ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆ

ಕಳೆಂಜ: ಇಲ್ಲಿಯ ಕಳೆಂಜ ಗ್ರಾಮದ ಕಾಯ೯ತ್ತಡ್ಕದಲ್ಲಿ ತಾಯಿ ಪುಟ್ಟ ಮಗುವಿನೊಂದಿಗೆ ನಾಪತ್ತೆಯಾದ ಘಟನೆ ಮಾ.23ರಂದು ವರದಿಯಾಗಿದೆ.

ಕಳೆಂಜ ಗ್ರಾಮದ ಕಾಯ೯ತ್ತಡ್ಕ ನಿವಾಸಿ ವೆಂಕಪ್ಪ ಗೌಡ ಅವರ ಪತ್ನಿ ಜಯಶ್ರೀ (29ವ) ಹಾಗೂ ಅವರ ಪುತ್ರಿ ರುಷಿಕಾ (9ತಿಂಗಳು) ನಾಪತ್ತೆಯಾದವರು.

ಮಾ.22ರಂದು ರಾತ್ರಿ ವೆಂಕಪ್ಪ ಗೌಡ ರವರ ಪತ್ನಿ ಶ್ರೀಮತಿ ಜಯಶ್ರೀ ಮನೆಯ ರೂಮಿನಲ್ಲಿ ತನ್ನ ಇಬ್ಬರು ಮಕ್ಕಳೊಂದಿಗೆ ಮಲಗಿದ್ದು, ವೆಂಕಪ್ಪ ಗೌಡ ಅವರು ಮನೆಯ ಹಾಲ್ ನಲ್ಲಿ ಮಲಗಿದ್ದರು. ಮರುದಿನ ಮಾ. 23 ರಂದು ಬೆಳಿಗೆ, 7:30ಕ್ಕೆ ವೆಂಕಪ್ಪ ಗೌಡರು ಎದ್ದು ನೋಡಿದಾಗ ಮನೆಯಲ್ಲಿ ಪತ್ನಿ ಜಯಶ್ರೀ ಹಾಗೂ ಆಕೆಯ 9 ತಿಂಗಳ ಮಗು ರುಷಿಕಾಳೊಂದಿಗೆ ಮನೆಯಿಂದ ನಾಪತ್ತೆಯಾಗಿದ್ದರೆನ್ನಲಾಗಿದೆ.

ಈ ಬಗ್ಗೆ ವೆಂಕಪ್ಪ ಗೌಡ ಅವರು ನೀಡಿದ ದೂರಿನಂತೆ ಧಮ೯ಸ್ಥಳ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ: 20/2024ರಂತೆ ಪ್ರಕರಣ ದಾಖಲಾಗಿದೆ.

Related posts

ವಲಯ ಮಟ್ಟದ ಪ್ರತಿಭಾ ಕಾರಂಜಿ: ಇಂದಬೆಟ್ಟು ಸ.ಹಿ.ಪ್ರಾ. ಶಾಲೆಗೆ ಹಲವಾರು ಪ್ರಶಸ್ತಿ

Suddi Udaya

ಬೆಳ್ತಂಗಡಿ ತಾಲೂಕು ವಿಕಲಚೇತನರ ಪುನರ್ವಸತಿ ಕಾರ್ಯಕರ್ತರ ಮಾಸಿಕ ಪ್ರಗತಿ ಪರಿಶೀಲನಾ ಸಭೆ

Suddi Udaya

ಉಜಿರೆ : ಅತ್ತಾಜೆಯಲ್ಲಿರುವ ಎಮ್. ಆರ್. ಎಫ್ ಘಟಕದಲ್ಲಿ ಒಣ ಕಸ ವಿಲೇವಾರಿ ಕುರಿತು ಅರಸಿನಮಕ್ಕಿ, ಶಿಬಾಜೆ ಗ್ರಾಮ ಪಂಚಾಯತ್ ನಲ್ಲಿ ಮಾಹಿತಿ ಕಾರ್ಯ

Suddi Udaya

ಗುರುವಾಯನಕೆರೆ: ಮನೆ ಹಾಗೂ ಅಂಗಡಿಗಳಿಗೆ ನುಗ್ಗಿದ ನೀರು: ಕುವೆಟ್ಟು ಗ್ರಾ.ಪಂ. ನಿಂದ ಮೋರಿ ಅಳವಡಿಕೆ, ಚರಂಡಿ ದುರಸ್ತಿ, ಪಂ.ಸದಸ್ಯರ ಮೂಲಕ ಸಮಸ್ಯೆಗೆ ಪರಿಹಾರ

Suddi Udaya

ಬೆಳ್ತಂಗಡಿ: “ಆರಿದ್ರಾ ಮಳೆ ಆರ್ಭಟ”- ಮೈದುಂಬಿ ಹರಿದ ನದಿಗಳು-ಶಿಶಿಲೇಶ್ವರ ದೇವಾಲಯಕ್ಕೆ ಜಲದಿಗ್ಬಂದನ

Suddi Udaya

ಉಜಿರೆ: ಅಜಿತ್ ನಗರ ನಿವಾಸಿ ವಿಲ್ಫ್ರೆಡ್ ಡಿಸೋಜಾ ನಿಧನ

Suddi Udaya
error: Content is protected !!