29.5 C
ಪುತ್ತೂರು, ಬೆಳ್ತಂಗಡಿ
April 4, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಸುರ್ಯ ದಿ. ಪುರಂದರ ಪೂಜಾರಿ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ : ತಾ| ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ: ಸನ್ಮಾನ

ಬೆಳ್ತಂಗಡಿ: ಜನಸ್ನೇಹಿ ಸಂಘ ಸುರ್ಯ ಮತ್ತು ಅಕ್ಷಯ ಸ್ವಸಹಾಯ ಸಂಘ ಬೊಳಿಯಂಜಿ, ಇದರ ಜಂಟಿ ಆಶ್ರಯದಲ್ಲಿ, ತಾಲೂಕು ವಾಲಿಬಾಲ್ ಅಸೋಸಿಯೇಷನ್ ಇದರ ಸಹಯೋಗದೊಂದಿಗೆ ಫೆ. 24ರಂದು ಸುರ್ಯದ ಬೊಳಿಯಂಜಿ ವಾಲಿಬಾಲ್ ಕ್ರೀಡಾಂಗಣದಲ್ಲಿ ದಿ. ಪುರಂದರ ಪೂಜಾರಿ ಸುರ್ಯ ಇವರ ಸ್ಮರಣಾರ್ಥ ಜನಸ್ನೇಹಿ ಕಪ್ – 2024 ತಾಲೂಕು ಮಟ್ಟದ ಪುರುಷರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಪನ್ಯಾಸಕರಾದ ರಾಧಾಕೃಷ್ಣ ಭಟ್ ಬೊಳಿಯಂಜಿ ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿದರು.
ಮುಖ್ಯ ಅತಿಥಿಗಳಾಗಿ ಅಶ್ವಥ್ ಪಡ್ಪು ಅಧ್ಯಕ್ಷರು ಜನಸ್ನೇಹಿ ಸಂಘ ಸುರ್ಯ ,ಡಾ| ಪ್ರದೀಪ್ , ರಾಜಶೇಖರ ಅಜ್ರಿ, ಶ್ರೀ ಆ್ಯಂಟನಿ ಟಿ.ಪಿ, ವಿಕಾಸ್ ಕುಮಾರ್ , ವಿಜಯ ಗೌಡ ನಡುಮನೆ, ಪ್ರವೀಣ್ ವಿ. ಜಿ, ಲೀಲಾವತಿ ಕಾನಂಗ್ , ಮುನಿರಾಜ ಅಜ್ರಿ , ಪ್ರಭಾಕರ ಮಯ್ಯ , ಸುಕೇಶ್ ಪೂಜಾರಿ ನೂಚಿಲ, ಪ್ರಕಾಶ್ ಫೆರ್ನಾಂಡೀಸ್ , ಶ್ರೇಯಾಂಸ್ ಜೈನ್, ಗಣೇಶ್ ಕೆರೆಕೋಡಿ ಇವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ವೇದಿಕೆಯಲ್ಲಿ ನಡ, ಕನ್ಯಾಡಿ, ನಾವೂರು, ಗ್ರಾಮಕ್ಕೆ ಸಂಬಂಧಪಟ್ಟ ಮೆಸ್ಕಾಂ ಇಲಾಖೆಯ ಪವರ್ ಮ್ಯಾನ್ ಗಳಾದ ಸುಧಾಕರ ಮತ್ತು ಅಶೋಕ ಇವರನ್ನು ಸನ್ಮಾನಿಸಲಾಯಿತು.
ವಾಲಿಬಾಲ್ ಪಂದ್ಯಾಟದಲ್ಲಿ ಪ್ರಥಮ ಬಹುಮಾನವನ್ನು ಸಂದೀಪ್ ಪೂಜಾರಿ ಗುರಿಪಳ್ಳ ಇವರ ಮಾಲಕತ್ವದ ಯಶ್ವಿನ್ ಆಟಾಕರ್ಸ್ ಸುರ್ಯ, ದ್ವಿತೀಯ ಬಹುಮಾನವನ್ನು ಡಾ| ಗಣೇಶ್ ಪ್ರಸಾದ್ ತಾರಕ್ ಹೊಟೇಲ್ ಮಾಲಕತ್ವದ ಗೆಳೆಯರ ಬಳಗ ಗುರಿಪಳ್ಳ, ತೃತೀಯ ಬಹುಮಾನವನ್ನು ಪಂಚದುರ್ಗ ಕೊಯ್ಯುರು ಮತ್ತು ಚತುರ್ಥ ಬಹುಮಾನವನ್ನು ಜನಸ್ನೇಹಿ ಸಂಘ ಸುರ್ಯ ತಂಡವು ಪಡೆದುಕೊಂಡಿತು.


ಕಾರ್ಯಕ್ರಮದ ನಿರೂಪಣೆಯನ್ನು ಸಂಘದ ಕಾರ್ಯದರ್ಶಿಯಾದ ಪದ್ಮನಾಭ ಗೌಡ ಸುರ್ಯ ಇವರು ನಿರ್ವಹಿಸಿದರು.

Related posts

ಬಳಂಜ: ಅಟ್ಲಾಜೆ ಅಂಗನವಾಡಿ ಶಿಕ್ಷಕಿ ಜಾನಕಿ ಹೃದಯಾಘಾತದಿಂದ ನಿಧನ

Suddi Udaya

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಅನುದಾನಿತ ಪ್ರೌಢಶಾಲೆಯಲ್ಲಿ “ಅಂತರಾಷ್ಟ್ರೀಯ ಯೋಗ ದಿನಾಚರಣೆ”

Suddi Udaya

ಧರ್ಮಸ್ಥಳದಲ್ಲಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ “ನೆನಪುಗಳ ನೇವರಿಕೆ” ಪುಸ್ತಕ ಬಿಡುಗಡೆ

Suddi Udaya

ಇಂದಬೆಟ್ಟು-ನಾವೂರು ವಿಶ್ವ ಹಿಂದೂ ಪರಿಷತ್ ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ರಚನೆ

Suddi Udaya

ಉಜಿರೆಯ ಖಾಸಗಿ ಲಾಡ್ಜ್ ನಲ್ಲಿ ವ್ಯಕ್ತಿ ಆತ್ಮಹತ್ಯೆ

Suddi Udaya

ಅಳದಂಗಡಿಯಲ್ಲಿ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ

Suddi Udaya
error: Content is protected !!