24 C
ಪುತ್ತೂರು, ಬೆಳ್ತಂಗಡಿ
April 3, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆ

ಉಜಿರೆ: ಸಮಾಜದ ಪ್ರತಿಯೊಬ್ಬ ಸದಸ್ಯರು ಘಟಕದ ಪ್ರತಿಯೊಂದು ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಯಶಸ್ಸು ಸುಲಭ ಸಾಧ್ಯ ಎಂದು ದೇವಾಂಗ ಸಮಾಜ ಉಜಿರೆ ವಲಯದ ಮಾಜಿ ಅಧ್ಯಕ್ಷ ಎಂ.ಡಿ.ಭಾಸ್ಕರ್ ಹೇಳಿದರು.

ಇವರು ಮೂಲಾರು ವಾಸುದೇವ ದೇವಾಂಗ ರವರ ಮನೆಯಲ್ಲಿ ನಡೆದ ದೇವಾಂಗ ಸಮಾಜ ಮುಂಡಾಜೆ ಘಟಕದ ತ್ರೈಮಾಸಿಕ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು. ವಲಯದ ಸಂಘಟನಾ ಕಾರ್ಯದರ್ಶಿ ರೋಹಿತ್ ಕಾಶಿಬೆಟ್ಟು ರವರು ಘಟಕದ ಸಮುದಾಯ ಚಟುವಟಿಕೆಗಳನ್ನು ವಿಸ್ತರಿಸಲು ಆರ್ಥಿಕ ಕ್ರೋಢೀಕರಣ ಮಾಡಬೇಕೆಂದು ಸಲಹೆ ನೀಡಿದರು.

ಸಭೆಯಲ್ಲಿ ವಲಯಾಧ್ಯಕ್ಷ ಮತ್ತು ಮುಂಡಾಜೆ ಗ್ರಾಮ ಪಂಚಾಯತ್ ಸದಸ್ಯ ರವಿ ನೆಯ್ಯಾಲುರವರು ಮುಂಡಾಜೆ ಘಟಕದ ಕಾರ್ಯನಿರ್ವಹಣೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಸಭೆಯ ಅಧ್ಯಕ್ಷತೆಯನ್ನು ದೇವಾಂಗ ಸಮಾಜ ಮುಂಡಾಜೆ ಘಟಕದ ಅಧ್ಯಕ್ಷ ರಾಜಗೋಪಾಲ ವಹಿಸಿದ್ದರು.

ಕು.ಸೌಭಾಗ್ಯ ಪ್ರಾರ್ಥಿಸಿದರು.ಶ್ರೀಮತಿ ಸೌಮ್ಯ ಗಣೇಶ್ ಸ್ವಾಗತಿಸಿದರು.ಸವಿತಾ ಕೇಶವ ದೇವಾಂಗ ವಂದಿಸಿದರು ಘಟಕದ ಕಾರ್ಯದರ್ಶಿ ಮಹೇಂದ್ರ ದೇವಾಂಗ ಕೊಡಂಗೆ ಕಾರ್ಯಕ್ರಮ ನಿರೂಪಿಸಿದರು.

Related posts

ಕೊಕ್ಕಡ ಶ್ರೀ ಲಕ್ಷ್ಮೀ ಲೇಡಿಸ್ ಬ್ಯೂಟಿಪಾರ್ಲರ್ ಸ್ಥಳಾಂತರಗೊಂಡು ಶುಭಾರಂಭ

Suddi Udaya

ಹಾಡು ಹಗಲೇ ಗರ್ಡಾಡಿಯಲ್ಲಿ ಮನೆಗೆ ನುಗ್ಗಿದ ಕಳ್ಳರು: ಚಿನ್ನಾಭರಣ ಸಹಿತ ನಗದು ಕಳವು

Suddi Udaya

ಬಳಂಜ: ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಮಿತಿಯಿಂದ ಶ್ರೀ ಗುರು ಪೂಜಾ

Suddi Udaya

ಕಾಜೂರು ಉರೂಸ್ ಗೆ ಅದ್ದೂರಿ ಚಾಲನೆ

Suddi Udaya

ಮುಂಡೂರು: ವಿಶ್ವನಾಥ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದಿಂದ ಹೊಗೆ ಮನೆಗೆ ಬೆಂಕಿ‌ ಬಿದ್ದು ನಷ್ಟ ಅನುಭವಿಸಿದ ಕಿನ್ನಿ ಗೌಡರಿಗೆ ಪರಿಹಾರ ನಿಧಿ ಹಸ್ತಾಂತರ

Suddi Udaya
error: Content is protected !!