April 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿವರದಿ

ಅಡಿಕೆ ಆಮದು ನಿಷೇಧ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯ: ಮಾ.7 ರಂದು ದ.ಕ ಜಿಲ್ಲಾಧಿಕಾರಿ ಕಛೇರಿ ಎದುರು ಬೃಹತ್ ಪ್ರತಿಭಟನೆ

ಬೆಳ್ತಂಗಡಿ: ದ.ಕ ಜಿಲ್ಲೆಯಲ್ಲಿ ಅಡಿಕೆಯ ಆಮದಿನಿಂದಾಗಿ ಅಡಿಕೆಯ ಬೆಲೆ ಕುಸಿದು ರೈತರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಜಿಲ್ಲೆಯ ಎಲ್ಲಾ ರೈತ ಒಕ್ಕೂಟವು ಅಡಿಕೆ ಆಮದು ನಿಷೇಧಿಸುವಂತೆ ಹಾಗೂ ಇತರೆ ಬೇಡಿಕೆಗಳೊಂದಿಗೆ ಮಾ. 7 ರಂದು ಗುರುವಾರದಂದು ದ.ಕ ಜಿಲ್ಲಾಧಿಕಾರಿ ಕಚೇರಿ ಎದುರು ಬೃಹತ್ ಪ್ರತಿಭಟನಾ ಸಭೆಯನ್ನು ಆಯೋಜಿಸಿದ್ದಾರೆ ಎಂದು ರೈತ ಸಂಘಟನೆಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಆಸ್ವಾಲ್ಡ್ ಫೆರ್ನಾಂಡಿಸ್ ಹೇಳಿದ್ದಾರೆ.


ಅವರು ಮಾ.2ರಂದು ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಜಾಗತೀಕರಣದಿಂದ ವಿಶ್ವ ವ್ವಾಣಿಜ್ಯ ವ್ಯಾಪಾರ ಸಂಸ್ಥೆ WTO ಒಪ್ಪಂದದೊಂದಿಗೆ ರೈತ ವಿರೋಧಿ ನೀತಿಗಳಿಂದಾಗಿ ಸಾಲಗಾರರಾಗಿ ಮೂರುವರೆ ಲಕ್ಷಕ್ಕಿಂತ ಹೆಚ್ಚು ರೈತರು ಆತ್ಮಹತ್ಯೆಗೆ ಶರಣಾಗಿದ್ದಾರೆ. ನಮ್ಮ ಜಿಲ್ಲೆಯಲ್ಲಿ ಅಡಿಕೆ ಹಾಗೂ ಬೆಳೆಗಳು ಮುಖ್ಯ ಆರ್ಥಿಕ ಬೆಳೆಗಳಾಗಿ ರೈತರು ತಮ್ಮ ಆರ್ಥಿಕ ಪರಿಸ್ಥಿತಿಯನ್ನು ಸದೃಢವಾಗಿ ಕಾಪಾಡಿಕೊಂಡು ಬಂದಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಎಳೆ ಚುಕ್ಕಿ ರೋಗ ಹಳದಿ ಎಲೆ ರೋಗ ಹಾಗೂ ತೆಂಗಿನ ಬೆಲೆಕುಸಿತದಿಂದಾಗಿ ನಮ್ಮ ಜಿಲ್ಲೆಯಲ್ಲಿ ರೈತರು ಆತ್ಮಹತ್ಯೆಗೆ ಶರಣಾಗುವ ಪರಿಸ್ಥಿತಿಯು ಉಂಟಾಗಿದೆ. ಈ ನಿಟ್ಟಿನಲ್ಲಿ ಎಲ್ಲಾ ರೈತ ಸಂಘಗಳ ಒಕ್ಕೂಟವು ರಚನೆಯಾಗಿ ರೈತರ ಸಮಸ್ಯೆಗಳಿಗೆ ಪರಿಹಾರವನ್ನು ತರುವ ಪ್ರಯತ್ನವು ಪ್ರಾರಂಭವಾಗಿದೆ ಎಂದರು.


ಸುರೇಶ್ ಭಟ್ ಕೊಜಂಬೆ ಮಾತನಾಡಿ, ಅಡಿಕೆಯ ಆಮದಿನಿಂದ ಬೆಲೆ ಕುಸಿತ ಉಂಟಾಗಿ ಜಿಲ್ಲೆಯ ರೈತರಲ್ಲಿ ಆತಂಕದ ಪರಿಸ್ಥಿತಿ ಉಂಟಾಗಿದೆ. ಅಡಿಕೆ ಆಮದುನಲ್ಲಿ ದೊಡ್ಡ ಮಾಫಿಯಾ ಕಾಯ೯ನಿವ೯ಹಿಸುತ್ತಿದೆ
ಅಡಿಕೆ ಹಾಗೂ ತೆಂಗಿನ ಆಮದಲ್ಲೂ ಸಂಪೂರ್ಣವಾಗಿ ನಿಷೇಧಿಸಬೇಕು.ಕಾರ್ಪೊರೇಟ್ ಕಂಪನಿಗಳ 14 ಲಕ್ಷ ಕೋಟಿ ಸಾಲ ಮನ್ನ ಮಾಡಿದ ಸರಕಾರದ ತಪ್ಪು ನೀತಿಯಿಂದಾಗಿ ಸರಕಾರವ ರೀತಿಯಿಂದಾಗಿ ರೈತರು ಸಾಲಗಾರರಾಗಿದ್ದಾರೆ ಆದ್ದರಿಂದ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.


ಸಂಯೋಜಕ ಸನ್ನಿ ಡಿ ಸೋಜ ಮಾತನಾಡಿ, ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು
ಕಾನೂನುಬದ್ಧಗೊಳಿಸಬೇಕು., ಸ್ವಾಮಿನಾಥನ್ ಆಯೋಗದ ಶಿಫಾರಸುಗಳನ್ನು ಜಾರಿ ಮಾಡಬೇಕು, ಕೃಷಿಕರು ಮತ್ತು ಕೃಷಿಕಾರ್ಮಿಕರಿಗೆ ಪಿಂಚಣಿ ನೀಡಬೇಕು. ಕೃಷಿ ಸಾಲಗಳನ್ನು ಮನ್ನಾ ಮಾಡಬೇಕು, ರೈತ ಹೋರಾಟಗಾರರ ಮೇಲಿರುವ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯಬೇಕು. ಲಖೀಮ್ ಪುರ ಖೇರಿ ಹಿಂಸಾಚಾರದಲ್ಲಿ ಬಲಿಪಶುಗಳಾದವರಿಗೆ ನ್ಯಾಯ ಸಿಗಬೇಕು, 2013ರ ಭೂಸ್ವಾಧೀನ ಕಾಯ್ದೆಯನ್ನು (ಭೂ ಸ್ವಾಧೀನದ ವೇಳೆ ಸರಿಯಾದ ಪರಿಹಾರ, ಪಾರದರ್ಶಕತೆ) ಪುನಃಸ್ಥಾಪಿಸಬೇಕು, ವಿಶ್ವವಾಣಿಜ್ಯ ಸಂಸ್ಥೆಯಿಂದ ಭಾರತ ಹೊರಬರಬೇಕು ಎಂದು ಆಗ್ರಹಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಕೆ.ಎಂ ರಮ್ಲ ಉಪಸ್ಥಿತರಿದ್ದರು.

Related posts

ಇಲಂತಿಲ ಗ್ರಾ.ಪಂ. ನಲ್ಲಿ ವಿಕಲ ಚೇತನ ವಿಶೇಷ ಗ್ರಾಮ ಸಭೆ

Suddi Udaya

ವೇಣೂರು: ತುಂಬೆದಲ್ಕೆ ನಿವಾಸಿ ಕೃಷಿಕ ಸೇಸಪ್ಪ ಪೂಜಾರಿ ನಿಧನ

Suddi Udaya

ಇಲಾಖಾಧಿಕಾರಿಗಳ ಗೈರು ಹಾಜರಾತಿಗೆ ಗ್ರಾಮಸ್ಥರು ಅಸಮಾಧಾನ- ಅಳದಂಗಡಿ ಗ್ರಾಮ ಸಭೆ

Suddi Udaya

ಬೆಳ್ತಂಗಡಿ ಎಸ್ ಡಿ ಎಂ ಆಂ.ಮಾ. ಶಾಲೆಯಲ್ಲಿ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಆಚರಣೆ

Suddi Udaya

ನಾರಾವಿ ಸಂತ ಅಂತೋನಿ ಪ.ಪೂ. ಕಾಲೇಜಿನಲ್ಲಿ ನಶಾಮುಕ್ತ ಭಾರತ -ಪ್ರತಿಜ್ಞಾ ಸ್ವೀಕಾರ

Suddi Udaya

ಪಡ್ಡಂದಡ್ಕ ಮಸೀದಿಯಲ್ಲಿ ಮಿಲಾದುನ್ನೆಭಿ ಆಚರಣೆ

Suddi Udaya
error: Content is protected !!