ರಾಜ್ಯ ಮಟ್ಟದ ಕಾಂಗ್ರೇಸ್ ಕಾರ್ಯಕರ್ತರ ಸಮಾವೇಶಕ್ಕೆ ಬೆಳ್ತಂಗಡಿಯಿಂದ 10 ಸಾವಿರ ಕಾರ್ಯಕರ್ತರು ಭಾಗವಹಿಸುವಿಕೆ: ರಕ್ಷಿತ್ ಶಿವರಾಮ್

Suddi Udaya

ಬೆಳ್ತಂಗಡಿ: ಮಂಗಳೂರಿನ ಅಡ್ಯಾರು ಸಹ್ಯಾದ್ರಿ ವಠಾರದಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ವತಿಯಿಂದ ರಾಜ್ಯ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶವು ಫೆ. 17 ರಂದು ನಡೆಯಲಿದ್ದು ಈ ಸಮಾವೇಶಕ್ಕೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದಿಂದ 10 ಸಾವಿರ ಮಂದಿ ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಹೇಳಿದರು.

ಅವರು ಫೆ.13 ರಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.

ಸಮಾವೇಶದಲ್ಲಿ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಿಎ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪಕ್ಷದ ಪ್ರಮುಖರು ಭಾಗವಹಿಸಲಿದ್ದಾರೆ. ಈಗಾಗಲೇ ಜಿ.ಪಂ, ತಾ.ಪಂ ವ್ಯಾಪ್ತಿಗೆ ಸಂಚಾಲಕರನ್ನು ನೇಮಕ ಮಾಡಿ ಗ್ರಾಮ ಮಟ್ಟದಲ್ಲಿ ಸಭೆಗಳು ನಡೆಯುತ್ತಿದೆ ಎಂದರು.

ವೇಣೂರಿನಲ್ಲಿ ನಡೆಯಲಿರುವ ಶ್ರೀ ಭಗವಾನ್ ಬಾಹುಬಲಿಗೆ ಮಹಾಮಸ್ತಾಕಾಭಿಷೇಕದ ಮಹೋತ್ಸವಕ್ಕೆ ಪೂರಕವಾಗಿ ಬೆಟ್ಟದ ಸುತ್ತ ಇಂಟರ್ಲಾಕ್ ಅಳವಡಿಕೆ ಅಲ್ಪಸಂಖ್ಯಾತ ವತಿಯಿಂದ 1 ಕೋಟಿ ರೂ. ಅನುದಾನ,ಬೆಟ್ಟದ ಸುತ್ತ ಡಾಮರೀಕರಣ 26 ಲಕ್ಷ ರೂ,ಕುಡಿಯುವ ನೀರಿನ ಪೂರೈಕೆಗೆ 6ಲಕ್ಷ ರೂ ಅನುದಾನ,ಕಲ್ಲು ಬಸದಿ ಹತ್ತಿರ ತಡೆಗೋಡೆ ನಿರ್ಮಾಣ 50 ಲಕ್ಷ, ಸಮುದಾಯ ಭವನ ನಿರ್ಮಾಣಕ್ಕೆ 50 ಲಕ್ಷ,ಗುರುವಾಯನಕೆರೆ-ಹೊಸಂಗಡಿ ತನಕ ಲೋಕೋಪಯೋಗಿ ಇಲಾಖೆ ರಸ್ತೆ ದುರಸ್ತಿಗೆ 1 ಕೋಟಿ,ಜಿಲ್ಲಾ ಪಂಚಾಯತ್ ಇಂಜಿನಿಯರ್ ವಿಭಾಗದಿಂದ ಕೊಳವೆ ಬಾವಿ ನಿರ್ಮಾಣಕ್ಕೆ 1 ಲಕ್ಷ ರೂ.ಮೆಸ್ಕಾಂ ಇಲಾಖೆಯಿಂದ 8 ಲಕ್ಷ ರೂ ಅಭಿವೃದ್ಧಿ ಕಾಮಗಾರಿಗೆ ಸರ್ಕಾರವು ಅನುದಾನ ಮಂಜೂರು ಮಾಡಿದೆ ಹಾಗು ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರಾಜ್ಯದ ವಿವಿಧ ಕಡೆಯಿಂದ ಬರುವ ಭಕ್ತರಿಗೆ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ವಿಶೇಷ ಬಸ್ ವ್ಯವಸ್ಥೆಗೆ ಕಲ್ಪಿಸಲಿದೆ ಎಂದರು.

ಸಣ್ಣ ನೀರಾವರಿ ಯೋಜನೆಯಡಿ ತಾಲ್ಲೂಕಿನ ನಡ ಗ್ರಾಮದ ಕೊಲ್ಲೊಟ್ಟು ಎಂಬಲ್ಲಿ ವೆಂಟೆಂಡ್ ಡ್ಯಾಮ್ ನಿರ್ಮಾಣ,ಇಂದಬೆಟ್ಟು ಗ್ರಾಮದ ದೇವನಾರಿ ಬಾಬು ಮುಗೇರ ಮನೆಯ ಸಮೀಪದ ಸೇತುವೆಯಿಂದ ಅರ್ಧನಾರೀಶ್ವರ ದೇವಸ್ತಾನದವರೆಗೆ ತಡೆಗೋಡೆ ನಿರ್ಮಾಣ. 75 ಲಕ್ಷ,ಆರಂಬೋಡಿ ಗ್ರಾಮದ ಪಾನೆಮೇರ್ ಕುಂಜಾಡಿ ರಸ್ತೆ ಅಭಿವೃದ್ಧಿ 25 ಲಕ್ಷ,ಕರಾಯ ಗ್ರಾಮದ ಮುಗ್ಗ ಕೂಡು ರಸ್ತೆ ಅಭಿವೃದ್ಧಿ 50 ಲಕ್ಷ,ಕಳಿಯ ಗ್ರಾಮದ ಗೇರುಕಟ್ಟೆ ಹೇರೋಡಿ ಬಿಳಿಬೈಲು ರಸ್ತೆ 50 ಲಕ್ಷ,ಓಡಿಲ್ನಾಳ ಗ್ರಾಮದ ಮುಗುಳಿ ಬ್ರಹ್ಮಯಕ್ಷ ಬಸದಿ ರಸ್ತೆ 15 ಲಕ್ಷ,ಉಜಿರೆ ಗುರಿಪಳ್ಳ ತಾರಂಗಡಿ ಸೇತುವೆ ನಿರ್ಮಾಣ,,ಮಚ್ಚಿನ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣಕ್ಕೆ ಅನುದಾನ,ಕ್ರಿಶ್ಚಿಯನ್ ಅಭಿವೃದ್ಧಿಯಡಿ ಸಂತ ಜೋಸೇಫ್ ಚರ್ಚ್ ನಾರಾವಿ, ಕುತ್ತೂರು ಚರ್ಚ್ ಆವರಣ ಗೋಡೆಗೆ 5.ಲಕ್ಷ,ಸೇಕ್ರೆಡ್ ಹಾರ್ಟ್ ಚರ್ಚ್ ಮಡಂತ್ಯಾರ್ 10ಲಕ್ಷ,ಸಿಯೋನ್ ಆಶ್ರಮ ಚರ್ಚ್ ನೆರಿಯ ಅನುದಾನ,ಅಲ್ಪಸಂಖ್ಯಾತ ಕಲ್ಯಾಣ ವತಿಯಿಂದ ತಣ್ಣೀರುಪಂತ ಗ್ರಾಮದ ಬದ್ರಿಯಾ ಜಮ್ಮಾ ಮಸೀದಿ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ,ಚಿಬಿದ್ರೆ ಗ್ರಾಮದ ಜಮ್ಮಾ ಮಸೀದಿ ಕಟ್ಟಡ ನಿರ್ಮಾಣಕ್ಕೆ 15 ಲಕ್ಷ,ಮಿತ್ತಬಾಗಿಲು ಗ್ರಾಮದ ಕೊಲ್ಲಿ ಪಣಿಕಲ್-ದಿಡುಪೆ ರಸ್ತೆ 5.50 ರಸ್ತೆ ಅಭಿವೃದ್ಧಿ, ಶಿಶಿಲ ಗ್ರಾಮದ ಶಿಶಿಲ ಬ್ರಹ್ಮ-ಬೈದರ್ಕಳ-ಗರೋಡಿ-ಓಟ್ಲ-ಪೆರ್ಲ ರಸ್ತೆ ಅಭಿವೃದ್ಧಿ ಕಾಮಗಾರಿ,ಅರಸಿನಮಕ್ಕಿಯಿಂದ ಬರ್ಕುಲ 7.ಕಿಮೀ ರಿಂದ 10 ಕಿ.ಮೀ ರಸ್ತೆ ಅಂದಾಜು 3 ಕೋಟಿ, ಕುವೆಟ್ಟು ಗ್ರಾಮದ ಮದ್ದಡ್ಕದಿಂದ ಲಾಡಿ ರಸ್ತೆ, ಕಿನ್ನಿಗೋಳಿಯಿಂದ ಪಾದೆ ,ಏರಂಗಲ್ಲು ಜಾಲ್ಯಾರಡ್ಡ ರಸ್ತೆ, ಕೊತ್ತಮಜಲು,ರಾಟೆಗುಡ್ಡೆ ರಸ್ತೆ, ಬಾವುಟ ಗುಡ್ಡೆಯಿಂದ ಮದ್ದಡ್ಕ ಬದ್ಯಾರು ರಸ್ತೆ, ಕೊಂಕೋಡಿ ರಸ್ತೆ ಕಾಂಕ್ರೀಟೀಕರಣ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಸತೀಶ್ ಬಂಗೇರ ಕಾಶಿಪಟ್ನ, ನಾಗೇಶ್ ಕುಮಾರ್ ಗೌಡ,ಜಿ.ಪಂ ಮಾಜಿ ಉಪಾಧ್ಯಕ್ಷ, ಜಿ.ಪಂ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ, ಧರಣೇಂದ್ರ ಕುಮಾರ್, ನಮಿತಾ,ಕಾಂಗ್ರೇಸ್ ಹಿರಿಯ ಮುಖಂಡೆ ಲೋಕೇಶ್ವರಿ ವಿನಯಚ್ಚಂದ್ರ,ಬೊಮ್ಮಣ್ಣ ಗೌಡ, ಪದ್ಮನಾಭ ಸಾಲಿಯಾನ್ ಮಾಲಾಡಿ,ಇಸ್ಮಾಯಿಲ್ ಪೆರಿಂಜೆ,ಸುಭಾಶ್ಚಂದ್ರ ರೈ ಅಳದಂಗಡಿ, ಉಪಸ್ಥಿತರಿದ್ದರು.

Leave a Comment

error: Content is protected !!