ಉಜಿರೆ: ಎಸ್ ಡಿ ಎಮ್ ಪಾಲಿಟೆಕ್ನಿಕ್ ನ ಕಂಪ್ಯೂಟರ್ ಸೈನ್ಸ್ ವಿಭಾಗದ ವತಿಯಿಂದ ಟೆಕ್ ವ್ಯುಹ್ (Tech Vyuh) ಕಾರ್ಯಕ್ರಮವು ಮಾ.6ರಂದು ಆಯೋಜಿಸಲಾಗಿತ್ತು .
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಡಾ. ಹೆಚ್ ಮನೋಜ್ ಟಿ ಗಡಿಯಾರ್ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಮೂರು ತತ್ವಗಳಾದ ನಿರ್ದೇಶನ , ಪ್ರಯತ್ನ ಮತ್ತು ಶಿಸ್ತನ್ನು ಅನುಸರಿಸುವ ಮೂಲಕ ಜೀವನದಲ್ಲಿ ಹೇಗೆ ಯಶಸ್ವಿಯಾಗಬಹುದು ಎಂಬುದರ ಕುರಿತು ಮಾತನಾಡಿದರು.
ಕಾರ್ಯಕ್ರಮದ ಗೌರವ ಅತಿಥಿಯಾದ ಕಾಲೇಜಿನ ಹಳೆ ವಿದ್ಯಾರ್ಥಿ ಶಶಿಕಾಂತ್ ಮಾತನಾಡಿ ವಿದ್ಯಾರ್ಥಿಗಳಿಗೆ ಉನ್ನತ ಅಧ್ಯಯನವನ್ನು ಮುಂದುವರಿಸಿ ಹಾಗೂ ಭವಿಷ್ಯಕ್ಕಾಗಿ ಸೂಕ್ತವಾದ ಶೈಕ್ಷಣಿಕ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ ಡಿ ಎಂ ನ ವಿದ್ಯಾರ್ಥಿ ಕ್ಷೇಮ ಪಾಲನಾ ಅಧಿಕಾರಿ ಸೋಮಶೇಖರ್ ಅತಿಥಿಯಾಗಿ ಆಗಮಿಸಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ವಿಭಾಗದ ಮುಖ್ಯಸ್ಥರಾದ ದಿನೇಶ್ ಹಾಗೂ ಕಾಲೇಜಿನ ವ್ಯವಸ್ಥಾಪಕರಾದ ಚಂದ್ರನಾಥ್ ಜೈನ್ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ವಿದ್ಯಾರ್ಥಿಯಾದ ಹನಿಶ್ ಸ್ವಾಗತಿಸಿ, ಸ್ಫೂರ್ತಿಯವರು ಧನ್ಯವಾದವಿತ್ತರು ಹಾಗೂ ವಿದ್ಯಾರ್ಥಿನಿ ಪುನೀತ ಕಾರ್ಯಕ್ರಮ ನಿರೂಪಿಸಿದರು.