ಉಜಿರೆ : ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಶಿಕ್ಷಣ ಸಂಸ್ಥೆಗಳ ಸಂಸ್ಕೃತ ಸಂಘದ ವತಿಯಿಂದ ನಡೆದ ‘ ಸಂಸ್ಕೃತ ಭಾಷೆ ಕಲಿಯೋಣ – ಭಾರತೀಯ ಸಂಸ್ಕೃತಿ ಅರಿಯೋಣ ‘ ಎಂಬ ಶೀರ್ಷಿಕೆಯಲ್ಲಿ ಉಜಿರೆಯ ಹಾಗೂ ಧರ್ಮಸ್ಥಳದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರಾಥಮಿಕ ಶಾಲೆ , ಪ್ರೌಢ ಶಾಲೆಗಳಲ್ಲಿ ಸಂಸ್ಕೃತ ಭಾಷಾ ಪರಿಚಯ ಅಭಿಯಾನ ನಡೆಯಿತು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿಗಳಾದ ಧರಿತ್ರಿ ಭಿಡೆ ಹಾಗೂ ಧಾರಿಣಿ, ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಅಂಜಲಿ , ಹಿರಣ್ಮಯಿ ಶೆಟ್ಟಿ , ಮನಸ್ವಿ , ಅನನ್ಯ ಎಂ.ಆರ್, ಪ್ರತೀಕ್ಷಾ ರಾವ್ , ಸೌಂದರ್ಯಾ, ಆದಿತ್ಯ ಹೆಗಡೆ ಹಾಗೂ ಪ್ರದ್ಯುನ್ ಹೆಬ್ಬಾರ್ ಇವರು ಉಜಿರೆಯ ಹಾಗೂ ಧರ್ಮಸ್ಥಳದ ಎಸ್.ಡಿ.ಎಂ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ವಿದ್ಯಾರ್ಥಿಗಳಿಗೆ ಸಂಸ್ಕೃತ ಭಾಷೆಯ ಸಾಹಿತ್ಯವನ್ನು ಪರಿಚಯಿಸುವುದರೊಂದಿಗೆ ಸಂಸ್ಕೃತ ಭಾಷೆಯ ಮಹತ್ತ್ವದ ಬಗ್ಗೆ ಹೇಳಿದರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಹಾಗೂ ಕಲಾ ವಿಭಾಗದ ಡೀನ್ ಡಾ. ಶ್ರೀಧರ ಭಟ್ ಹಾಗೂ ಪದವಿಪೂರ್ವ ಕಾಲೇಜಿನ ಸಂಸ್ಕೃತ ಭಾಷಾ ವಿಭಾಗದ ಮುಖ್ಯಸ್ಥ ಡಾ.ಪ್ರಸನ್ನಕುಮಾರ ಐತಾಳ್ ಮಾರ್ಗದರ್ಶನ ಮಾಡಿದರು.