April 6, 2025
ಗ್ರಾಮಾಂತರ ಸುದ್ದಿಚಿತ್ರ ವರದಿಜಿಲ್ಲಾ ಸುದ್ದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಪುಂಜಾಲಕಟ್ಟೆ- ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಅಭಿವೃದ್ಧಿ ಹೆಸರಲ್ಲಿ ದೂಳು ತಿನ್ನಿಸಬೇಡಿ, ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ, ರಸ್ತೆ ಬೇಕು ದೂಳು ಬೇಡ ನಾಮಫಲಕ ಅಳವಡಿಕೆ:

ಬೆಳ್ತಂಗಡಿ: ಪುಂಜಾಲಕಟ್ಟೆಯಿಂದ ಚಾರ್ಮಾಡಿಯವರೆಗೆ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವೇಳೆ ಧೂಳಿನಿಂದ ಆಗುತ್ತಿರುವ ಸಮಸ್ಯೆ ಬಗ್ಗೆ ಸಾರ್ವಜನಿಕರು ರಸ್ತೆ ಬದಿಯಲ್ಲಿ ಪ್ರತಿಭಟನಾ ರೀತಿಯಲ್ಲಿ ಸೂಚನಾ ಫಲಕ ಅಳವಡಿಸಿ, ಅಸಮಾಧಾನ ಹೊರಹಾಕಿದ್ದಾರೆ.

ಇಂದು ಪುಂಜಾಲಕಟ್ಟೆ – ಚಾರ್ಮಾಡಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಚಾರದಲ್ಲಿ ಬೆಳ್ತಂಗಡಿ ನಗರದಲ್ಲಿ ಹಾದು ಹೋಗುವ ರಸ್ತೆಗಳ ಬಗ್ಗೆ ವರ್ತಕರ ಹಾಗೂ ಕಟ್ಟಡ ಮಾಲಿಕರ ಗೊಂದಲಗಳಿಗೆ ಪರಿಹಾರ ಕಂಡುಕೊಳ್ಳಲು ಶಾಸಕ ಹರೀಶ್ ಪೂಂಜ ನೇತೃತ್ವದಲ್ಲಿ ವರ್ತಕರ ಸಂಘದ ಬೇಡಿಕೆಯ ಮೇರೆಗೆ ಹೆದ್ದಾರಿಯ ಅಧಿಕಾರಿಗಳು, ಗುತ್ತಿಗೆದಾರರು, ಕಂದಾಯ ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಜನಸಂಪರ್ಕ ಕಾರ್ಯಕ್ರಮ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈ ನಾಮ ಫಲಕಗಳು ಗಮನ ಸೆಳೆಯಿತು.

ಅಭಿವೃದ್ಧಿ ಹೆಸರಲ್ಲಿ ದೂಳು ತಿನ್ನಿಸಬೇಡಿ, ರಸ್ತೆ ಅಗಲೀಕರಣ ಜನಸ್ನೇಹಿಯಾಗಿರಲಿ, ರಸ್ತೆ ಬೇಕು ದೂಳು ಬೇಡ ಎಂಬ ಹಲವಾರು ಫಲಕಗಳು ರಸ್ತೆಯುದ್ದಕ್ಕೂ ಅಳವಡಿಸಲಾಗಿದೆ.ಕಳೆದ ಕೆಲವು ಸಮಯಗಳಿಂದ ನಾಗಪುರ ಮೂಲದ ಗುತ್ತಿಗೆದಾರರು ಹೆದ್ದಾರಿ ಕಾಮಗಾರಿ ನಡೆಸುತಿದ್ದು, ದೂಳಿನಿಂದಾಗಿ ರಸ್ತೆಯಲ್ಲಿ ಸಂಚಾರ ಮಾಡದಂತಹ ಸ್ಥಿತಿ ನಿರ್ಮಾಣವಾಗಿದೆ. ವಾಹನ ದಟ್ಟಣೆ ಹೆಚ್ಚಾಗಿರುವ ಈ ರಸ್ತೆಯಲ್ಲಿ ದೂಳಿನಿಂದಾಗಿ ದ್ವಿಚಕ್ರ ಸೇರಿದಂತೆ ಇತರ ವಾಹನ ಸಂಚರಿಸಲು ಹರ ಸಾಹಸ ಪಡುವಂತಾಗಿದೆ ಸಾರ್ವಜನಿಕರು,ವಿದ್ಯಾರ್ಥಿಗಳು ದೂಳಿನಿಂದಾಗಿ ಸಮಸ್ಯೆ ಎದುರಿಸುತ್ತಿದ್ದಾರೆ.

ಸಾರ್ವಜನಿಕರು ಈ ಸಮಸ್ಯೆಗಳನ್ನು ಯಾರಲ್ಲಿ ಹೇಳಿಕೊಳ್ಳುವುದು ಎಂದು ತಿಳಿಯದೇ ಇಂದು ಶಾಸಕರು, ಅಧಿಕಾರಿಗಳು ಹೆದ್ದಾರಿಯ‌ ಕೆಲವು ಕಡೆಗಳಿಗೆ ಬರುತ್ತಿರುವ ಹಿನ್ನೆಲೆಯಲ್ಲಿ ಈ ರೀತಿ ರಸ್ತೆ ಬದಿಯಲ್ಲಿ ಫಲಕಗಳನ್ನು ಅಳವಡಿಸಿ ಸಂಬಂಧ ಪಟ್ಟವರ ಗಮನಕ್ಕೆ ತರುವ ಪ್ರಯತ್ನ ಮಾಡಿದ್ದಾರೆ.

Related posts

ವಿಧಾನ ಪರಿಷತ್ ಉಪ ಚುನಾವಣೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಉಸ್ತುವಾರಿಗಳ ನೇಮಕ

Suddi Udaya

ತಣ್ಣೀರುಪಂತ: ಅಳಕೆ ಎಂಬಲ್ಲಿ ಕತ್ತು ಕೊಯ್ದುಕೊಂಡ ಸ್ಥಿತಿಯಲ್ಲಿ ವೃದ್ಧ ಸಾವು : ಕೊಲೆಯೇ, ಆತ್ಮಹತ್ಯೆಯೇ ಪೊಲೀಸರ ತನಿಖೆ

Suddi Udaya

ಮಾ.9: ಧರ್ಮಸ್ಥಳದ ಪಶು ಆಸ್ಪತ್ರೆಯ ನೂತನ ಕಟ್ಟಡ ಲೋಕಾರ್ಪಣೆ

Suddi Udaya

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದುರ್ಗಾದೇವಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Suddi Udaya

ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ; ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾಗಿ ಕುಶಾಲಪ್ಪ ಗೌಡ ಆಯ್ಕೆ

Suddi Udaya

ಬಿಜೆಪಿ ಪಕ್ಷದ ಅಭ್ಯರ್ಥಿ ಶಾಸಕ ಹರೀಶ್ ಪೂಂಜ ರವರಿಗೆ ಪ್ರಮಾಣಪತ್ರ ವಿತರಣೆ

Suddi Udaya
error: Content is protected !!