24.1 C
ಪುತ್ತೂರು, ಬೆಳ್ತಂಗಡಿ
September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಬೆಳ್ತಂಗಡಿ ಬಿಜೆಪಿ ಯುವಮೋರ್ಚಾದ ಕಾರ್ಯಕಾರಣಿ ಸಭೆ

ಬೆಳ್ತಂಗಡಿ : ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಇದರ ಮೊದಲ ಕಾರ್ಯಕಾರಣಿ ಸಭೆಯು ಪಕ್ಷದ ಕಚೇರಿಯಲ್ಲಿ ಮಾ.12 ರಂದು ನಡೆಯಿತು.

ಮುಂದಿನ ಜವಾಬ್ದಾರಿ ಹಾಗೂ ಮುಂದಿನ ಕಾರ್ಯ ಯೋಜನೆ ಲೋಕಸಭಾ ಚುನಾವಣಾ ತಯಾರಿ, ಕಾರ್ಯಾಚಟುವಟಿಗಳ ಬಗ್ಗೆ ಸವಿಸ್ತಾರವಾಗಿ ಯುವಮೋರ್ಚಾ ಪ್ರಭಾರಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ ತಿಳಿಸಿದರು.

ಸಭೆಯ ಅಧ್ಯಕ್ಷತೆಯನ್ನು ಮಂಡಲ ಯುವಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ವಹಿಸಿ ಯುವ ಚೌಪಾಲ್, ಟೆನ್ ಯೂತ್ ಒನ್ ಗ್ರಾಮ್ , ಗೋಡೆ ಬರಹ, ಪ್ರಧಾನಿ ನರೇಂದ್ರ ಮೋದಿಜಿ ಸಾಧನೆಯ ರೀಲ್ಸ್ ಸ್ಪರ್ಧೆಯ ಬಗ್ಗೆ, ಯುವ ಮೋರ್ಚಾ ಬಲಿಷ್ಠಗೊಳ್ಳಲು ಎಲ್ಲರೂ ಒಗ್ಗಟ್ಟಾಗಿ ಸಂಘಟತ್ಮಕವಾಗಿ ದುಡಿಯೋಣ, ಪಕ್ಷವನ್ನು ಇನ್ನಷ್ಟು ಬಲಿಷ್ಠಪಡಿಸೋಣ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷ ಪ್ರಮೋದ್ ದಿಡುಪೆ, ಜಿಲ್ಲಾ ಕಾರ್ಯಕಾರಿಣಿ ಸದಸ್ಯರಾದ ಹೇಮಂತ್ ಶೆಟ್ಟಿ ನೇತಾರ ಹಾಗೂ ಮಂಡಲ ಯುವಮೋರ್ಚಾ ಪದಾಧಿಕಾರಿಗಳು ಉಪಸ್ಥಿತರಿದ್ದರು. ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಜಯಪ್ರಸಾದ್ ಗೌಡ ಕಡಮ್ಮಾಜೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್ ಸಾವ್ಯ ಧನ್ಯವಾದವಿತ್ತರು.

Related posts

ಮೂರು ತಿಂಗಳ ಹಿಂದೆ ಗೇರುಕಟ್ಟೆ ಕೆರೆಯಲ್ಲಿ ಸಿಕ್ಕ ಶವದ ಗುರುತು ಪತ್ತೆ: ಮೃತಪಟ್ಟವರು ಗೇರುಕಟ್ಟೆಯ ಉಮರ್ ಫಾರೂಕ್ ಡಿಎನ್‌ಎ ವರದಿಯಲ್ಲಿ ದೃಢ

Suddi Udaya

ಕುಕ್ಕೇಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಮತ್ತು 15 ಹಣಕಾಸು ಯೋಜನೆಯ ಕುರಿತು ಐಇಸಿ ಚಟುವಟಿಕೆ

Suddi Udaya

ಬಂಗಾಡಿ ಸಹಕಾರಿ ವ್ಯವಸಾಯಿಕ ಸಂಘದ ವಾರ್ಷಿಕ ಮಹಾಸಭೆ; ರೂ.4.81 ಕೋಟಿ ಲಾಭ, ಸದಸ್ಯರಿಗೆ ಶೇ. 18 ಡಿವಿಡೆಂಟ್

Suddi Udaya

ಬೆಳ್ತಂಗಡಿ ವಕೀಲರ ಸಂಘದ ನೇತೃತ್ವದಲ್ಲಿ ಈದ್ ಮಿಲಾದ್ ಕಾರ್ಯಕ್ರಮ

Suddi Udaya

ಎಸ್.ವೈ.ಎಸ್ ಬೆಳ್ತಂಗಡಿ ಝೋನ್ ಮಾದರಿ ಮದುವೆ ಪ್ರಯುಕ್ತ ಡಿ.12 ರಂದು ಜಮಾಅತ್ ಪ್ರತಿನಿಧಿ ಸಂಗಮ

Suddi Udaya

ಪಡಂಗಡಿ ಗ್ರಾ.ಪಂ. ನಲ್ಲಿ ಮಹಿಳಾ ಗ್ರಾಮಸಭೆ

Suddi Udaya
error: Content is protected !!