March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ಚಾಮುಂಡೇಶ್ವರಿ ಯುವಕ ಮಂಡಲ, ಶ್ರೀ ಕ್ಷೇತ್ರ ಮುಂಡೂರು ಪ್ರಾಯೋಜಕತ್ವದಲ್ಲಿ ಮೈರೊಳ್ತಡ್ಕ ವಿವೇಕಾನಂದನಗರದಲ್ಲಿ ನೂತನ ಬಸ್ ತಂಗುದಾಣ ಲೋಕಾರ್ಪಣೆ

ಬಂದಾರು : ಚಾಮುಂಡೇಶ್ವರಿ ಯುವಕ ಮಂಡಲ , ಶ್ರೀ ಕ್ಷೇತ್ರ ಮುಂಡೂರು ಇದರ ಪ್ರಾಯೋಜಕತ್ವದಲ್ಲಿ ಬಂದಾರು ಗ್ರಾಮದ ಮೈರೋಳ್ತಡ್ಕದ ವಿವೇಕಾನಂದನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಬಸ್ ತಂಗುದಾಣ ಮಾ. 17 ರoದು ಲೋಕಾರ್ಪಣೆಗೊಂಡಿತು.

ಪ್ರಗತಿಪರ ಕೃಷಿಕರು ಕೊಡುಗೈ ದಾನಿ ಶ್ರೀಪತಿ ಭಟ್ ಮುಂಡೂರು ಇವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರ ಮುಂಡೂರು ಧರ್ಮದರ್ಶಿಗಳಾದ ಆನಂದ ಗೌಡ, ಮೈರೋಳ್ತಡ್ಕ ಶಿವಶಕ್ತಿ ಜನರಲ್ ಸ್ಟೋರ್ ಮಾಲಕರಾದ ಗುರುಪ್ರಸಾದ್ ಕುರಾಯ, ಶ್ರೀ ಚಾಮುಂಡೇಶ್ವರಿ ಯುವಕ ಮಂಡಲ ಅಧ್ಯಕ್ಷರಾದ ಅಶ್ವಥ್ ಗೌಡ, ಕಾರ್ಯದರ್ಶಿ ಉದಯ ಮಿತ್ಯೋಡಿ, ಊರಿನ ಹಿರಿಯರು, ಪ್ರಮುಖರು ಹಾಗೂ ಪದಾಧಿಕಾರಿಗಳು, ಸರ್ವ ಸದಸ್ಯರು, ಗ್ರಾಮಸ್ಥರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ರಾಮಫಲ ಗಿಡ ವಿತರಣೆ ಮಾಡಲಾಯಿತು ಹಾಗೂ ನೂತನ ಬಸ್ ನಿಲ್ದಾಣದ ಬಳಿ ಗಿಡ ನೆಡುವ ಮೂಲಕ ಹಾಗೂ ಬಸ್ ನಿಲ್ದಾಣ ಸುತ್ತ ಪರಿಸರ ಸoರಕ್ಷಣೆಯ ಸಂದೇಶ ಸಾರುವ ಚಿತ್ರಣ ಅಳವಡಿಸಲಾಗಿದೆ.

Related posts

ಹೊಸಪಟ್ಣ ದೊಡ್ಯಾರು ಮನೆಯ ಶ್ರೀಮತಿ ಸುಂದರಿ ನಿಧನ

Suddi Udaya

ನಿಡಿಗಲ್-ಪಜಿರಡ್ಕ ಕಾಂಕ್ರೀಟ್ ರಸ್ತೆಯಲ್ಲಿ ಕುಸಿತ ಭೀತಿ

Suddi Udaya

ಮಿತ್ತಬಾಗಿಲು ಗ್ರಾ.ಪಂ. ಅಧ್ಯಕ್ಷರಾಗಿ ವಿನಯಚಂದ್ರ , ಉಪಾಧ್ಯಕ್ಷರಾಗಿ ವಿಜಯಲಕ್ಷ್ಮೀ ಕೆ. ಆಯ್ಕೆ

Suddi Udaya

ದೆಹಲಿಯಲ್ಲಿ ಕೇಂದ್ರ ಸರ್ಕಾರದಗ್ರಾಮೀಣಾಭಿವೃದ್ಧಿ ಸಚಿವಾಲಯ ಮತ್ತು ನೇಶನಲ್ ಅಕಾಡೆಮಿ ಆಫ್ ರುಡ್‌ಸೆಟಿ ಮಧ್ಯೆ ಒಪ್ಪಂದ ಪತ್ರಕ್ಕೆ ಸಹಿ

Suddi Udaya

ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಖಂಡಿಸಿ ಮಾಜಿ ಡಿಸಿಎಂ ಈಶ್ವರಪ್ಪ ನೇತೃತ್ವದಲ್ಲಿ ಧರ್ಮ ರಕ್ಷಾ ಜಾಥಾ

Suddi Udaya

ಬಟ್ಲಡ್ಕ ಜುಮಾ ಮಸೀದಿಯ ಆಡಳಿತ ಸಮಿತಿಯ ಸದಸ್ಯರಾದ ಅಬ್ದುಲ್ ಖಾದರ್, ಫಾರೂಕ್ ರಿಗೆ ಬಟ್ಲಡ್ಕ ಜಮಾಅತ್ ವತಿಯಿಂದ ಸನ್ಮಾನ

Suddi Udaya
error: Content is protected !!