March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿವರದಿ

ವನ್ಯಜೀವಿ ವಿಭಾಗದ ಅರಣ್ಯದಲ್ಲಿ ಹತೋಟಿಗೆ ಬಂದ ಬೆಂಕಿ

ಬೆಳ್ತಂಗಡಿ: ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ವನ್ಯಜೀವಿ ವಿಭಾಗದಲ್ಲಿ ಕಾಣಿಸಿಕೊಂಡಿದ್ದ ಬೆಂಕಿ, ಹತೋಟಿಗೆ ಬಂದಿದ್ದು ಕಾಡ್ಗಿಚ್ಚಿನ ಭಯ ದೂರವಾಗಿದೆ.
ಮಾ.16 ಶನಿವಾರ ಸಂಜೆಯ ಹೊತ್ತಿಗೆ ಕುದುರೆಮುಖ ಪೀಕ್ ಕಡೆಯಿಂದ ಆವರಿಸಿದ ಬೆಂಕಿ ನಾವೂರು ಗ್ರಾಮದ ತೊಳಲಿಯ ಏಳುಸುತ್ತು ವರೆಗೆ ವ್ಯಾಪಿಸಿತ್ತು.


ಭಾನುವಾರ ಬೆಳಿಗ್ಗೆ ಬೆಳ್ತಂಗಡಿ ಮತ್ತು ಕುದುರೆಮುಖ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಬೆಂಕಿಯನ್ನು ಹತೋಟಿಗೆ ತರುವ ಕಾರ್ಯಾಚರಣೆ ಆರಂಭಿಸಿದ್ದು ಸೋಮವಾರ ಸಂಜೆಯ ಹೊತ್ತಿಗೆ ಬೆಂಕಿ ಹತೋಟಿಗೆ ಬಂದಿದೆ. ಕುದುರೆಮುಖ ಕಡೆಯಿಂದ ಒಣಹುಲ್ಲಿಗೆ ಆವರಿಸಿದ ಬೆಂಕಿ ನಾವೂರು ತನಕವು ಬಂದಿದೆ. ಸುಮಾರು ಎರಡಾಳು ಎತ್ತರದ ಒಣಹುಲ್ಲಿಗೆ ಹಿಡಿಯುತ್ತಾ ಬಂದ ಬೆಂಕಿಯ ಕೆನ್ನಾಲಿಗೆ 10 ಕಿ.ಮೀ.ದೂರದವರೆಗೂ ಗೋಚರಿಸುತ್ತಿತ್ತು.
ಒಣ ಹುಲ್ಲಿಗೆ ಬೆಂಕಿ ಹಿಡಿದರೆ ವೇಗವಾಗಿ ಹರಡುತ್ತದೆ ಹಾಗೂ ಹೆಚ್ಚಾಗಿ ಹುಲ್ಲು ಇರುವ ಪ್ರದೇಶವನ್ನು ಮಾತ್ರ ಸುಡುತ್ತಾ ಮುಂದುವರಿಯುತ್ತದೆ. ಮಂದವಾಗಿ ಬೀಸುತ್ತಿದ್ದ ಗಾಳಿಯು ಬೆಂಕಿ ಹೆಚ್ಚು ಪ್ರಸರಿಸಲು ಕಾರಣವಾಗಿತ್ತು.
ಅರಣ್ಯ ಪ್ರವೇಶಿಸಿಲ್ಲ:
ಕೇವಲ ಒಣಹುಲ್ಲನ್ನು ಸುಟ್ಟ ಬೆಂಕಿ ಸಕಾಲಿಕ ಕಾರ್ಯಾಚರಣೆಯಿಂದ ಅರಣ್ಯವನ್ನು ಪ್ರವೇಶಿಸಿಲ್ಲ ಹಾಗೂ ಅರಣ್ಯ ಸಂಪತ್ತಿಗೆ ಯಾವುದೇ ರೀತಿ ಹಾನಿ ಉಂಟಾಗಿಲ್ಲ ಎಂದು ತಿಳಿದುಬಂದಿದೆ. ಭಾನುವಾರ ಸಂಜೆ ಕುದುರೆಮುಖ ವನ್ಯಜೀವಿ ವಿಭಾಗದ ಅರಣ್ಯ ಉಪ ಸಂರಕ್ಷಣಾಧಿಕಾರಿ ಶಿವರಾಮ ಬಾಬು ನಾವೂರು ಪ್ರದೇಶಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಕಾರ್ಯಾಚರಣೆಗೆ ಮಾರ್ಗದರ್ಶನ ನೀಡಿದ್ದರು.

Related posts

ಬೆಳ್ತಂಗಡಿ: ನಾಮಪತ್ರ ಹಿಂತೆಗೆದುಕೊಂಡ ಇಬ್ಬರು ಅಭ್ಯರ್ಥಿಗಳು

Suddi Udaya

ವೇಣೂರು ಶ್ರೀ ಗಣೇಶೋತ್ಸವ ಬೆಳ್ಳಿ ಹಬ್ಬ: ಎಕ್ಸೆಲ್ ಕಾಲೇಜು ಅಧ್ಯಕ್ಷರಾದ ಸುಮಂತ್ ಕುಮಾರ್ ಜೈನ್ ಅವರಿಂದ ಲಾಂಛನ ಅನಾವರಣ

Suddi Udaya

ಶಿಶಿಲ ಶ್ರೀ ಶಿಶಿಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ವೈಭವ; ಬೆಳ್ಳಿಯ ಕಲಶ ಸಮರ್ಪಣೆ

Suddi Udaya

ಧರ್ಮಸ್ಥಳ : ನಡುಗುಡ್ಡೆಕುಡುಮ ಶ್ರೀ ಟೈಗರ್ಸ್ ವತಿಯಿಂದ ಬಡ ಕುಟುಂಬಗಳಿಗೆ ಆರ್ಥಿಕ ಸಹಾಯಾರ್ಥ ಹಾಗೂ ವಿದ್ಯಾನಿಧಿ ವಿತರಣೆ

Suddi Udaya

ಗೇರುಕಟ್ಟೆ ಶ್ರೀ ನಾಗಬ್ರಹ್ಮ ಸ್ವಾಮಿ ಸೇವಾ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕ ಉತ್ಸವ

Suddi Udaya

ನಾರಾವಿ ಅಂತರ್ ಕಾಲೇಜು ವಾಣಿಜ್ಯ ಮತ್ತು ಸಾಂಸ್ಕೃತಿಕ ಸ್ಪರ್ಧೆ :ಪ್ರಸನ್ನ ಪಿಯು ಕಾಲೇಜಿಗೆ ಸಮಗ್ರ ಪ್ರಶಸ್ತಿ

Suddi Udaya
error: Content is protected !!