದ್ದು ಕೊಕ್ಕಡ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆನ್ನಿ ಅವರು ಪುತ್ತೂರು ಪ್ರಗತಿ ಆಸ್ಪತ್ರೆಯಲ್ಲಿ ಹಾಗೂ ಇನ್ನಿಬ್ಬರು ಗಾಯಾಳುಗಳ ಪೈಕಿ ಒಬ್ಬರು ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಹಾಗೂ ಇನ್ನೊಬ್ಬರು ಮಂಗಳೂರು ಫಾದರ್ ಮುಲ್ಲರ್‍ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.

Related posts

ಕಾಜೂರಿನಲ್ಲಿ ಉರೂಸ್ ಸಂಭ್ರಮ: ವಿಶೇಷ ಆಧ್ಯಾತ್ಮಿಕ ಕಾರ್ಯಕ್ರಮಕ್ಕೆ ಮೆರಗು

Suddi Udaya

ಬೆಳ್ತಂಗಡಿ: ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಡಾ. ಶಿವರಾಮ ಕಾರಂತ ಸ್ಮರಣೆ

Suddi Udaya

ಐಸಿಎಸ್‌ಇ ಪರೀಕ್ಷೆ: ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ವೇಣೂರು ಮಹಾಮಸ್ತಕಾಭಿಷೇಕ: ಡಿ. 17 ರಂದು ಬೃಹತ್ ವೈದ್ಯಕೀಯ ಶಿಬಿರ

Suddi Udaya

ಕಳಿಯ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾಗಿ ಕರುಣಾಕರ್ ಶೆಟ್ಟಿ ಆಯ್ಕೆ

Suddi Udaya

ಮೇ 1ರಿಂದ ಕುದುರೆಮುಖ ವನ್ಯಜೀವಿ ವಿಭಾಗದ ಚಾರಣ ಪ್ರದೇಶ ಪ್ರವಾಸಿಗರಿಗೆ ಮುಕ್ತ

Suddi Udaya
error: Content is protected !!