September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿ

ಬಳಂಜ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟ, ಸಿಎ ಸಾಧಕಿ ನಿರೀಕ್ಷಾರವರಿಗೆ ಸನ್ಮಾನ

ಬಳಂಜ: ಶಿವಗಿರಿ ಕಾಪಿನಡ್ಕ ವತಿಯಿಂದ ಬಳಂಜ ವಾಲಿಬಾಲ್ ಕ್ಲಬ್ ನ ಸಹಯೋಗದೊಂದಿಗೆ ವಾಲಿಬಾಲ್ ಪಂದ್ಯಾಟ ಹಾಗೂ ಸಿಎ ಸಾಧಕಿ ನಿರೀಕ್ಷಾರವರಿಗೆ ಸನ್ಮಾನ ಬಳಂಜದಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಉಭಯ ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಕೆ.ವಸಂತ ಸಾಲಿಯಾನ್ ನೇರವೇರಿಸಿ ಶುಭಕೋರಿದರು.ಪ್ರಗತಿಪರ ಕೃಷಿಕರಾದ ಸಂತೋಷ್ ಕುಮಾರ್ ಕಾಪಿನಡ್ಕ ಅಧ್ಯಕ್ಷತೆಯನ್ನು ವಹಿಸಿದ್ದರು.

ಕ್ರೀಡಾಂಗಣದ ಉದ್ಘಾಟನೆಯನ್ನು ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಅಧ್ಯಕ್ಷ ರಂಜಿತ್ ಹೆಚ್.ಡಿ ನೇರವೇರಿಸಿ ಶುಭಕೋರಿದರು.ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಸದಸ್ಯ ಹೆಚ್.ಧರ್ಣಪ್ಪ ಪೂಜಾರಿ,ಉಜಿರೆ ಪಂಚಾಯತ್ ಪಿಡಿಓ ಪ್ರಕಾಶ್ ಶೆಟ್ಟಿ ನೊಚ್ಚ,ಬಳಂಜ ವಾಲಿಬಾಲ್ ಕ್ಲಬ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ,ಪ್ರಗತಿಪರ ಕೃಷಿಕ ಅನಿಲ್ ಕುಮಾರ್ ಮಾಳಿಗೆ ಮನೆ,ಉದ್ಯಮಿ ಸಂತೋಷ್ ಹೆಗ್ಡೆ ಮಾರುತಿ ನಿಲಯ,ನಾವರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ನಿತ್ಯಾನಂದ ನಾವರ,ಪತ್ರಕರ್ತ ಮನೋಹರ್ ಬಳಂಜ,ನ್ಯಾಯವಾದಿ ಸತೀಶ್ ರೈ ಬಾರ್ದಡ್ಕ, ಉಪಸ್ಥಿತರಿದ್ದರು.ವಿಜಯ್ ಕುಮಾರ್ ಜೈನ್ ಸ್ವಾಗತಿಸಿದರು.ಲೇಡಿ ಜೇಸಿ ಸಂಯೋಜಕಿ ಶೃತಿ ರಂಜಿತ್ ಸನ್ಮಾನಿತರ ಪರಿಚಯ ಮಾಡಿಕೊಟ್ಟರು.

Related posts

ಬೆಳ್ತಂಗಡಿ : ದಾಖಲೆಗಳಿಲ್ಲದೆ ಕಬ್ಬಿಣದ ಗುಜರಿ ವಸ್ತು ಸಾಗಾಟ: ಲಾರಿ ವಶಕ್ಕೆ ಪಡೆದು ದಂಡ ವಿಧಿಸಿದ ವಾಣಿಜ್ಯ ತೆರಿಗೆ ಇಲಾಖೆ

Suddi Udaya

ಉರುವಾಲು: ದಿನಕರ ಪೂಜಾರಿ ಕಡ್ತಿಲ ನಿಧನ

Suddi Udaya

ನನ್ನ ಸಮಾಜ ಸೇವೆಯೇ ನನಗೆ ಮುಳುವಾಯಿತು: ಬಳಂಜ ಶಾಲೆಯ ಘಟನೆ ಕುರಿತು ಪ್ರವೀಣ್ ಪೂಜಾರಿ ಲಾಂತ್ಯಾರು ಪ್ರತಿಕ್ರಿಯೆ

Suddi Udaya

ಸುಮಂತ್ ಅನುಮಾನಸ್ಪದ ಸಾವು ಪ್ರಕರಣ: ಸಹೋದರನ ಬ್ರೈನ್ ಮ್ಯಾಪಿಂಗ್ ಪರೀಕ್ಷೆ ಮುಕ್ತಾಯ

Suddi Udaya

ವೇಣೂರು: ಸುದೇರ್ದು ನಿವಾಸಿ ಸುರೇಶ ಮೂಲ್ಯ ನಿಧನ

Suddi Udaya

ಉಜಿರೆ: ಶ್ರೀ ಧ.ಮಂ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇ.ಸಿ. ವಿಭಾಗದಿಂದ ಸರ್ಕ್ಯೂಟ್ ಎಕ್ಸ್ ಪೋ 2024

Suddi Udaya
error: Content is protected !!