38.9 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ನಿಂದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ: ಕಂಬಳದ ನಂದಳಿಕೆಯ ಪಾಂಡು ಕೋಣಕ್ಕೆ ಗೌರವಾರ್ಪಣೆ

ವೇಣೂರು: ಇಲ್ಲಿಯ ಗುಂಡೂರಿ ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಇದರ ಆಶ್ರಯದಲ್ಲಿ ದ.ಕ ಜಿಲ್ಲಾ ಮತ್ತು ತಾಲೂಕು ಅಮೆಚೂರ್ ಕಬಡ್ಡಿ ಸಂಸ್ಥೆಯ ಸಹಭಾಗಿತ್ವದಲ್ಲಿ 3ನೇ ವರ್ಷದ 65 ಕೆ.ಜಿ ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟ ಫೆ.10 ರಂದು ಗುಂಡೂರಿ ತುಂಬೆದಲೆಕ್ಕಿ ಶ್ರೀ ಸತ್ಯ ನಾರಾಯಣ ಭಜನಾ ಮಂದಿರದ ಸಮೀಪ ನಡೆಯಿತು.

ಕಾರ್ಯಕ್ರಮವನ್ನು ಲಕ್ಷ್ಮಿ ನಾರಾಯಣ ಅಸ್ರಣ್ಣರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಕೋರಿದರು.

ಅಧ್ಯಕ್ಷತೆಯನ್ನು ಕಟ್ಟೆ ಸ್ಪೋರ್ಟ್ಸ್ ಕ್ಲಬ್ ಅಧ್ಯಕ್ಷ ಸಂದೀಪ್ ಕುಮಾರ್ ಪಾದೆಗುರಿ ವಹಿಸಿದ್ದರು.

ಕಾರ್ಯಕ್ರಮದಲ್ಲಿ ಶಾಸಕ ಹರೀಶ್ ಪೂಂಜ, ಸತ್ಯನಾರಾಯಣ ಭಜನಾ ಮಂಡಳಿ ಅಧ್ಯಕ್ಷ ರಮೇಶ್ ಪಡ್ಡಾಯಿಮಜಲು, ಶ್ರೀಕಾಂತ್ ಭಟ್ ನಂದಳಿಕೆ, ಪ್ರಮುಖರಾದ ಜಯಂತ್ ಕೋಟ್ಯಾನ್, ಹರೀಶ್ ಪೊಕ್ಕಿ, ವಿಜಯ್ ಗೌಡ,ಲೋಕೇಶ್ ಕೊರ್ಲೋಡಿ, ನವೀನ್ ಪಚ್ಚೇರಿ ಮೊದಲಾದವರು ಉಪಸ್ಥಿತರಿದ್ದರು.

ಕಂಬಳದ ಕೋಣಕ್ಕೆ ಹಾಗೂ ಸಾಧಕರಿಗೆ ಸನ್ಮಾನ; ಕಾರ್ಯಕ್ರಮದಲ್ಲಿ ಗುಂಡೂರಿ ಗ್ರಾಮದ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳು, ಯುನಿರ್ವಸಿಟಿ ಗೋಲ್ಡ್ ಮೆಡಲಿಸ್ಟ್ ಕಬಡ್ಡಿ ಆಟಗಾರರಾದ ಸುಶಾಂತ್ ಶೆಟ್ಟಿ ಗರ್ಡಾಡಿ, ಪ್ರಜ್ವಲ್ ಶಿವಮೊಗ್ಗ , ಶಶಾಂಕ್ ಕುಮಾರ್, ಹೊನ್ನಯ್ಯ ಗುಂಡೂರಿ ಹಾಗೂ ಕಂಬಳದ ನಂದಳಿಕೆಯ ಪಾಂಡು ಕೋಣಕ್ಕೆ ಗೌರವಾರ್ಪಣೆ ನಡೆಯಿತು.

ಉಪಾಧ್ಯಕ್ಷ ನಿತೀಶ್ ಗುಂಡೂರಿ ಹಾಗೂ ಸಮಿತಿ ಸದಸ್ಯರು ಸಹಕರಿಸಿದರು. ಕಾರ್ಯದರ್ಶಿ ದಯಾನಂದ ಗುಂಡೂರಿ ಪ್ರಾಸ್ತಾವಿಕ ಮಾತನಾಡಿದರು. ಸುಧಾಕರ ಭಟ್ ಸ್ವಾಗತಿಸಿದರು.

Related posts

ಕೊಯ್ಯೂರು ಗ್ರಾಮ ಪಂಚಾಯತ್ ನ ದ್ವಿತೀಯ ಹಂತದ ಗ್ರಾಮಸಭೆ

Suddi Udaya

ಬೆಳ್ತಂಗಡಿ ಕೇಂದ್ರ ಖಿಳರ್ ಜುಮ್ಮಾ ಮಸೀದಿಯಲ್ಲಿ ವಿಜೃಂಭಣೆಯ ಬಕ್ರೀದ್ ಆಚರಣೆ

Suddi Udaya

ಪುಂಜಾಲಕಟ್ಟೆ ಸ.ಪ್ರ.ದ. ಕಾಲೇಜಿನಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಅಂತರ್ ಕಾಲೇಜು ಮಹಿಳೆಯರ ಹ್ಯಾಂಡ್ ಬಾಲ್ ಪಂದ್ಯಾಟ

Suddi Udaya

ವೇಣೂರು ಕಾಲೇಜು: ವಿದ್ಯಾರ್ಥಿ ಸಂಘದ ಉದ್ಘಾಟನೆ

Suddi Udaya

ಕಡಿರುದ್ಯಾವರ: ಮಲ್ಲಡ್ಕ ನಿವಾಸಿ ವಾಸು ಗೌಡ ನಿಧನ

Suddi Udaya

ಮುಂಡಾಜೆ ಪದವಿ ಪೂರ್ವ ಕಾಲೇಜಿನಲ್ಲಿ ಕಾರ್ಗಿಲ್ ವಿಜಯೋತ್ಸವ ಮತ್ತು ಯೋಧ ನಮನ ಕಾರ್ಯಕ್ರಮ

Suddi Udaya
error: Content is protected !!