September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ವರ್ತಕರ ಸಂಘದ ಸಭೆ: ಮಾ.10 ರಂದು ಜನಸಂಪರ್ಕ ಕಾರ್ಯಕ್ರಮ ಮಾಡಿಸುವುದಾಗಿ ತೀರ್ಮಾನ

ಬೆಳ್ತಂಗಡಿ: ವರ್ತಕರ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆಯು ಮಾ.4ರಂದು ಬೆಳ್ತಂಗಡಿ ಲೋಬೊ ಟವರ್ಸ್ ನಲ್ಲಿ ನಡೆಯಿತು.

ಸಭೆಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯ ಗೊಂದಲ ಹಾಗೂ ಪರಿಹಾರದ ಚರ್ಚೆಯ ಬಗ್ಗೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ಮುಖ್ಯ ರಸ್ತೆಯಲ್ಲಿ ವರ್ತಕರಿಗೆ ಹಾಗೂ ಕಟ್ಟಡ ಮಾಲಿಕರ ಸಮಸ್ಯೆಯನ್ನು ಆಲಿಸಲು ಖುದ್ದಾಗಿ ಶಾಸಕರು ಕಾಮಗಾರಿ ವೀಕ್ಷಣೆ ಹಾಗೂ ಹೆದ್ದಾರಿ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು , ಜನ ಪ್ರತಿನಿಧಿಗಳೊಂದಿಗೆ ಜನ ಸಂಪರ್ಕ ಕಾರ್ಯಕ್ರಮ ಮಾ.10ರಂದು ನಡೆಸುದಾಗಿ ತೀರ್ಮಾನಿಸಲಾಯಿತು.


10:30ಗೆ ಬಂಟರ ಭವನ, 11.45ಕ್ಕೆ ವಾಣಿ ಕಾಲೇಜು ಸಮೀಪ , 12.00 ಕ್ಕೆ ಚರ್ಚ್ ರೋಡ್, 12.40 ಕ್ಕೆ ಅಯ್ಯಪ್ಪ ಮಂದಿರ ಸಮೀಪ, 1.30ಕ್ಕೆ ಮಾರಿಗುಡಿ ಸಮೀಪ. 2.O0ಕ್ಕೆ ಬೆಳ್ತಂಗಡಿ ಮೂರು ಮಾರ್ಗದ ಬಳಿ, 2.30ಕ್ಕೆ ಬೆಳ್ತಂಗಡಿ ಬಸ್ಸು ನಿಲ್ದಾಣ ಜನ ಸಂಪರ್ಕ ಕಾರ್ಯಕ್ರಮ ನಡೆಯಲಿದೆ.

ಹೆಚ್ಚಿನ ವರ್ತಕರು ಹಾಜರಿದ್ದು ತಮ್ಮ ತಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿ ವರ್ತಕರ ಸಂಘದ ಅಧ್ಯಕ್ಷ ಪುಷ್ಪರಾಜ್ ಶೆಟ್ಟಿ ತಿಳಿಸಿದ್ದಾರೆ.

Related posts

ಬ್ಲಾಕ್ ಕಾಂಗ್ರೆಸ್ ಬೆಳ್ತಂಗಡಿ ಗ್ರಾಮೀಣ ಘಟಕದ ಉಪಾಧ್ಯಕ್ಷರಾಗಿ ಬಿ.ಅಶ್ರಫ್ ನೆರಿಯಾ ಆಯ್ಕೆ

Suddi Udaya

ಚಾರ್ಮಾಡಿ ಶ್ರೀ ಕ್ಷೇತ್ರ ಮತ್ತೂರು ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ಮೊಸರು ಕುಡಿಕೆ ಉತ್ಸವ

Suddi Udaya

ಧರ್ಮಸ್ಥಳ ಗ್ರಾಮವನ್ನು ಏಕ ಬಳಕೆ ಪ್ಲಾಸ್ಟಿಕ್ ಮುಕ್ತ ಗ್ರಾಮವೆಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ ವೀರೇಂದ್ರ ಹೆಗ್ಗಡೆಯವರಿಂದ ಘೋಷಣೆ: ರಾಜ್ಯದ 5 ನಗರದಲ್ಲಿ, ಸುಮಾರು 6078 ಗ್ರಾ.ಪಂ ಗಳಲ್ಲಿ ಮೊದಲ ಗ್ರಾಮವಾಗಿ ಧರ್ಮಸ್ಥಳ ಗ್ರಾಮ ಆಯ್ಕೆ

Suddi Udaya

ಓಡಿಲ್ನಾಳ ಕಿರಾತಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವರಮಹಾಲಕ್ಷ್ಮಿ ಪೂಜೆಯ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ಮೊಗ್ರು: ಶ್ರೀರಾಮ ಶಿಶು ಮಂದಿರದ ಪ್ರವೇಶೋತ್ಸವ ಮತ್ತು ಗಣಹೋಮ

Suddi Udaya

ಎತ್ತರದ ಸ್ಥಾನಲ್ಲಿ ಕೂರುವಂತೆ ಮಾಡುತ್ತೇನೆ
ಶಾಸಕ ಹರೀಶ್ ಪೂಂಜರಿಗೆ ದೈವದ ಅಭಯ

Suddi Udaya
error: Content is protected !!