March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ

ಉಜಿರೆ: ಸಮಾಜದ ಪ್ರತಿಯೊಬ್ಬ ಸದಸ್ಯರು ಘಟಕದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯಶಸ್ಸು ಸುಲಭ ಸಾಧ್ಯ ಎಂದು ದೇವಾಂಗ ಸಮಾಜ ಉಜಿರೆ ವಲಯದ ಮಾಜಿ ಅಧ್ಯಕ್ಷ ಎಂ.ಡಿ.ಭಾಸ್ಕರ್ ಹೇಳಿದರು.

ಇವರು ಮೂಲಾರು ವಾಸುದೇವ ದೇವಾಂಗ ರವರ ಮನೆಯಲ್ಲಿ ನಡೆದ ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಲಯದ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿಬೆಟ್ಟು ರವರು ಘಟಕದ ಸಮುದಾಯ ಚಟುವಟಿಕೆಗಳನ್ನು ವಿಸ್ತರಿಸಲು ಆರ್ಥಿಕ ಕ್ರೋಢೀಕರಣ ಮಾಡಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ವಲಯಾಧ್ಯಕ್ಷ ಮತ್ತು ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ರವಿ ನೆಯ್ಯಾಲುರವರು ಮುಂಡಾಜೆ ಘಟಕದ ಕಾರ್ಯನಿರ್ವಹಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ದೇವಾಂಗ ಸಮಾಜ ಮುಂಡಾಜೆ ಘಟಕದ ಅಧ್ಯಕ್ಷ ರಾಜಗೋಪಾಲ ವಹಿಸಿದ್ದರು.

ಕು.ಸೌಭಾಗ್ಯ ಪ್ರಾರ್ಥಿಸಿದರು.ಶ್ರೀಮತಿ ಸೌಮ್ಯ ಗಣೇಶ್ ಸ್ವಾಗತಿಸಿದರು.ಸವಿತಾ ಕೇಶವ ದೇವಾಂಗ ವಂದಿಸಿದರು ಘಟಕದ ಕಾರ್ಯದರ್ಶಿ ಮಹೇಂದ್ರ ದೇವಾಂಗ ಕೊಡಂಗೆ ಕಾರ್ಯಕ್ರಮ ನಿರೂಪಿಸಿದರು.

Related posts

ಜ.19-21: ಮರೋಡಿ ಪಲಾರಗೋಳಿ ಶ್ರೀ ದೈವ ಕೊಡಮಣಿತ್ತಾಯ ಮತ್ತು ಬ್ರಹ್ಮ ಬೈದರ್ಕಳ ಗರಡಿಯ ವರ್ಷಾವಧಿ ನೇಮೋತ್ಸವ

Suddi Udaya

ಬೆಳ್ತಂಗಡಿ: ಗಸ್ತು ಅರಣ್ಯ ಪಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದ ರಾಘವೇಂದ್ರ ಪ್ರಸಾದ್ ರವರು ಪದೋನ್ನತಿಗೊಂಡು ಉಪ ವಲಯ ಅರಣ್ಯ ಅಧಿಕಾರಿಯಾಗಿ ಬಂಟ್ವಾಳ ವಲಯದ ಐಸಿಟಿ ಶಾಖೆಗೆ ವರ್ಗಾವಣೆ

Suddi Udaya

ಉಜಿರೆ: ರಾ.ಸೇ ಯೋಜನೆಯ ವಿಶೇಷ ಕಾರ್ಯಾಗಾರ ಉದ್ಘಾಟನೆ

Suddi Udaya

ಉಜಿರೆ ಎಸ್ ಡಿ ಎಂ ಕಾಲೇಜಿಗೆ ಡಾ. ವೀರೇಂದ್ರ ಹೆಗ್ಗಡೆಯವರ ಭೇಟಿ

Suddi Udaya

ಮಚ್ಚಿನ ಸರಕಾರಿ ಪ್ರೌಢ ಶಾಲೆಯಲ್ಲಿ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ವಿಶೇಷ ತರಗತಿಯ ಸಮಾರೋಪ ಕಾರ್ಯಕ್ರಮ

Suddi Udaya

ಮಚ್ಚಿನ ಸರಕಾರಿ ಪ್ರೌಢಶಾಲೆಗೆ ಬ್ಯಾಂಕ್ ಆಫ್ ಬರೋಡ ವತಿಯಿಂದ ಟೇಬಲ್ ಹಾಗೂ ಹಣ್ಣಿನ ಗಿಡ ವಿತರಣೆ

Suddi Udaya
error: Content is protected !!