32.7 C
ಪುತ್ತೂರು, ಬೆಳ್ತಂಗಡಿ
October 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿ

ಎಸ್.ಡಿ.ಎಂ ಸ್ಪೀಕ್ಸ್ ಸೀಸನ್ 5: ಹೊಸ ಕಾಲದ ವೈರುಧ್ಯ ಬಿಂಬಿಸಿದ ವಿದ್ಯಾರ್ಥಿ ಕಥೆಗಾರರು

ಉಜಿರೆ : ಉಜಿರೆಯ ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಸಕ್ತ ವರ್ಷದ ಸ್ಪೀಕ್ಸ್ ಕಾರ್ಯಕ್ರಮದ ಸೀಸನ್ ಐದರ ಸಂಚಿಕೆಯಲ್ಲಿ ವಿದ್ಯಾರ್ಥಿ ಪ್ರತಿಭೆಗಳು ಪ್ರಸ್ತುತಪಡಿಸಿದ ಕಥೆಗಳು ಹೊಸ ಕಾಲದ ವೈರುಧ್ಯಗಳನ್ನು ಬಿಂಬಿಸುವಲ್ಲಿ ಯಶಸ್ವಿಯಾದವು.

ಇನ್ನೇನು ಮನದ ಮಾತು ಹೇಳಿಕೊಂಡು ಇಷ್ಟದ ಹುಡುಗನಿಗೆ ಸರ್‌ಪ್ರೆöÊಸ್ ಕೊಡಬೇಕು ಎನ್ನುವ ಹೊತ್ತಿಗೆ ಎದುರಾದ ಆಘಾತವನ್ನು ಸುಧೀಕ್ಷಾ ಅವರ ಕಥೆ ಬಿಂಬಿಸಿತು. ಎಲ್ಲರಿಂದಲೂ ಅವಮಾನಿತಗೊಂಡು ಒಡಲಬೇಗೆಯಲಿ ಬೇಯುತ್ತಲೇ ಉಸಿರಾಡಬೇಕಾದ ಅನಿವಾರ್ಯತೆಯೊಂದಿಗಿನ ಟ್ರಾನ್ಜೆಂಡರ್ ಸಂಕಟವನ್ನು ಹರ್ಷ ಅವರ ಕಥನಪ್ರಸಂಗ ಹಿಡಿದಿಟ್ಟಿತು.

ಮದುವೆಯಾಗುವುದಕ್ಕೆ ಹೆಣ್ಣು ಸಿಗದೇ ತೊಳಲಾಡುತ್ತಿರುವ ಹಳ್ಳಿಯುವಕರ ವೇದನೆಯನ್ನು ತರುಣ್‌ಕುಮಾರ್ ನಿವೇದಿಸಿದರು.

ಮದುವೆಯಾಗಲೇಬೇಕಾದ ಒತ್ತಡದ ಕಾರಣಕ್ಕಾಗಿಯೇ ಕಾಡುವ ಗಂಡಾಂತರ ಪ್ರೇತದ ಭಯ ಉಂಟುಮಾಡುವ ತಲ್ಲಣಗಳನ್ನು ಅಕ್ಷತಾ ತಮ್ಮ ಕಥೆಯ ಮೂಲಕ ದಾಟಿಸಿದರು. ಚೌಕಟ್ಟುಗಳಾಚೆಗೆ ಜಿಗಿಯುತ್ತಲೇ ಎರಡು ಜೀವಗಳ ನಡುವೆ ಏರ್ಪಡುವ ಪ್ರೇಮದ ಪಾವಿತ್ರö್ಯದ ಶಕ್ತಿಯನ್ನು ಹಳೆಯ ವಿದ್ಯಾರ್ಥಿನಿ ನೈದಿಲೆ ಶೇಷೇಗೌಡರ ಕಥೆ ಕಾಣಿಸಿತು.

ಕಾಲ ಮೇಲ್ನೋಟದಲ್ಲಿ ಎಷ್ಟೇ ಆಧುನಿಕವಾದರೂ ಇಷ್ಟದ ಹುಡುಗನನ್ನು ಒಪ್ಪಿಕೊಂಡು ಧೈರ್ಯದಿಂದ ಹೇಳಿಕೊಂಡು ಜೊತೆಯಾಗುವುದಕ್ಕೆ ಸಾಂಪ್ರದಾಯಿಕತೆಯು ಒಂದಲ್ಲ ಒಂದು ರೀತಿಯಲ್ಲಿ ಅಡ್ಡಿಯಾಗುತ್ತದೆ. ಈ ದ್ವಂದ್ವದೊಂದಿಗಿನ ಮನದ ತೊಳಲಾಟವನ್ನು ಎರಡು ಪಾತ್ರಗಳ ನಡುವಿನ ಪಿಸುಮಾತುಗಳ ದನಿಯೊಂದಿಗೆ ನಿರೂಪಿಸಿದ್ದು ಸುಧೀಕ್ಷಾ ಅವರ ‘ಕೊನೆ ಕರೆ’ ಶೀರ್ಷಿಕೆಯ ಕಥೆ. ಹುಡುಗಿಯ ಸಮ್ಮತಿಯ ಸಿಗ್ನಲ್ ಬರಲಿಲ್ಲ ಎನ್ನುವ ಕೊರಗೇ ಮಾನಸಿಕ ಒತ್ತಡ ಸೃಷ್ಟಿಸಿ ಜೀವವನ್ನೇ ಇಲ್ಲವಾಗಿಸಿಕೊಳ್ಳುವ ಈ ಕಾಲದ ಹೊಸ ತಲೆಮಾರಿನ ಯುವಸಮೂಹದ ನಿರಾಶಾವಾದಿ ಮನಸ್ಥಿತಿ ಈ ಕಥೆಯ ಮೂಲಕ ಅನಾವರಣಗೊಂಡಿತು.

ಸ್ಪೀಕ್ಸ್ ನ ಮುಖ್ಯ ಅತಿಥಿಯಾಗಿದ್ದ ಬೆಂಗಳೂರು ಆಕಾಶವಾಣಿಯ ಹಿರಿಯ ಉದ್ಘೋಷಕಿ ಬಿ.ಕೆ.ಸುಮತಿ ಮಾತನಾಡಿ ವಿದ್ಯಾರ್ಥಿ ಪ್ರತಿಭೆಗಳು ಪ್ರಸ್ತುತಪಡಿಸಿದ ಕಥೆಗಳನ್ನು ವಿಮರ್ಶಿಸಿದರು. ಸ್ಪೀಕ್ಸ್ ಐದನೇ ಸೀಸನ್‌ನ ಕಥೆಗಳೆಲ್ಲವೂ ಮೌಲಿಕ ಸಮಯವನ್ನು ಗಳಿಸಿಕೊಂಡ ಅನುಭವವನ್ನು ನೀಡಿದವು ಎಂದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿಶ್ವನಾಥ್ ಪಿ ಅವರು ಸ್ಪೀಕ್ಸ್ನ ಐದೂ ಸಂಚಿಕೆಗಳಲ್ಲಿ ಪ್ರಸ್ತುತಪಡಿಸಲ್ಪಟ್ಟ ಕಥೆಗಳೆಲ್ಲವೂ ವಿಭಿನ್ನ ಪ್ರಯೋಗಶೀಲತೆಯೊಂದಿಗೆ ಗುರುತಿಸಿಕೊಂಡಿದ್ದವು ಎಂದರು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸ್ಪೀಕ್ಸ್ ವೇದಿಕೆಯು ಹೊಸ ಪ್ರತಿಭೆಗಳಿಗೆ ಸ್ಪೂರ್ತಿ ನೀಡುತ್ತದೆ ಎಂದರು.

ವಿಭಾಗದ ಮುಖ್ಯಸ್ಥ ಡಾ.ಹಂಪೇಶ್ ಕೆ.ಎಸ್. ಮಾತನಾಡಿ ವಿಭಾಗದ ಪ್ರಯೋಗಶೀಲ ಹೆಜ್ಜೆಗಳಲ್ಲಿ ಸ್ಪೀಕ್ಸ್ ವಿನೂತನವಾದುದು ಎಂದರು. ಸ್ಪೀಕ್ಸ್ನ ಸಂಚಾಲಕಿ, ಸಹಾಯಕ ಪ್ರಾಧ್ಯಾಪಕಿ ಡಾ.ಗೀತಾ ಎ.ಜೆ ಅವರು ಸ್ಪೀಕ್ಸ್ ಧ್ಯೇಯೋದ್ದೇಶಗಳನ್ನು ವಿವರಿಸಿದರು. ಎಸ್.ಡಿ.ಎಂ ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಸೌಮ್ಯ ಬಿ.ಪಿ, ಪತ್ರಿಕೋದ್ಯಮ ಪದವಿ ವಿಭಾಗದ ಮುಖ್ಯಸ್ಥ ಸುನೀಲ್ ಹೆಗ್ಡೆ, ವಿಭಾಗದ ನಿಕಟಪೂರ್ವ ಮುಖ್ಯಸ್ಥ ಡಾ.ಭಾಸ್ಕರ್ ಹೆಗಡೆ ಉಪಸ್ಥಿತರಿದ್ದರು.

Related posts

ಮಡಂತ್ಯಾರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಸಹಾಯಧನ ವಿತರಣೆ

Suddi Udaya

ಸಹ ಪ್ರಾಧ್ಯಾಪಕಿ ಹೇಮಲತಾ ಅವರಿಗೆ ಅಣ್ಣಾಮಲೈ ವಿವಿಯಿಂದ ಡಾಕ್ಟರೇಟ್‌ ಪದವಿ

Suddi Udaya

ಸುದ್ದಿ ಉದಯ ಫಲಶ್ರುತಿ: ಇಂದಬೆಟ್ಟು ಕಜೆ ಪಿಲಪ್ಪಾಡಿಯಲ್ಲಿ ಅರಣ್ಯ ಇಲಾಖೆಯಿಂದ ಬೋನು ಅಳವಡಿಕೆ

Suddi Udaya

ಓಡಿಲ್ನಾಳ ಕಿರಾತ ಮೂರ್ತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ನಾಗರ ಪಂಚಮಿ ಪ್ರಯುಕ್ತ ನಾಗದೇವರಿಗೆ ತoಬಿಲ ಸೇವೆ

Suddi Udaya

ಕುತ್ಲೂರು: ಅಕ್ರಮ ಗೋಮಾಂಸ ಸಾಗಾಟ : ಇಬ್ಬರು ಆರೋಪಿಗಳು ಪೊಲೀಸರ ವಶ

Suddi Udaya

ಫೆ 16: ಶಿರ್ಲಾಲು ಶ್ರೀ ಮಹಾಲಿಂಗೇಶ್ವರ ಸನ್ನಿಧಿಯಲ್ಲಿ ಜಾತ್ರೋತ್ಸವ,ಫೆ 19 ಭೈರವಕಲ್ಲಿನ ಪುರುಷರಾಯ ಜಾತ್ರೆ

Suddi Udaya
error: Content is protected !!