ಅನಾಥರಾಗಿ ತಿರುಗಿಡುತ್ತಿದ್ದ ವಯೋವೃದ್ಧ ತಂದೆಯನ್ನು ಮಗನ ಜವಾಬ್ದಾರಿ ಗೆ ವಹಿಸಿದ ವೇಣೂರು ಪೋಲೀಸರು

Suddi Udaya

ಬೆಳ್ತಂಗಡಿ : ಮಾ.13ರಂದು ರಾತ್ರಿ 12 ಗಂಟೆಗೆ ನಾಲ್ಕೂರು ಗ್ರಾಮದ ಆಸುಪಾಸಿನಲ್ಲಿ ಜನ ನಿಬಿಡ ಪ್ರದೇಶದಲ್ಲಿ ವಯೋವೃದ್ಧ ರೋರ್ವರು ಅನಾಥರಾಗಿ ಹಸಿವಿನಿಂದ ನರಳುತಿದ್ದು ಸ್ಥಳೀಯ ಬಳಂಜ ಪಂಚಾಯತ್ ಸದಸ್ಯ ರವೀಂದ್ರ ಅಮೀನ್ ಬಳಗದವರು ಪೋಲೀಸ್ ರ ಸಹಾಯದಿಂದ ಅವರನ್ನು ಗುಂಡೂರಿಯ ಶ್ರೀಗುರು ಚೈತನ್ಯ ಸೇವಾಶ್ರಮದಲ್ಲಿ ತಾತ್ಕಾಲಿಕ ನೆಲೆಗೆ ವ್ಯವಸ್ಥೆ ಮಾಡಿದರು.

ಪೋಲಿಸರು ಈ ವಯೋವೃದ್ಧರ ಮಕ್ಕಳನ್ನು ಸಂಪರ್ಕಿಸಿ, ಮಾ.14ರಂದು ಇಂದು ವೇಣೂರು ಪೋಲೀಸ್ ಠಾಣೆಗೆ ಬಂದ ಮಗನಿಗೆ ಪೊಲೀಸರು ಬುದ್ಧಿವಾದ ಹೇಳಿ ಈ ವಯೋ ವೃದ್ಧ ತಂದೆಯನ್ನು ಮಗನ ಜತೆ ಕಳುಹಿಸಲಾಯಿತು.

ಕಿವಿ ಕೇಳದ ಈ ವಯೋವೃದ್ಧರಲ್ಲಿ ಸರಿಯಾದ ಮಾಹಿತಿ ತಿಳಿಯಲು ಹರಸಾಹಸ ಪಡೆಯಲಾಯಿತು.ಈ ಮೂಲಕ ಪೋಲೀಸರು ಮಗನ ಸಂಪರ್ಕ ವನ್ನು ಸಾಧಿಸಿ ಪೋಲೀಸ್ ಠಾಣೆಗೆ ಕರೆಯಿಸಿ ಸಾವ೯ಜನಿಕರ ಮೆಚ್ಚುಗೆಗೆ ಪಾತ್ರರಾದರು.

ವಯೋವೃದ್ಧ ಉಡುಪಿಯ ಶಂಕರನಾರಾಯಣ ಪೋಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯಾಗಿದ್ದು. ವಯೋ ಸಹಜ ಡಿಮೆನ್ಸಿಯಾ ರೋಗದಿಂದ ಬಳಲು ತಿದ್ದುರು. ಮನೆಯಲ್ಲಿ ನಿಲ್ಲದೆ ಊರೂರು ತಿರುಗುವ ಚಾಳಿ ಇದ್ದು.ಮರಗುಳಿತನವೂ ಇದೆ.

ಮಗನಿಗೆ ತಂದೆಯ ಹಸ್ತಾಂತರ ದ ಸಮಯ ರವೀಂದ್ರ ಅಮೀನ್ ಮತ್ತು ಸೇವಾಶ್ರಮದ ಹೊನ್ನಯ್ಯ ಕಾಟಿಪಳ್ಳ ಉಪಸ್ಥಿತರಿದ್ದರು.

Leave a Comment

error: Content is protected !!