March 7, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿ

ಬೆಳ್ತಂಗಡಿ: ಅಪಘಾತ ಪ್ರಕರಣ: ಬಸ್ ಚಾಲಕನಿಗೆ ಶಿಕ್ಷೆ

ಬೆಳ್ತಂಗಡಿ: ಗರ್ಡಾಡಿ ಗ್ರಾಮದ ನಂದಿಬೆಟ್ಟ ಗುಂಡದ ಬಸ್ತಿ ಎಂಬಲ್ಲಿ 2 ವರ್ಷಗಳ ಹಿಂದೆ ಕೆಎಸ್‌ಆರ್ ಟಿಸಿ-ದ್ವಿ ಚಕ್ರ ವಾಹನದ ನಡುವೆ ಅಪಘಾತವಾಗಿ ದ್ವಿಚಕ್ರ ವಾಹನ ಸವಾರ ಮತ್ತು ಸಹಸವಾರ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಬಸ್ ಚಾಲಕನಿಗೆ ನ್ಯಾಯಾಲಯವು ಶಿಕ್ಷೆ ವಿಧಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಆರೋಪಿಯ ವಿರುದ್ದ ಅಂದಿನ ಸಿಪಿಐ (ಪ್ರಸ್ತುತ ಬಂಟ್ವಾಳ ಗ್ರಾ.ಠಾಣೆ)ಯಲ್ಲಿದ್ದ ಶಿವಕುಮಾರ್ ಬಿ. ಪ್ರಕರಣದ ತನಿಖೆಯನ್ನು ಮಾಡಿ, ಆರೋಪಿ ಕೆಎಸ್‌ಆರ್‌ಟಿಸಿ ಚಾಲಕ ವಿಶ್ವನಾಥ ಬಾಲ್ಕಿ ಅವರ ವಿರುದ್ದ ದೋಷರೋಪಣ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಪ್ರಕರಣಕ್ಕೆ ಸಂಬಂಧಿಸಿ ಬೆಳ್ತಂಗಡಿ ಮಾನ್ಯ ಪ್ರಧಾನ ಸಿ.ಜೆ. ಮತ್ತು ಜೆ.ಎಂ.ಎಫ್.ಸಿ. ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆರೋಪಿಗೆ ಕಲಂ 279 ಐಪಿಸಿಗೆ 3 ತಿಂಗಳು ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ ಜೈಲು ಶಿಕ್ಷೆ ಮತ್ತು ಕಲಂ 304(ಎ) ಐಪಿಸಿಗೆ 2 ವರ್ಷ ಸೆರೆವಾಸ ಮತ್ತು 1,000 ರೂ. ದಂಡ, ದಂಡ ಕಟ್ಟಲು ತಪ್ಪಿದಲ್ಲಿ 1 ತಿಂಗಳ ಸೆರೆವಾಸದ ಶಿಕ್ಷೆ ವಿಧಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ;
ವೇಣೂರಿನ ಅಂಗರಕರಿಯ ಎಂಬಲ್ಲಿ ಸ್ವಂತ ಸಹೋದರಿಯ ಪತಿಯ ತಮ್ಮ (ಬಾವ) ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ ಹಿನ್ನೆಲೆ ಉಪ್ಪಿನಂಗಡಿ ಸಮೀಪದ ಹಿರೆಬಂಡಾಡಿ ನಿವಾಸಿ, ನಿವೃತ ಶಿಕ್ಷಕ ದಿ| ಮರ್ಹೂಮ್ ಅಬ್ದುರ್ರಝಾಕ್ ಅವರ ಪುತ್ರರಾದ ಹಬ್ಬ ಸಿರಾಜ್ (30) ಮತ್ತು ಕುತುಬುದ್ದೀನ್ ಸಾದಿಕ್ (33) ಅವರು ಮರಣದ ಮನೆಗೆ ಹೋಗಿ ವಾಪಸಾಗುತ್ತಿದ್ದರು. ಈ ವೇಳೆ ಗುರುವಾಯನಕೆರೆ ಕಡೆಯಿಂದ ವೇಣೂರು ಕಡೆಗೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಸ್ಕೂಟರ್‌ನಲ್ಲಿದ್ದ ಸವಾರರ ಮೇಲೆ ಎರಗಿತ್ತು. ಘಟನೆಯಲ್ಲಿ ಸವಾರರಿಬ್ಬರು ಬಸ್‌ನಡಿ ಸಿಲುಕಿದ್ದು, ಕುತುಬುದ್ದೀನ್ ಸಾಧೀಕ್ ಗಂಭೀರ ಗಾಯದಿಂದ ಆಸ್ಪತ್ರೆಯಲ್ಲಿ ಮೃತಪಟ್ಟರೆ, ಹಮ್ಮಬ್ಬ ಸಿರಾಜುದ್ದೀನ್ ಸ್ಥಳದಲ್ಲೇ ಮೃತಪಟ್ಟಿದರು.

Related posts

ಜು.5: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ

Suddi Udaya

ಅಪಘಾತದಲ್ಲಿ ನಿಧನರಾದ ನಾವೂರು ಸ.ಹಿ.ಪ್ರಾ. ಶಾಲಾ ವಿದ್ಯಾರ್ಥಿ ಶಾಝಿನ್ ರವರಿಗೆ ಶ್ರದ್ಧಾಂಜಲಿ

Suddi Udaya

ಕಕ್ಯಪದವು: ಎಲ್.ಸಿ.ಆರ್ ಇಂಡಿಯನ್ ವಿದ್ಯಾಸಂಸ್ಥೆಗೆ ಶೇ. 100 ಫಲಿತಾಂಶ

Suddi Udaya

ಬೆಳ್ತಂಗಡಿ ಮಂಡಲ ಮಹಿಳಾ ಮೋರ್ಚಾದ ವತಿಯಿಂದ ಮಡoತ್ಯಾರು ನಗರದಲ್ಲಿ ಅಂಗಡಿ ಮುoಗಟ್ಟುಗಳಿಗೆ ಭೇಟಿ ನೀಡಿ ಮತಯಾಚನೆ

Suddi Udaya

ಪುಂಜಾಲಕಟ್ಟೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಘಟಕದ ವಾರ್ಷಿಕೋತ್ಸವ, ಸನ್ಮಾನ

Suddi Udaya

ಜೆಸಿಐ ಬೆಳ್ತಂಗಡಿ ಮಂಜುಶ್ರೀಯ ಬೇಸಿಗೆ ಶಿಬಿರ ಯಶಸ್ವಿ ಸಂಪನ್ನ

Suddi Udaya
error: Content is protected !!