24.2 C
ಪುತ್ತೂರು, ಬೆಳ್ತಂಗಡಿ
May 17, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಧರ್ಮಸ್ಥಳ: ಶ್ರೀ ಮಂಜುನಾಥ ಸ್ವಾಮಿ ಅ.ಹಿ.ಪ್ರಾ. ಶಾಲೆಯಲ್ಲಿ ಪೋಷಕರ ಸಭೆ

ಧರ್ಮಸ್ಥಳ : ಶ್ರೀ ಮಂಜುನಾಥ ಸ್ವಾಮಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಧರ್ಮಸ್ಥಳದಲ್ಲಿ ಪೋಷಕರ ಸಭೆಯು ಶಾಲಾ ಮುಖ್ಯ ಶಿಕ್ಷಕರ ಅಧ್ಯಕ್ಷತೆಯಲ್ಲಿ ನಡೆಯಿತು.


ಸಭೆಯಲ್ಲಿ ಮುಖ್ಯ ಶಿಕ್ಷಕ ಸುಬ್ರಹ್ಮಣ್ಯ ರಾವ್ ಇವರು ಮಕ್ಕಳಿಗೆ ಮನೆಯಿಂದಲೇ ಶಿಕ್ಷಣ ನೀಡಬೇಕು. ಪ್ರತಿ ದಿನ ಶಾಲೆಯಲ್ಲಿ ನಡೆಯುವ ಚಟುವಟಿಕೆಗಳನ್ನು ಮಕ್ಕಳಿಂದ ಕೇಳಿ ತಿಳಿದುಕೊಳ್ಳಬೇಕು. ಮಕ್ಕಳಲ್ಲಿ ಇರುವ ಪ್ರತಿಭೆಯನ್ನು ಗುರುತಿಸಿ ಆ ನಿಟ್ಟಿನಲ್ಲಿ ಅವನಿಗೆ ಪ್ರೋತ್ಸಾಹ ನೀಡಿದಾಗ ಅವನ ಪ್ರಗತಿ ಸಾಧ್ಯ. ಜೀವನ ಮೌಲ್ಯಗಳನ್ನು ಅರಿತು ಸಮಾಜದಲ್ಲಿ ಬದುಕಲು ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ನಮ್ಮ ಜೊತೆಗೆ ಪೋಷಕರು ಸಹಕರಿಸಬೇಕಾಗಿದೆ. ಮಕ್ಕಳು ನಮಗೆ ಕನ್ನಡಿ ಇದ್ದ ಹಾಗೆ. ಆದ್ದರಿಂದ ಮಕ್ಕಳನ್ನು ಸರಿಯಾದ ರೀತಿಯಲ್ಲಿ ಗಮನಿಸಿ ಎಂದರು.


ಇದಕ್ಕೆ ಪೂರಕವಾಗಿ ಶ್ರೀ ಧ ಮ ಶಿಕ್ಷಣ ಸಂಸ್ಥೆಗಳಲ್ಲಿ ಉತ್ತಮವಾದ ಶಿಕ್ಷಣದ ಜೊತೆಗೆ ಸಂಸ್ಕಾರಯುತ ಶಿಕ್ಷಣ ದೊರೆಯುತ್ತಿದೆ ಎಂದು ಪೋಷಕರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಶ್ರೀಮತಿ ಶ್ರೀಜಾ ಇವರು ಪ್ರಾಸ್ತಾವಿಕ ನುಡಿಗಳೊಂದಿಗೆ ಸ್ವಾಗತಿಸಿದ ಕಾರ್ಯಕ್ರಮಕ್ಕೆ ಶ್ರೀಮತಿ ಪೂರ್ಣಿಮಾ ಜೋಷಿ ವಂದಿಸಿದರು.
ಎಲ್ಲಾ ಶಿಕ್ಷಕರು ಭಾಗವಹಿಸಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಪೋಷಕರು ಉಪಸ್ಥಿತರಿದ್ದರು.

Related posts

ಎಸ್.ಡಿ.ಎಂ ಪ.ಪೂ. ಕಾಲೇಜಿನಲ್ಲಿ ಭಿತ್ತಿಪತ್ರಿಕೆ ಸ್ಪರ್ಧೆ

Suddi Udaya

ವಿಧಾನ ಪರಿಷತ್ ಚುನಾವಣೆ : ಮದುಮಗನಿಂದ ಕೊಕ್ಕಡ ಪಂಚಾಯತ್ ನಲ್ಲಿ ಮತ ಚಲಾವಣೆ

Suddi Udaya

ಉರುವಾಲುಪದವು ಶ್ರೀ ಮಹಮ್ಮಾಯಿ ದೇವಸ್ಥಾನದ ಸ್ಥಳೀಯ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಗಿಡ ನೆಡುವ ಹಾಗೂ ಸಸಿ ವಿತರಣಾ ಕಾರ್ಯಕ್ರಮ

Suddi Udaya

ಬಳಂಜ ಗ್ರಾ.ಪಂ. ನಲ್ಲಿ ಕೈ ಗೆ ಕಪ್ಪು ಪಟ್ಟಿ ಧರಿಸಿ ಶಾಂತಿಯುತ ಪ್ರತಿಭಟನೆ

Suddi Udaya

ಬೆಳ್ತಂಗಡಿ ಭಾರತೀಯ ಜನತಾ ಪಾರ್ಟಿ ಮಂಡಲದ ವತಿಯಿಂದ ಮತದಾರರ ಚೇತನ ಅಭಿಯಾನದ ಪ್ರಯುಕ್ತ ಬಿ.ಎಲ್. ಎ. – 2 ಗಳ ಕಾರ್ಯಾಗಾರ

Suddi Udaya

ಬಂದಾರು : ಬಟ್ಲಡ್ಕ ಜುಮಾ ಮಸೀದಿಯಲ್ಲಿ 2ನೇ ದಿನದ ಉರೂಸ್ ಸಮಾರಂಭ

Suddi Udaya
error: Content is protected !!