25.9 C
ಪುತ್ತೂರು, ಬೆಳ್ತಂಗಡಿ
March 29, 2025
ಗ್ರಾಮಾಂತರ ಸುದ್ದಿಚಿತ್ರ ವರದಿಪ್ರಮುಖ ಸುದ್ದಿವರದಿ

ಕೊರಿಂಜ ಪಂಚಲಿಂಗೇಶ್ವರ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ: ಬ್ರಹ್ಮಕುಂಭಾಭಿಷೇಕ

ಉರುವಾಲು: ಕೊರಿಂಜ ಪರಿವಾರ ಪಂಚಲಿಂಗೇಶ್ವರ ದೇವರ ಪುನಃ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಇಂದು (ಫೆ.21) ಬ್ರಹ್ಮಕುಂಭಾಭಿಷೇಕವು ವಿವಿಧ ವೈದಿಕ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ನಡೆಯಿತು.

ಬೆಳಿಗ್ಗೆ ಸ್ವಸ್ತಿವಾಚನ, ಪರಿಕಲಶಾಭಿಷೇಕ, ಬ್ರಹ್ಮಕುಂಭಾಭಿಷೇಕ, ನ್ಯಾಸ ಪೂಜೆ, ಪ್ರಸನ್ನ ಪೂಜೆ, ಅವಶೃತ ಬಲಿ, ಪಲ್ಲಪೂಜೆ ನಡೆಯಿತು. ನಂತರ ಭಜನ್ ಪ್ರಭಾ ಗಾನ ಸುರಭಿ ಉಜಿರೆ ಇವರಿಂದ ಭಜನಾ ಕಾರ್ಯಕ್ರಮವು ನಡೆಯಿತು.

ಈ ಸಂದರ್ಭದಲ್ಲಿಆಡಳಿತ ಮೊಕ್ತೇಸರ ಯೋಗಿಸ್ ಪೂಜಾರಿ ಕಡ್ತಿಲ , ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ದಾಸಪ್ಪ ಗೌಡ ಕೋಡಿಯಡ್ಕ, ಜೀರ್ಣೋದ್ದಾರ ಸಮಿತಿ ಕಾರ್ಯಾಧ್ಯಕ್ಷ ಸುನಿಲ್‌ ಗೌಡ ಅಣವು, ಆಡಳಿತ ಸಮಿತಿಯ ಕಾರ್ಯದರ್ಶಿ ಶ್ಯಾಮ್ ಭಟ್ ವಾದ್ಯಕೋಡಿ, ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕಡ್ತಿಲ, ಜೀರ್ಣೋದ್ಧಾರ ಸಮಿತಿ ಕೋಶಾಧಿಕಾರಿ ಉದಯ ಟಿ. ತಾಳಿಂಜ, ಬ್ರಹ್ಮಕಲಶೋತ್ಸವ ಸಮಿತಿ ಕೋಶಾಧಿಕಾರಿ ಸುಂದರ ಶೆಟ್ಟಿ ಎಂಜಿರಪಲ್ಕೆ, ಆಡಳಿತ ಸಹ ಮೊಕ್ತಸರ ಸೇಸಪ್ಪ ರೈ ಮತ್ತು ಜನಾರ್ದನ ಗೌಡ ನಕಾಲು ಆರ್ಥಿಕ ಸಮಿತಿ ಸಂಚಾಲಕ ಪ್ರಭಾಕರ ಪೊಸದೊಂಡಿ, ಜೊತೆ ಕಾರ್ಯದರ್ಶಿ ಗಣೇಶ್ ಬನಾರಿ, ಕಾರ್ಯಯಾಲ ಸಂಚಾಲಕ ವಾರಿಜ ಶೆಟ್ಟಿ, ವಿವಿಧ ಸಮಿತಿಯ ಸದಸ್ಯರು, ಊರವರು ಉಪಸ್ಥಿತರಿದ್ದರು.

Related posts

ಕುವೆಟ್ಟು: ಚರಂಡಿ ವ್ಯವಸ್ಥೆ ದುರಸ್ತಿಗೊಳಿಸಿ, ಕಾಮಗಾರಿ ಪ್ರಾರಂಭ ಮಾಡುವಂತೆ ಕುವೆಟ್ಟು ಗ್ರಾ.ಪಂ. ಅಧ್ಯಕ್ಷೆ ಹಾಗೂ ಪಿಡಿಒ ರವರಿಗೆ ಮನವಿ

Suddi Udaya

ರೆಖ್ಯ : ಶೌರ್ಯ ವಿಪತ್ತು ಸ್ವಯಂ ಸೇವಕ ತಂಡದಿಂದ ನೆಲ್ಯಡ್ಕ ಶಾಲೆಯಲ್ಲಿ ಕೈತೋಟ ನಿರ್ಮಾಣ

Suddi Udaya

ಸಾಧನೆಯ ಶಿಖರದಲ್ಲಿ ಗುರುವಾಯನಕೆರೆ ಎಕ್ಸೆಲ್ ಕಾಲೇಜು : ಶಿಕ್ಷಣ ಕ್ಷೇತ್ರದಲ್ಲೇ ಹೊಸ ಭಾಷ್ಯ , ರಾಷ್ಟ್ರಮಟ್ಟದಲ್ಲಿ ಗಮನಸೆಳೆದ ಸಂಸ್ಥೆ

Suddi Udaya

ಪೆರಿಂಜೆ: ಪೇಪರ್ ಪೆನ್ ತಯಾರಿ ಕಾರ್ಯಾಗಾರ ಹಾಗೂ ಪರಿಸರ ಜಾಗೃತಿ ಕಾರ್ಯಕ್ರಮ

Suddi Udaya

ಎಕ್ಸೆಲ್ ನಿಂದ ಗುರುವಾಯನಕೆರೆ ಸರ್ಕಾರಿ ಶಾಲೆಗೆ ಪೀಠೋಪರಣಗಳ ಖರೀದಿಗೆ ಲಕ್ಷ ಮೊತ್ತದ ಚೆಕ್ ಹಸ್ತಾಂತರ

Suddi Udaya

ಧರ್ಮಸ್ಥಳದಲ್ಲಿ25ನೇ ವರ್ಷದ ಭಜನಾ ತರಬೇತಿ ಕಮ್ಮಟ: ಮಂಡ್ಯ ಜಿಲ್ಲೆಯ ಆರತಿಪುರದ ಸಿದ್ಧಾಂತಕೀರ್ತಿ ಸ್ವಾಮೀಜಿಯವರಿಂದ ಉದ್ಘಾಟನೆ: ಧಮ೯ಸ್ಥಳದ ಧಮಾ೯ಧಿಕಾರಿ ಡಾ.ಹೆಗ್ಗಡೆ, ಮಣಿಲಶ್ರೀ ಉಪಸ್ಥಿತಿ: 115 ಭಜನಾ ಮಂಡಳಿಗಳ 202 ಮಂದಿ ಶಿಬಿರಾಥಿ೯ಗಳು ಭಾಗಿ

Suddi Udaya
error: Content is protected !!