ಅರಸಿನಮಕ್ಕಿ: ಹತ್ಯಡ್ಕ ಗ್ರಾಮದ ಅರಿಕೆಗುಡ್ಡೆ ಶ್ರೀ ವನದುರ್ಗಾ ಕ್ಷೇತ್ರದಲ್ಲಿ ಪ್ರತಿಷ್ಠಾ ಅಷ್ಠಬಂಧ ಬ್ರಹ್ಮಕಲಶೋತ್ಸವದ ಅಂಗವಾಗಿ ಫೆ.20 ರಂದು ವೈದಿಕ ಕಾರ್ಯಕ್ರಮಗಳು ಹಾಗೂ ಧಾರ್ಮಿಕ ಸಭೆಯು ನಡೆಯಿತು.
ಬೆಳಿಗ್ಗೆ ಶಿಶಿಲ ಗ್ರಾಮಸ್ಥರಿಂದ ಹೊರಕಾಣಿಕೆ ಸಮರ್ಪಣೆ, ಹಾಗೂ ಶ್ರೀ ಮಹಾಗಣಪತಿ ಪಂಚಲಿಂಗೇಶ್ವರ ಭಜನಾ ಮಂಡಳಿ ಅಡೆಂಜ, ಶ್ರೀ ಉಮಾಮಹೇಶ್ವರಿ ಭಜನಾ ಮಂಡಳಿ ಕಾರ್ಯತ್ತಡ್ಕ ಇವರಿಂದ ಭಜನಾ ಕಾರ್ಯಕ್ರಮ ನಡೆಯಿತು.
ಸಂಜೆ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಕರಿಂಜೆ ಜಗದ್ಗುರು ರಾಘವೇಂದ್ರ ಪೀಠ ಶ್ರೀ ಶಕ್ತಿಗುರು ಮಠದ ಶ್ರೀ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.
ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕರಾದ ಬಿ.ಜಯರಾಮ ನೆಲ್ಲಿತ್ತಾಯ ಶಿಶಿಲರವರು ಅಧ್ಯಕ್ಷತೆ ವಹಿಸಿದ್ದರು. ಸುಳ್ಯ ಸ್ನೇಹ ಶಿಕ್ಷಣ ಸಂಸ್ಥೆಯ ಚಂದ್ರಶೇಖರ ದಾಮ್ಲೆ ಧರ್ಮ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಅರಸಿನಮಕ್ಕಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾ.ಯೋಜನೆ ಬಿ.ಸಿ ಟ್ರಸ್ಟ್‌ನ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾ, ಮಂಗಳೂರು ದನಿಲ ಉದ್ಯಮಿ ದಿನೇಶ್ ಮಯ್ಯ, ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ , ಶ್ರೀ ಕ್ಷೇತ್ರ ಕಾಟಾಜೆ, ನೆರಿಯ ಆಡಳಿತ ಮೊಕ್ತೇಸರರಾದ ಎ. ಜಯದೇವ, ಬರೆಂಗಾಯ ಅಗ್ರೀಲೀಫ್ ಅವಿನಾಶ್ ರಾವ್, ನೆಲ್ಯಾಡಿ ಬಾಲಾಜಿ ಮೆಡಿಕಲ್ಸ್ ನ ಉದಯ ಕುಮಾರ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪ್ರಕಾಶ್ ಪಿಲಿಕ್ಕಬೆ, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಶ್ರೀರಂಗ ದಾಮ್ಲೆ, ಬ್ರಹ್ಮಕಲಶೋತ್ಸವ ಸಮಿತಿ ಉಪಾಧ್ಯಕ್ಷರಾದ ಬಾಲಕೃಷ್ಣ ಮುದ್ದಿಗೆ, ಅಣ್ಣು ಗೌಡ ನಾವಳೆ, ರಾಮಕೃಷ್ಣ ಶೆಟ್ಟಿಗಾರ್ ಪಾಲೆಂಜ, ದಿನೇಶ್ ಕುಂಟಾಲಪಳಿಕೆ, ಹರ್ಷ ಕುಮಾರ್ ಬದ್ರಿಮಾರು ಉಪಸ್ಥಿತರಿದ್ದರು.
ಧನ್ಯಶ್ರೀ, ಪ್ರಾರ್ಥನಾ, ಲಿಖಿತಾ ಪ್ರಾರ್ಥಿಸಿ, ಸಭೆ ಮತ್ತು ಸಾಂಸ್ಕೃತಿಕ ಸಮಿತಿಯ ಸಹಸಂಚಾಲಕ ದಿನಕರ್ ಕುರುಪು ನಿರೂಪಿಸಿ, ಕಾರ್ಯಾಲಯ ಸಮಿತಿ ಸಂಚಾಲಕ ರಾಮಮೂರ್ತಿ ಟಿ. ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿಯ ಕೋಶಾಧಿಕಾರಿ ಕೇಶವ ರಾವ್ ನೆಕ್ಕಿಲು ಧನ್ಯವಾದವಿತ್ತರು.
ಈ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ಶ್ರೀ ವಿಜಯ ಕುಮಾರ್ ಕೊಡಿಯಾಲ್‌ಬೈಲ್ ರಚನೆ, ನಿರ್ದೇಶನದ “ಶಿವದೂತೆ ಗುಳಿಗೆ” ಭಕ್ತಿ ಪ್ರಧಾನ ನಾಟಕ ಜರುಗಿತು.