32.6 C
ಪುತ್ತೂರು, ಬೆಳ್ತಂಗಡಿ
November 24, 2024
ಗ್ರಾಮಾಂತರ ಸುದ್ದಿಚಿತ್ರ ವರದಿ

ನಾವರ ಶ್ರೀ ಮಹಾಲಿಂಗೇಶ್ವರ ದೇಗುಲದ ಬ್ರಹ್ಮಕಲಶೋತ್ಸವ ಚಪ್ಪರ ಮುಹೂರ್ತ

ನಾವರ: ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಅಂಗವಾಗಿ ಮಾ.10 ರಂದು ಚಪ್ಪರ ಮುಹೂರ್ತ ನಡೆಯಿತು.

ಅಳದಂಗಡಿ ಶ್ರೀ ಕ್ಲಿನಿಕ್ ವೈದ್ಯರಾದ ಡಾ.ಎನ್.ಎಂ ತುಳಪುಳೆ ಚಪ್ಪರ ಮುಹೂರ್ತ ನೆರವೇರಿಸಿ ಮಾತಾನಾಡಿ ನಾವರ ದೇವಸ್ಥಾನದ ಎಲ್ಲಾ ಕೆಲಸ ಕಾರ್ಯಗಳು ಯಶಸ್ವಿಯಾಗಿ ನಡೆದು ಎಲ್ಲಾ ಭಕ್ತ ವೃಂದದವರನ್ನು ಸೆಳೆಯುವಂತಾಗಲಿ. ಅದರಂತೆ ಯಶಸ್ವಿಗೆ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಿಕೊಂಡು ದೇವಸ್ಥಾನದ ಜೀರ್ಣೋದ್ಧಾರ ಬ್ರಹ್ಮಕಲಶೋತ್ಸವ ಕೆಲಸ ಕಾರ್ಯಗಳಿಗೆ ರೂ.52,000 ಮೊತ್ತದ ದೇಣಿಗೆಯನ್ನು ನೀಡಿದರು.ಸಮಾರಂಭದ ಅಧ್ಯಕ್ಷತೆಯನ್ನು ಬೊನ್ನಿಜೆ ರವಿರಾಜ ಹೆಗ್ಡೆ ವಹಿಸಿದ್ದರು.ವೇದಿಕೆಯಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ನಿತ್ಯಾನಂದ ನಾವರ, ಶ್ರೀ ಕ್ಷೇತ್ರ ಧ.ಗ್ರಾ.ಯೋಜನೆಯ ಮೇಲ್ವಿಚಾರಕರಾದ ಸುಮಂಗಲ, ವ್ಯವಸ್ಥಾಪನಾ ಸಮಿತಿ ಸದಸ್ಯ ಸದಾನಂದ ಎಂ, ಚಪ್ಪರ ಸಮಿತಿ ಸಂಚಾಲಕ ಸಂತೋಷ ಕುಲಾಲ್, ಉಪಸ್ಥಿತರಿದ್ದರು.ಜಗದೀಶ್ ಹೆಗ್ಡೆ ನಾವರಗುತ್ತು, ನಿತ್ಯಾನಂದ ಶೆಟ್ಟಿ ನೊಚ್ಚ, ಸಾಂಸ್ಕೃತಿಕ ಸಮಿತಿ ಸಂಚಾಲಕ ವೀರೇಂದ್ರ ಕುಮಾರ್ ರಾಜಪಾದೆ, ಕುದ್ಯಾಡಿ ಸಂಚಾಲಕ ಸದಾನಂದ ಬಿ, ಸ್ವಚ್ಚತಾ ಸಮಿತಿ ಸಂಚಾಲಕ ಯಶೋಧರ ಸುವರ್ಣ ಬಿಕ್ಕಿರ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ರಾವ್, ರವಿಚಂದ್ರ ಭಟ್, ರವಿ ಪೂಜಾರಿ ಹಾರಡ್ಡೆ, ಗಿರಿಜಾ ಅಶೋಕ ನಗರ, ಅಭಿವೃದ್ಧಿ ಸಮಿತಿ ಕೋಶಾಧಿಕಾರಿ ಜಯಾನಂದ ಕೊರಲ್ಲ, ಯೋಜನೆಯ ಸೇವಾಪ್ರತಿನಿಧಿ ಪುಷ್ಪಾವತಿ ನಾವರ,ವ್ಯವಸ್ಥಾಪನಾ ಸಮಿತಿ ಸದಸ್ಯರಾದ ನಾರಾಯಣ ರಾವ್, ರವಿಚಂದ್ರ ಭಟ್, ರವಿ ಪೂಜಾರಿ ಹಾರಡ್ಡೆ, ಗಿರಿಜಾ ಅಶೋಕ ನಗರಯೋಜನೆಯ ಸೇವಾಪ್ರತಿನಿಧಿ ಪುಷ್ಪಾವತಿ ನಾವರ, ಪ್ರಗತಿ ಬಂಧು ಒಕ್ಕೂಟದ ದೇಜಪ್ಪ ದೇವಾಡಿಗ, ಚಂದಪ್ಪ ಪೂಜಾರಿ, ಪ್ರಶಾಂತ ಶೆಟ್ಟಿ ಬಿಕ್ಕಿರ, ಲಕ್ಷ್ಮಣ ಕುಲಾಲ್, ರವಿಕೋಟ್ಯಾನ್ , ರಮಾನಾಥ ಪಾದೆಮಾರಡ್ಡ, ರತ್ನಾಕರ ನಾವರ, ಕಿರಣ್ ಕಲ್ಲಾಪು, ರತ್ನಾಕರ ಹಿರಂತೊಟ್ಟು, ನಾರಾಯಣ ಪೂಜಾರಿ ಕೊಟಾಡಿ, ಕೃಷ್ಣಪ್ಪ ಕುಲಾಲ್, ಸ್ವಯಂ ಸೇವಕ ಸಮಿತಿ ಸಂಚಾಲಕ ಸುದರ್ಶನ ಹಾಗೂ ಯುವಶಕ್ತಿ , ಶಿವನಾಗ, ಸದ್ಧರ್ಮ ಸಂಘಗಳ ಸದಸ್ಯರು ಭಾಗವಹಿಸಿದ್ದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಪಿ.ಹೆಚ್ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ಅಭಿವೃದ್ಧಿ ಸಮಿತಿ ಕಾರ್ಯದರ್ಶಿ ವಿಜಯ ಕುಮಾರ್ ಜೈನ್ ಕಾರ್ಯಕ್ರಮ ನಿರ್ವಹಿಸಿದರು. ಬ್ರಹ್ಮಕಲಶೋತ್ಸವ ಪ್ರಧಾನ ಕಾರ್ಯದರ್ಶಿ ಸಂತೋಷ್ ಕುಮಾರ್ ಕಾಪಿನಡ್ಕ ವಂದಿಸಿದರು.

Related posts

ಎಕ್ಸೆಲ್ ನಲ್ಲಿ ಪ್ರತಿಭಾವಂತರಿಗೆ ಸಂಪೂರ್ಣ ಉಚಿತ ನೀಟ್ ಕೋಚಿಂಗ್

Suddi Udaya

ಅ.15-ಡಿ.31: ಶ್ರೀ ದುರ್ಗಾ ಟೆಕ್ಸ್‌ಟೈಲ್ಸ್‌ನಲ್ಲಿ ಫೆಸ್ಟಿವಲ್ ಮೆಗಾ ಡಿಸ್ಕೌಂಟ್ ಆಫರ್

Suddi Udaya

ಬಳಂಜ ಬಿಲ್ಲವ ಸಂಘದ ಧತ್ತಿನಿಧಿಗೆ ಹುಂಬೆಜೆ ರಾಮಣ್ಣ ಪೂಜಾರಿ ಸ್ಮರಣಾರ್ಥ ರೂ.10 ಸಾವಿರ ದೇಣಿಗೆ

Suddi Udaya

ಖಾಸಗಿ ಶಿಕ್ಷಣ ಸಂಸ್ಥೆಯೊಂದರ ಬಸ್ಸನ್ನು ತಡೆದು ಅಪರಿಚಿತ ವ್ಯಕ್ತಿಯಿಂದ ಚಾಲಕನ ಮೇಲೆ ಹಲ್ಲೆ

Suddi Udaya

ಬೆಳಾಲು ಗ್ರಾಮ ಪಂಚಾಯತ್ ಮಕ್ಕಳ ಗ್ರಾಮಸಭೆ

Suddi Udaya

ಖ್ಯಾತ ಚಲನಚಿತ್ರ ನಟ ವಿಜಯರಾಘವೇಂದ್ರ ಅವರ ಪತ್ನಿ ಸ್ಪಂದನಾ ನಿಧನಕ್ಕೆ ಡಾ| ಡಿ. ಹೆಗ್ಗಡೆಯವರಿಂದ ಸಂತಾಪ

Suddi Udaya
error: Content is protected !!