ಗುರುವಾಯನಕೆರೆ: ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರ ರತ್ನಗಿರಿ ಗುರುವಾಯನಕೆರೆ ಇದರ ಜೀರ್ಣೋದ್ದೊರ ಹಾಗೂ ಪುನರ್ ಪ್ರತಿಷ್ಠಾ ಮಹೋತ್ಸವ ಹಾಗೂ ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಸಮಾರೋಪ ಸಮಾರಂಭ ಮಾ2 ರಂದು ನಡೆಯಿತು.
ಪ್ರಸಿದ್ದ ವಾಗ್ಮಿ,ಲೇಖಕರು ಶ್ರೀಕಾಂತ್ ಶೆಟ್ಟಿ ತುಳುನಾಡಿನಲ್ಲಿ ದೈವರಾಧನೆಯ ಕುರಿತು ಉಪನ್ಯಾಸ ನೀಡಿದರು.
ಸನ್ಯಾಸಿ ಗುಳಿಗ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವೇಶ್ ಕಿಣಿ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 600 ವರ್ಷಗಳ ಇತಿಹಾಸವಿದೆ. ಕಡ್ಲಗುಡ್ಡೆ ಎಂಬುದು ಹಿಂದಿನ ಹೆಸರು.1987 ನಂತರ ಈ ಕ್ಷೇತ್ರದಲ್ಲಿ ನಿರಂತರ ಆರಾಧನೆ ನಡೆಯುತ್ತ ಬರುತ್ತಿದೆ.2005 ರಲ್ಲಿ ಗುಳಿಗ ಪ್ರತಿಷ್ಠಾ ನಡೆಯಿತು.
ಪ್ರತಿವರ್ಷ ನಿರಂತರವಾಗಿ ಕ್ಷೇತ್ರದಲ್ಲಿ ಗಗ್ಗರ ಸೇವೆ ನಡಿತಾ ಬರುತ್ತಿದೆ. ಊರಿಗೆ ಬರುವ ಕಷ್ಟ ನಷ್ಟಗಳು ದೂರವಾಗಿ ನೆಮ್ಮದಿಯ ವಾತಾವರಣ ಸೃಷ್ಟಿಯಾಗಿದೆ.ಅರ್ಥಪೂರ್ಣ ಕಾರ್ಯಕ್ರಮ ಇಲ್ಲಿ ನಡೆದಿದೆ.ನಾಗಾರಾಧನೆ ಮತ್ತು ದೈವ- ದೇವರ ಆರಾಧನೆಯ ಅನುಗ್ರಹದಿಂದ ಈ ಕ್ಷೇತ್ರ ಬೆಳಗಿದೆ ಎಂದರು. ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಪ್ರಧಾನ ಸಂಚಾಲಕ ಸಂಪತ್ ಬಿ ಸುವರ್ಣ ಸಮ್ಮೇಳನದ ನಿರ್ಣಯ ಮಂಡಿಸಿದರು.
ವೇದಿಕೆಯಲ್ಲಿ ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಹೆಚ್.ಡಿ, ನಾಳ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಭುವನೇಶ್ ಗೇರುಕಟ್ಟೆ, ಶ್ರೀ ಸನ್ಯಾಸಿ ಗುಳಿಗ ಕ್ಷೇತ್ರದ ಆಡಳಿತ ಮೊಕ್ತೇಸರ ವಿಶ್ವೇಶ್ ಕಿಣಿ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಪರ್ವ ದೈವರಾಧನೆಯ ಮಹಾ ಸಮ್ಮೇಳನದ ಪ್ರಧಾನ ಸಂಚಾಲಕ ಸಂಪತ್ ಬಿ ಸುವರ್ಣ ಪ್ರಾಸ್ತಾವಿಕ ಮಾತನಾಡಿ ಸ್ವಾಗತಿಸಿದರು.
ಕಾರ್ಯಕ್ರಮದಲ್ಲಿ ವಿವಿಧ ಸಮಿತಿಗಳ ಸಂಚಾಲಕರನ್ನು ಗೌರವಿಸಲಾಯಿತು.